ETV Bharat / bharat

ದೇಶದಲ್ಲೀಗ ರೂಪಾಂತರ ವೈರಸ್​​​ ಕಾಟ: ತೀವ್ರತೆಯ ಎಚ್ಚರಿಕೆ ಕೊಟ್ಟ ಎನ್‌ಸಿಡಿಸಿ

ಸರ್ಕಾರದ ಅಂಕಿ - ಅಂಶಗಳು ನೀಡಿರುವ ಮಾಹಿತಿಯಂತೆ ಭಾರತದಾದ್ಯಂತ 19 ರಾಜ್ಯಗಳಲ್ಲಿ ಒಟ್ಟು 1527 ಬಿ 1.67 ವಂಶಾವಳಿಗಳು ಕಂಡು ಬಂದಿವೆ. 761 ರೂಪಾಂತರ ವೈರಸ್​ ಪತ್ತೆ ಆಗುವ ಮೂಲಕ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಇಲ್ಲಿ 146 ರೂಪಾಂತರ ವೈರಸ್​​​​​​ ಪ್ರಕರಣಗಳು ಹಾಗೂ ದೆಹಲಿಯಲ್ಲಿ 107 ಪ್ರಕರಣಗಳು ಪತ್ತೆಯಾಗಿವೆ.

author img

By

Published : May 5, 2021, 10:36 PM IST

ನವದೆಹಲಿ: ಭಾರತದಾದ್ಯಂತ ಕಳೆದ ಒಂದೂವರೆ ತಿಂಗಳಲ್ಲಿ ಕೋವಿಡ್ 19 ಪ್ರಕರಣಗಳ ಪ್ರಸ್ತುತ ಏರಿಕೆಗೆ ಡಬಲ್ ವೇರಿಯಂಟ್ (ಎಲ್ 452 ಆರ್ + ಇ 484 ಕ್ಯೂ) ಎಂಬ ಎಸ್ಎರ್​ಎಸ್​ ಕೋವಿ -2 ರ ಬಿ 1.66 ವಂಶಾವಳಿಯು ಕಾರಣವೆಂದು ಹೇಳಲಾಗುತ್ತಿದೆ.

SARS CoV-2 ನ B1.617 ವಂಶಾವಳಿಯ ವೈರಸ್​ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ ಎಂದು ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಡಾ.ಸುರ್ಜೀತ್ ಕುಮಾರ್ ಸಿಂಗ್ ಬುಧವಾರ ಈ ಹೇಳಿಕೆ ನೀಡಿದ್ದಾರೆ. "ಕೆಲವು ರಾಜ್ಯಗಳಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಕಂಡು ಬರುತ್ತಿರುವ ಪ್ರಕರಣಗಳಲ್ಲಿನ ಪ್ರಸ್ತುತ ಉಲ್ಬಣವು SARS CoV-2 ನ B1.617 ವಂಶಾವಳಿ ಏರಿಕೆಯೊಂದಿಗೆ ಪರಸ್ಪರ ಸಂಬಂಧವನ್ನು ತೋರಿಸುತ್ತಿದೆ" ಎಂದು ಡಾ ಸಿಂಗ್ ಹೇಳಿದರು.

ಕಳೆದ ಒಂದೂವರೆ ತಿಂಗಳಲ್ಲಿ SARS CoV-2 (ಯುಕೆ ರೂಪಾಂತರ) ದ B1.1.7 ವಂಶಾವಳಿಯು ದೇಶಾದ್ಯಂತ ಅನುಪಾತದಲ್ಲಿ ಕ್ಷೀಣಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರದ ಅಂಕಿ - ಅಂಶಗಳು ನೀಡಿರುವ ಮಾಹಿತಿಯಂತೆ ಭಾರತದಾದ್ಯಂತ 19 ರಾಜ್ಯಗಳಲ್ಲಿ ಒಟ್ಟು 1527 ಬಿ 1.67 ವಂಶಾವಳಿಗಳು ಕಂಡು ಬಂದಿವೆ. 761 ರೂಪಾಂತರ ವೈರಸ್​ ಪತ್ತೆ ಆಗುವ ಮೂಲಕ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಇಲ್ಲಿ 146 ರೂಪಾಂತರ ವೈರಸ್​​​​​​ ಪ್ರಕರಣಗಳು ಹಾಗೂ ದೆಹಲಿಯಲ್ಲಿ 107 ಪ್ರಕರಣಗಳು ಪತ್ತೆಯಾಗಿವೆ.

ಇಲ್ಲಿಯವರೆಗೆ, ಭಾರತದಾದ್ಯಂತ 1,877 ಯುಕೆ ರೂಪಾಂತರಗಳು (ಬಿ .1.1.7) ಕಂಡುಬಂದಿವೆ. ಈ ರೂಪಾಂತರವು ಹೆಚ್ಚಾಗಿ ಪಂಜಾಬ್ (9,516), ದೆಹಲಿ (482) ಮತ್ತು ತೆಲಂಗಾಣ (192) ಪ್ರಕರಣಗಳು ಕಂಡುಬಂದಿದೆ. ಅಂದ ಹಾಗೆ "ಬಿ .1.1.7 ಶೇಕಡಾ 50 ರಷ್ಟು ಪ್ರಸರಣ ಮತ್ತು ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಡಾ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದಾದ್ಯಂತ ಒಟ್ಟು 127 ದಕ್ಷಿಣ ಆಫ್ರಿಕಾದ ರೂಪಾಂತರಗಳು (ಬಿ .1.351) ಕಂಡುಬಂದಿವೆ. ಇದು ಶೇಕಡಾ 50 ರಷ್ಟು ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಕಾಯ ತಟಸ್ಥೀಕರಣವನ್ನು ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಸಿಂಗ್​ ಹೇಳಿದ್ದಾರೆ.

"ವಿದೇಶಿಗಳಿಂದ ಬರುವ ಪ್ರಯಾಣಿಕರ ಜೀನೋಮಿಕ್ ಸೀಕ್ವೆನ್ಸಿಂಗ್ ಮತ್ತು ಸಮುದಾಯದ ಮಾದರಿಗಳಿಂದ ಭಾರತೀಯ - ಎಸ್ಎಆರ್ಎಸ್-ಕೋವಿ -2 ಜೀನೋಮಿಕ್ ಕನ್ಸೋರ್ಟಿಯಂ (ಇನ್ಸಾಕೋಗ್) ಇವುಗಳನ್ನು ಪತ್ತೆ ಮಾಡಿದೆ" ಎಂದು ಡಾ ಸಿಂಗ್ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.