ಚಂಡೀಗಢ (ಹರಿಯಾಣ): ದೇಶೀಯ ಕೊರೊನಾ ಲಸಿಕೆಯಾದ 'ಕೊವಾಕ್ಸಿನ್'ನ ಕ್ಲಿನಿಕಲ್ ಪ್ರಯೋಗದ ಡೋಸ್ ಪಡೆದಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ನಿನ್ನೆ ಸೋಂಕು ತಗುಲಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ವೈದ್ಯರು ನೀಡಿದ್ದ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
-
मुझे कोवेक्सिन लगाने से पहले डॉक्टरों ने बता दिया था कि वेक्सिन दूसरी डोज 28 दिन के बाद लगने के 14 दिन बाद ही अन्टोबोडी बनेगी । पूरी एहतियात बरतने के बाद भी मैंकरना के काबू आगया । मेरा सिविल हस्पताल में इलाज हो रहा है ओर मैं ठीक महसूस कर रहा हूँ ।
— ANIL VIJ MINISTER HARYANA (@anilvijminister) December 6, 2020 " class="align-text-top noRightClick twitterSection" data="
">मुझे कोवेक्सिन लगाने से पहले डॉक्टरों ने बता दिया था कि वेक्सिन दूसरी डोज 28 दिन के बाद लगने के 14 दिन बाद ही अन्टोबोडी बनेगी । पूरी एहतियात बरतने के बाद भी मैंकरना के काबू आगया । मेरा सिविल हस्पताल में इलाज हो रहा है ओर मैं ठीक महसूस कर रहा हूँ ।
— ANIL VIJ MINISTER HARYANA (@anilvijminister) December 6, 2020मुझे कोवेक्सिन लगाने से पहले डॉक्टरों ने बता दिया था कि वेक्सिन दूसरी डोज 28 दिन के बाद लगने के 14 दिन बाद ही अन्टोबोडी बनेगी । पूरी एहतियात बरतने के बाद भी मैंकरना के काबू आगया । मेरा सिविल हस्पताल में इलाज हो रहा है ओर मैं ठीक महसूस कर रहा हूँ ।
— ANIL VIJ MINISTER HARYANA (@anilvijminister) December 6, 2020
"ಕೋವಾಕ್ಸಿನ್ನ ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು. ಎರಡನೇ ಡೋಸ್ ನೀಡಿದ 14 ದಿನಗಳ ಬಳಿಕ ದೇಹದಲ್ಲಿ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂದು ವೈದ್ಯರು ತಿಳಿಸಿದ್ದರು" ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ಸೋಂಕಿಗೆ ಒಳಗಾದೆ. ನಾನು ಅಂಬಾಲಾದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ನಾನು ಆರೋಗ್ಯವಾಗಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ಓದಿ: ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್
ಕೊವಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಹರಿಯಾಣದಲ್ಲಿ ಆರಂಭವಾದ ದಿನ (ನವೆಂಬರ್ 20)ದಂದು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲ ಲಸಿಕೆ ಪ್ರಯೋಗ ನನ್ನ ಮೇಲೆಯೇ ಆಗಲಿ ಎಂದು ಸ್ವಯಂಪ್ರೇರಿತವಾಗಿ ಮೊದಲ ಡೋಸ್ ಹಾಕಿಸಿಕೊಂಡಿದ್ದರು.
"ಕೋವಾಕ್ಸಿನ್ ಅನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಲಾಗಿದೆ. ಇದರ ಕ್ಲಿನಿಕಲ್ ಪ್ರಯೋಗಗಳು ಎರಡು-ಡೋಸ್ ವೇಳಾಪಟ್ಟಿಯನ್ನು ಆಧರಿಸಿವೆ. ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ 2ನೇ ಡೋಸ್ ನೀಡಲಾಗುತ್ತದೆ. ಲಸಿಕೆ ಪರಿಣಾಮಕಾರಿತ್ವವನ್ನು ಎರಡನೇ ಡೋಸ್ ನೀಡಿದ 14 ದಿನಗಳ ನಂತರ ನಿರ್ಧರಿಸಲಾಗುತ್ತದೆ" ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.