ETV Bharat / bharat

ವೀಕ್ಷಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಮಹಾಭಾರತ - ರಾಮಾಯಣ ಧಾರಾವಾಹಿಗಳು - 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ರಾಮಾಯಣ ಮತ್ತು ಮಹಾಭಾರತ ಪ್ರಸಾರದಿಂದ ಅಗ್ರಸ್ಥಾನ ಅನುರಾಗ್ ಸಿಂಗ್ ಠಾಕೂರ್

ದೂರದರ್ಶನ 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಧಾರಾವಾಹಿಗಳನ್ನು ಪ್ರಸಾರ ಮಾಡಿದಾಗ ಅತಿ ಹೆಚ್ಚು ದೂರದರ್ಶನ ವೀಕ್ಷಕರನ್ನು ದಾಖಲಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ, ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಗುರುವಾರ ರಾಜ್ಯಸಭೆಗೆ ತಿಳಿಸಿದರು.

ದೂರದರ್ಶನ ಮುದ್ರೆ
ದೂರದರ್ಶನ ಮುದ್ರೆ
author img

By

Published : Feb 10, 2022, 5:48 PM IST

ನವದೆಹಲಿ: ದೂರದರ್ಶನ 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಧಾರಾವಾಹಿಗಳನ್ನು ಪ್ರಸಾರ ಮಾಡಿದಾಗ ಅತಿ ಹೆಚ್ಚು ದೂರದರ್ಶನ ವೀಕ್ಷಕರನ್ನು ದಾಖಲಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ, ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಗುರುವಾರ ರಾಜ್ಯಸಭೆಗೆ ತಿಳಿಸಿದರು.

ರಾಜ್ಯ ಸಚಿವಾಲಯಕ್ಕೆ ದೊರೆತ ಅಂಕಿ - ಅಂಶಗಳ ಪ್ರಕಾರ, ದೂರದರ್ಶನ 2020 ರಲ್ಲಿ 747 ಮಿಲಿಯನ್ ವೀಕ್ಷಣೆಯನ್ನು ದಾಖಲಿಸಿದೆ. ಅವರು 36ರಲ್ಲಿ 22ರ ಚಂದಾದಾರರಾಗಿರುವ ಸ್ಟ್ಯಾಂಡರ್ಡ್ ಡೆಫಿನಿಷನ್ (SD) ಡಿಡಿ ಚಾನಲ್‌ಗಳ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಡೇಟಾದ ಅಂಕಿ - ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದರು. 2020 ರಲ್ಲಿ ಲಾಕ್‌ಡೌನ್​ ಅವಧಿಯಲ್ಲಿ ಪ್ರಸಾರಗೊಂಡ ರಾಮಾಯಣ ಮತ್ತು ಮಹಾಭಾರತದಂತಹ ಸಾಂಪ್ರದಾಯಿಕ ಧಾರಾವಾಹಿಗಳಿಂದ ದೂರದರ್ಶನ ಹೆಚ್ಚು ವೀಕ್ಷಕರನ್ನು ಗಳಿಸಿದೆ ಎಂದರು.

ಗಣರಾಜ್ಯೋತ್ಸವದ ಪ್ರಸಾರದ ಸಂದರ್ಭದಲ್ಲಿ ದೂರದರ್ಶನದ ಯೂಟ್ಯೂಬ್ ನೆಟ್‌ವರ್ಕ್ ಟಿವಿ ನೆಟ್‌ವರ್ಕ್‌ಗಿಂತ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ. ಇದು ಬದಲಾದ ವೀಕ್ಷಕರ ಮಾದರಿಯ ಸಂಕೇತ. ದೂರದರ್ಶನದ ಯೂಟ್ಯೂಬ್ ನೆಟ್‌ವರ್ಕ್ 2.6 ಕೋಟಿ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಟೆಲಿವಿಷನ್ ನೆಟ್‌ವರ್ಕ್ 2.3 ಕೋಟಿ ವೀಕ್ಷಣೆಗಳನ್ನು ಗಳಿಸಿದೆ ಎಂದು ಅವರು ಹೇಳಿದರು.

ಬಾರ್ಕ್​ (BARC) ವರದಿ ಮಾಡಿರುವ ದೂರದರ್ಶನದ ವೀಕ್ಷಕರ ಸಂಖ್ಯೆಯಿಂದಲೂ ಯೂಟ್ಯೂಬ್ ವೇದಿಕೆಯಲ್ಲಿ ದೂರದರ್ಶನದ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ. ದೇಶದಾದ್ಯಂತ 180ಕ್ಕೂ ಹೆಚ್ಚು ಚಾನೆಲ್‌ಗಳು ಗಣರಾಜ್ಯೋತ್ಸವದ ದೂರದರ್ಶನ ದೃಶ್ಯಗಳನ್ನು ಬೆಳಗ್ಗೆ 9.30 ರಿಂದ ಮಧ್ಯಾಹ್ನದವರೆಗೆ ಪ್ರಸಾರ ಮಾಡಿದೆ ಇದು ಒಟ್ಟು 3.2 ಶತಕೋಟಿ ದೂರದರ್ಶನ ವೀಕ್ಷಣಾ ನಿಮಿಷವಾಗಿದೆ ಎಂದು ಠಾಕೂರ್ ಹೇಳಿದರು.

ಆದರೆ, ಕಳೆದ ಮೂರು ವರ್ಷಗಳಲ್ಲಿ ದೂರದರ್ಶನ ಗಳಿಸಿದ ವಾಣಿಜ್ಯ ಆದಾಯದಲ್ಲಿ ಇಳಿಕೆಯಾಗಿದೆ. ಅನುರಾಗ್ ಸಿಂಗ್ ಠಾಕೂರ್ ನೀಡಿದ ಅಂಕಿ- ಅಂಶಗಳ ಪ್ರಕಾರ, ದೂರದರ್ಶನ 2018-19ರಲ್ಲಿ ರೂ.623.84 ಕೋಟಿ ರೂ. ಗಳಿಸಿದ್ದು, 2019-20ರಲ್ಲಿ ರೂ.348.83 ಕೋಟಿಗೆ ಇಳಿದಿದೆ. ಇದು 2020-21ರಲ್ಲಿ ರೂ.272.61 ಕೋಟಿ ರೂ. ಕಡಿಮೆಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.