ETV Bharat / bharat

ಉಕ್ರೇನ್‌ ನಿರಾಶ್ರಿತ ಬಾಲಕಿಗೆ ಅಪೆಂಡಿಕ್ಸ್ ನೋವು: ಉಚಿತವಾಗಿ ಆಪರೇಷನ್ ಮಾಡಿ ಪ್ರಾಣ ಉಳಿಸಿದ ವೈದ್ಯರು - ಉತ್ತರಕಾಶಿಯಲ್ಲಿ ಆಶ್ರಯ ಪಡೆದಿದ್ದ ಉಕ್ರೇನ್ ಮಹಿಳೆಗೆ ರೆಡ್​​ಕ್ರಾಸ್ ತಂಡ ಸಹಾಯ

ಮಂಗಳವಾರ ರಾತ್ರಿ ಉಕ್ರೇನಿಯನ್ ಮಹಿಳೆಯ ಕಿರಿಯ ಮಗಳು ಅಭಯಾ ಇದ್ದಕ್ಕಿದ್ದಂತೆ ತನ್ನ ಹೊಟ್ಟೆಯಲ್ಲಿ ತೀವ್ರ ನೋವು ಅನುಭವಿಸಿದ್ದಾಳೆ. ಮಹಿಳೆಯ ಕುಟುಂಬದ ಬಹುತೇಕ ಸದಸ್ಯರು ವೈದ್ಯರಾಗಿದ್ದು, ಈ ಕುರಿತು ಉಕ್ರೇನ್​​ನಲ್ಲಿ ಮಾತುಕತೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ. ಆ ವೇಳೆ ಕಂಡು ಬಂದಿದ್ದೇ ಮಗುವಿಗೆ ಅಪೆಂಡಿಕ್ಸ್‌ ಆಗಿದೆ ಎಂಬುದು.

ಉಕ್ರೇನ್‌ ನಿರಾಶ್ರಿತ ಬಾಲಕಿಗೆ ಅಪೆಂಡಿಕ್ಸ್ ನೋವು

author img

By

Published : May 20, 2022, 9:16 PM IST

ಉತ್ತರಕಾಶಿ: ಉತ್ತರಕಾಶಿಯಲ್ಲಿ ಆಶ್ರಯ ಪಡೆದಿದ್ದ ಉಕ್ರೇನ್ ಮಹಿಳೆಗೆ ರೆಡ್ ಕ್ರಾಸ್ ತಂಡ ಸಹಾಯ ಮಾಡಿದ್ದು, ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬುಧವಾರ ರಾತ್ರಿ ರೆಡ್‌ಕ್ರಾಸ್‌ ತಂಡದ ಅಧ್ಯಕ್ಷ ಮಾಧವ್‌ ಜೋಶಿ ಮತ್ತು ಜಿಲ್ಲಾ ಆಸ್ಪತ್ರೆಯ ಸಿಎಂಎಸ್‌ ಮತ್ತು ಶಸ್ತ್ರಚಿಕಿತ್ಸಕ ಡಾ.ಎಸ್‌.ಡಿ.ಸಕ್ಲಾನಿ ಉಕ್ರೇನ್‌ ಮಹಿಳೆಯೊಬ್ಬಳ ಆರು ವರ್ಷದ ಬಾಲಕಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯದಲ್ಲಿ ಜಿಲ್ಲಾಸ್ಪತ್ರೆ ಹಾಗೂ ರೆಡ್ ಕ್ರಾಸ್ ತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉಕ್ರೇನ್‌ ನಿರಾಶ್ರಿತ ಬಾಲಕಿಗೆ ಅಪೆಂಡಿಕ್ಸ್ ನೋವು

ಘಟನೆ ವಿವರ: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಉಕ್ರೇನಿಯನ್ ಕುಟುಂಬವು ಕಳೆದ ತಿಂಗಳು ತಮ್ಮ ನಾಲ್ಕು ಮಕ್ಕಳೊಂದಿಗೆ ಉತ್ತರಕಾಶಿ ತಲುಪಿತ್ತು. ಈ ವೇಳೆ, ನರು ಸೈಂಜ್ ಕುಮಲಾಲ್ತಿಯಲ್ಲಿರುವ ಪೈಲಟ್ ಬಾಬಾ ಅವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

ಮಂಗಳವಾರ ರಾತ್ರಿ ಉಕ್ರೇನಿಯನ್ ಮಹಿಳೆಯ ಕಿರಿಯ ಮಗಳು ಅಭಯಾ ಇದ್ದಕ್ಕಿದ್ದಂತೆ ತನ್ನ ಹೊಟ್ಟೆಯಲ್ಲಿ ತೀವ್ರ ನೋವು ಅನುಭವಿಸಿದ್ದಾಳೆ. ಮಹಿಳೆಯ ಕುಟುಂಬದ ಬಹುತೇಕ ಸದಸ್ಯರು ವೈದ್ಯರಾಗಿದ್ದು, ಈ ಕುರಿತು ಉಕ್ರೇನ್​​ನಲ್ಲಿರುವ ವೈದ್ಯರ ಜತೆ ಮಾತುಕತೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ. ಆ ವೇಳೆ ಮಗುವಿಗೆ ಅಪೆಂಡಿಕ್ಸ್‌ ಆಗಿದೆ ಎಂಬ ವಿಷಯ ಗೊತ್ತಾಗಿದೆ.

