ETV Bharat / bharat

ಕೋವಿಡ್ ಹೊಸ ತಳಿ ಹೆದರಿಕೆ ಬೇಡ ಅಂತಾರೆ ಐಐಟಿ ರೂರ್ಕಿ ವಿಜ್ಞಾನಿಗಳು: ಯಾಕೆ ಗೊತ್ತಾ? - ಕೋವಿಡ್ ಲಸಿಕೆಗಳ ಸಂಶೋಧನೆ

ಐಐಟಿ ರೂರ್ಕಿಯ ವಿಜ್ಞಾನಿಗಳು ಕೋವಿಡ್-19 ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಮೂರು ಆಂಟಿವೈರಲ್ ಅಣುಗಳನ್ನು ಗುರುತಿಸಿದ್ದಾರೆ.

ಕೋವಿಡ್ ಹೊಸ ತಳಿ ಹೆದರಿಕೆ ಬೇಡ: ಐಐಟಿ ರೂರ್ಕಿ ವಿಜ್ಞಾನಿಗಳ ಅಭಯ
dont-panic-about-a-new-strain-of-covid-iit-roorkee-scientist
author img

By

Published : Nov 3, 2022, 2:09 PM IST

ನವದೆಹಲಿ: ಐಐಟಿ ರೂರ್ಕಿಯ ವಿಜ್ಞಾನಿಗಳು ಕೋವಿಡ್-19 ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಮೂರು ಆಂಟಿವೈರಲ್ ಅಣುಗಳನ್ನು ಗುರುತಿಸಿದ್ದಾರೆ. ಇವು ಚಿಕಿತ್ಸಾ ವಿನ್ಯಾಸಕ್ಕೆ ನೆರವಾಗಲಿದ್ದು, ಭವಿಷ್ಯದಲ್ಲಿ ಉದ್ಭವಿಸಬಹುದಾದ ಹೊಸ ರೂಪಾಂತರಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಕೋವಿಡ್ ಲಸಿಕೆಗಳ ಸಂಶೋಧನೆಯ ಸಮಯದಲ್ಲಿ ವಿಜ್ಞಾನಿಗಳು ವೈರಸ್ ಪ್ರೋಟೀನ್‌ಗಳ ಬಗ್ಗೆ ಸಾಕಷ್ಟು ಡೇಟಾ ಸಂಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಐಐಟಿ ರೂರ್ಕಿಯ ನಿರ್ದೇಶಕ ಕೆಕೆ ಪಂತ್, ಡ್ರಗ್ ರಿಪರ್ಪೋಸಿಂಗ್, ಕಂಪ್ಯೂಟೇಶನಲ್ ಮತ್ತು ಆಂಟಿವೈರಲ್ ಪ್ರಕ್ರಿಯೆಗಳ ಮೂಲಕ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಅಣುಗಳು ಕಂಡುಬಂದಿವೆ. ನ್ಯೂಕ್ಲಿಯೋಟೈಡ್ ಬೈಂಡಿಂಗ್ ಪಾಕೆಟ್ಸ್ ಎಂದು ಕರೆಯಲ್ಪಡುವ ಈ ಪ್ರೋಟೀನ್​​ಗಳು ವೈರಸ್ ಸಂತಾನೋತ್ಪತ್ತಿಗೆ ಕಾರಣವಾಗುವ ವೈರಸ್​ನ ಭಾಗಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ತಗ್ಗಿದ ಕೋವಿಡ್‌ ಆರ್ಭಟ; ಸಕ್ರಿಯ ಸೋಂಕು ಪ್ರಕರಣ 16 ಸಾವಿರಕ್ಕೆ ಇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.