ETV Bharat / bharat

ಗುಂಡಿನ ದಾಳಿ.. ಎದೆಗೆ ಎದೆಕೊಟ್ಟು ಮಾಲೀಕನ ಜೀವ ಉಳಿಸಿ ಪ್ರಾಣ ಬಿಟ್ಟಿತು ಶ್ವಾನ!

author img

By

Published : Jun 6, 2022, 2:57 PM IST

ಶ್ವಾನ ಮನುಷ್ಯನಿಗೆ ಅತ್ಯಂತ ಪ್ರೀತಿಯ ಪ್ರಾಣಿ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಶ್ವಾನಗಳು ಅತ್ಯಂತ ನಿಷ್ಠಾವಂತ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಇಂತಹದ್ದೇ ಪ್ರಕರಣವೊಂದು ಉತ್ತರಪ್ರದೇಶದ ಸುಲ್ತಾನ್​ಪುರದಲ್ಲಿ ಬೆಳಕಿಗೆ ಬಂದಿದೆ.

Loyal dog shot in Sultanpur  dog dies while trying to save the owner in Sultanpur  dog dies after being shot in Uttara Pradesh  ಸುಲ್ತಾನ್​ಪುರದಲ್ಲಿ ಸಾಕು ನಾಯಿ ಮೇಲೆ ಗುಂಡಿನ ದಾಳಿ  ಉತ್ತರಪ್ರದೇಶದಲ್ಲಿ ಮಾಲೀಕನ ಜೀವ ಉಳಿಸಿದ ಸಾಕು ಶ್ವಾನ  ಉತ್ತರಪ್ರದೇಶ ಸುದ್ದಿ
ಮಾಲೀಕನ ಮೇಲೆ ಗುಂಡಿನ ದಾಳಿ

ಸುಲ್ತಾನ್‌ಪುರ(ಉತ್ತರ ಪ್ರದೇಶ): ನಿಷ್ಠಾವಂತ ಶ್ವಾನವೊಂದು ತನ್ನ ಮಾಲೀಕನ ಜೀವ ಉಳಿಸಿದೆ. ಗಲಾಟೆವೊಂದರಲ್ಲಿ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದಾಗ ಶ್ವಾನ ಅಡ್ಡ ಬಂದು ತನ್ನ ಮಾಲೀಕನ ಜೀವ ಉಳಿಸಿ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಸುಲ್ತಾನ್​ಪುರ್​ ಜಿಲ್ಲೆಯ ವಿಕ್ವಜಿತ್‌ಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ವಿಶಾಲ್ ಶ್ರೀವಾಸ್ತವ್ ಅಲಿಯಾಸ್ ಶನಿ ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಗೋಶಾಲೆ ನಡೆಸುತ್ತಿದ್ದಾರೆ. ಭಾನುವಾರ ಗೋಶಾಲೆಯ ಆವರಣದಲ್ಲಿಯೇ ಹುಲ್ಲು ಇಡಲು ಕೊಟ್ಟಿಗೆ ನಿರ್ಮಿಸುತ್ತಿದ್ದರು. ಈ ವೇಳೆ ಪಕ್ಕದ ರಾಂಬರಣ್ ವರ್ಮಾ ಪಿಜಿ ಕಾಲೇಜಿನ ಮ್ಯಾನೇಜರ್ ಅನಿಲ್ ವರ್ಮಾ ತನ್ನ ಚಾಲಕನೊಂದಿಗೆ ಕೊಟ್ಟಿಗೆಯೊಳಗೆ ನುಗ್ಗಿದ್ದಾರೆ. ಬಳಿಕ ಕೊಟ್ಟಿಗೆ ನಿರ್ಮಾಣ ಮಾಡದಂತೆ ವಿಶಾಲ್​ಗೆ ಅನಿಲ್​ ಧಮ್ಕಿ ಹಾಕಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಕಲಹ ಉಂಟಾಗಿದೆ. ಇವರ ಜಗಳ ನೋಡು-ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಅನಿಲ್ ವರ್ಮಾ ತನ್ನ ಬಳಿ ಇರುವ ಪರವಾನಿಗೆ ಪಡೆದ ಗನ್​ನಿಂದ ವಿಶಾಲ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಓದಿ: ಪಕ್ಕದ ಮನೆ ಮುಂದೆ ಶೌಚ.. ಶ್ವಾನ ಹೊಡೆದು ಕೊಂದ ಶಿಕ್ಷಕ, ತಡೆಯಲು ಬಂದವರಿಗೆ ಗನ್​ನಿಂದ ಬೆದರಿಕೆ!

ವಿಶಾಲ್​ನ ಸಾಕು ನಾಯಿ ಮ್ಯಾಕ್ಸ್ ಕೂಡ ಅಲ್ಲಿತ್ತು. ಮಾಲೀಕನ ಮೇಲೆ ಗುಂಡಿನ ದಾಳಿ ನಡೆಯುತ್ತಿರುವುದನ್ನು ಕಂಡ ಮ್ಯಾಕ್ಸ್​ ಅಡ್ಡ ಬಂದಿದೆ. ಈ ವೇಳೆ ಮ್ಯಾಕ್ಸ್​ಗೆ ಗುಂಡು ತಗುಲಿದೆ. ಘಟನೆ ಬಳಿಕ ಅನಿಲ್ ವರ್ಮಾ ಸ್ಥಳದಿಂದ ಪರಾರಿಯಾಗಿದ್ದಾನೆ. ಇದಾದ ನಂತರ ವಿಶಾಲ್ ತನ್ನ ಸಹಚರರೊಂದಿಗೆ ಸಾಕು ನಾಯಿ ಮ್ಯಾಕ್ಸ್ ಅನ್ನು ಜಿಲ್ಲಾ ಪಶು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮ್ಯಾಕ್ಸ್​ನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದರು. ಬಳಿಕ ಕೆಲವು ಗಂಟೆಗಳ ನಂತರ ಶ್ವಾನ ಮ್ಯಾಕ್ಸ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯದಿಂದ ಶ್ವಾನ ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ.

ವಿಶಾಲ್​ ಶ್ರೀವಾಸ್ತವ್​ ನೀಡಿದ ದೂರಿನ ಮೇರೆಗೆ ಪಿ ಜಿ ಕಾಲೇಜಿನ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಆರೋಪಿಯನ್ನು ತನಿಖೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.