ETV Bharat / bharat

18 ದಿನಗಳ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು - ಕೋಲ್ಕತ್ತಾದ ಸರ್ಕಾರಿ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

ಹುಟ್ಟುತ್ತಲೇ ಯಕೃತ್ತಿನ ಜೊತೆಗೆ ಹೃದಯ ಸಹ ಸೇರಿಕೊಂಡಿದ್ದ 18 ದಿನಗಳ ಅವಳಿ ಮಕ್ಕಳನ್ನು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ ವೈದ್ಯರು ಬೇರ್ಪಡಿಸಿದ್ದಾರೆ.

Doctors at NRS Medical College and Hospital separate conjoined twins
18 ದಿನಗಳ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
author img

By

Published : Jul 8, 2022, 10:58 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದ ಸರ್ಕಾರಿ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸಾ ಮೂಲಕ 18 ದಿನಗಳ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರೂ ಮಕ್ಕಳು ಆರೋಗ್ಯವಾಗಿದ್ದರೂ, ಮುಂದಿನ ಮೂರ್ನಾಲ್ಕು ದಿನಗಳು ಅವರಿಗೆ ನಿರ್ಣಾಯಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಕ್ಷಿಣ ದಿನಾಜ್‌ಪುರದ ನಿವಾಸಿಯೊಬ್ಬರ ಮಕ್ಕಳು ಇವರಾಗಿದ್ದಾರೆ. ಈ ಅವಳಿ ಮಕ್ಕಳ ಯಕೃತ್ತಿನ ಜೊತೆಗೆ ಹೃದಯ ಸಹ ಸೇರಿಕೊಂಡಿತ್ತು. ಅದೃಷ್ಟವಶಾತ್ ಅವರಿಬ್ಬರಿಗೂ ಪ್ರತ್ಯೇಕ ಹೃದಯವಿತ್ತು. ಒಂದೇ ಹೃದಯವಿದ್ದರೆ ಬೇರ್ಪಡಿಸುವುದು ಕಷ್ಟವಾಗುತ್ತಿತ್ತು ಎಂದು ವೈದ್ಯಕೀಯ ಕಾಲೇಜಿನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಕೌಸಿಕ್ ಸಹಾ ಹೇಳಿದ್ದಾರೆ.

ಅಲ್ಲದೇ, ಬಹುಪಾಲು ಸಯಾಮಿ ಅವಳಿ ಮಕ್ಕಳು ಹುಟ್ಟುತ್ತಲೇ ಮೃತಪಟ್ಟಿರುತ್ತವೆ ಅಥವಾ ಹುಟ್ಟಿದ ಸ್ವಲ್ಪ ಸಮಯದ ನಂತರ ಸಾಯುತ್ತವೆ. ಈ 18 ದಿನಗಳ ಮಕ್ಕಳು ಆರೋಗ್ಯವಾಗಿದ್ದಾರೆ. ಮೂರ್ನಾಲ್ಕು ದಿನಗಳು ನಿಗಾದಲ್ಲಿರಿಸುವುದು ಅಗತ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸ್ವಾವಲಂಬನೆಯಲ್ಲಿ ಬಹುದೂರ ಸಾಗಿದ ಭಾರತ: ಕೃತಕ ಬುದ್ಧಿಮತ್ತೆ ಆಧಾರಿತ ಮಿಲಿಟರಿ ಉತ್ಪನ್ನಗಳ ಅಭಿವೃದ್ಧಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.