ಆಗ ಮಗುವನ್ನ ಅವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆದರೆ, ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಮಹಿಳೆಯ ಬಳಿ ಅಲ್ಟ್ರಾಸೌಂಡ್ ಮತ್ತು ಔಷಧಗಳಿಗೆ ಹಣವಿಲ್ಲದೇ ರೆಡ್ ಕ್ರಾಸ್ ಕಚೇರಿ ತಲುಪಿದ್ದಾರೆ. ಅಲ್ಲಿ ಅಧ್ಯಕ್ಷ ಮಾಧವ ಪ್ರಸಾದ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ.

ಮಹಿಳೆ ಸಮಸ್ಯೆ ಆಲಿಸಿ ಸಹಾಯ ಮಾಡಿ ಜೋಶಿ - ಭಟ್​: ಮಹಿಳೆಯ ಸಮಸ್ಯೆ ಪರಿಶೀಲಿಸಿದ ಅವರು ಕೂಡಲೇ ಬಾಲಕಿಯನ್ನು ಸಿಎಂಒ ಡಾ.ಕೆ.ಎಸ್.ಚೌಹಾಣ್ ಅವರಿಗೆ ತೋರಿಸಿದ್ದಾರೆ. ಬಾಲಕಿಯ ಹೊಟ್ಟೆಯಲ್ಲಿ ಅಪೆಂಡಿಕ್ಸ್ ಆಗಿದೆ ಎಂಬ ಬಗ್ಗೆ ತಿಳಿಸಿದ್ದಾರೆ. ನಂತರ ರೆಡ್‌ಕ್ರಾಸ್ ಸದಸ್ಯ ಸಂತೋಷ್ ಸಕ್ಲಾನಿ ಅಲ್ಟ್ರಾಸೌಂಡ್ ಮಾಡಿಸಿದ್ದಾರೆ. ಮಧ್ಯಾಹ್ನ ಅಲ್ಟ್ರಾಸೌಂಡ್ ನಂತರ, ವೈದ್ಯರು ಹುಡುಗಿಗೆ ಆಪರೇಷನ್ ಮಾಡುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಮಹಿಳೆ ಅಸಮಾಧಾನಗೊಂಡರು. ಕಾರಣ ಆಕೆ ಬಳಿ ಹಣ ಇರಲಿಲ್ಲ. ಮಹಿಳೆಯ ಸಮಸ್ಯೆ ಕಂಡ ಅಧ್ಯಕ್ಷ ಮಾಧವ ಜೋಶಿ ಹಾಗೂ ಆಕಾಶ್ ಭಟ್ ಸಿಎಂಎಸ್ ಡಾ.ಎಸ್.ಡಿ.ಸಕ್ಲಾನಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ ಆಪರೇಷನ್ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ವೈದ್ಯರಿಗೆ ಧನ್ಯವಾದ ಹೇಳಿದ ಉಕ್ರೇನ್ ಕುಟುಂಬ: ರಾತ್ರಿ 8 ಗಂಟೆಗೆ ಬಾಲಕಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಬಾಲಕಿಯ ಜೀವ ಉಳಿಸಲಾಗಿದೆ. ಈ ಬಗ್ಗೆ ಮಹಿಳೆ ಉಕ್ರೇನ್‌ನಲ್ಲಿರುವ ಕುಟುಂಬ ಸದಸ್ಯರಿಗೆ ತಿಳಿಸಿದಾಗ, ಅವರು ತುಂಬಾ ಸಂತಸಪಟ್ಟಿದ್ದಾರೆ ಮತ್ತು ರೆಡ್‌ಕ್ರಾಸ್ ಮತ್ತು ಆಸ್ಪತ್ರೆ ಆಡಳಿತಕ್ಕೆ ಧನ್ಯವಾದ ಹೇಳಿದ್ದಾರೆ.

ಅಧ್ಯಕ್ಷ ಮಾಧವ ಜೋಶಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿಗಳಾದ ಜುಗಲ್ ಕಿಶೋರ್, ನವೀನ್ ರಾವತ್, ಡಾ.ಅಶೋಕ್ ಠಾಕೂರ್ ಈ ಕಾರ್ಯದಲ್ಲಿ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಭಾರಿ ಮಳೆ, ಗಾಳಿ: ಉರುಳಿ ಬಿದ್ದ ತೆಂಗಿನ ಮರಗಳು, ವಿಳ್ಯೆದೆಲೆ ಬಳ್ಳಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.