ಶಾಮ್ಲಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವರದಕ್ಷಿಣೆ ರೂಪದಲ್ಲಿ ಲಕ್ಷಾಂತರ ರೂ ನಗದು, ಆಭರಣ ಹಾಗೂ ದುರಾರಿ ಕಾರು ನೀಡಲಾಗಿದೆ. ಇದರ ಜೊತೆಗೆ ಅದ್ಧೂರಿಯಾಗಿ ಮದುವೆ ಮಾಡಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಹಾಗೂ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭ ಮಾಡಿದ್ದಾರೆ. ಕೊರೊನಾ ವೈರಸ್ನಿಂದ ದೇಶದ ಅನೇಕ ಜನರಿಗೆ ಒಂದು ಹೊತ್ತಿನ ಊಟ ಸಹ ಸಿಗ್ತಿಲ್ಲ. ಇದರ ಮಧ್ಯೆ ಮದುವೆ ಸಮಾರಂಭವೊಂದರಲ್ಲಿ ವರನಿಗೆ ಲಕ್ಷಾಂತರ ರೂ. ಹಣ, ಚಿನ್ನ-ಬೆಳ್ಳಿ ಹಾಗೂ ಕಾರು ನೀಡಲಾಗಿದೆ.
ವಧುವಿನ ಕಡೆಯವರು ವರನಿಗೆ ವರದಕ್ಷಿಣೆ ರೂಪದಲ್ಲಿ ಕಂತೆ ಕಂತೆ ನೋಟು, ಆಭರಣ, ದುಬಾರಿ ಕಾರು ನೀಡಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ. ಸದ್ಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿರಿ: JIOPHONE NEXT... ಗಣೇಶ ಚತುರ್ಥಿ ದಿನ ಮಾರುಕಟ್ಟೆಗೆ ಲಗ್ಗೆ ಎಂದ ಅಂಬಾನಿ