ಚೆನ್ನೈ: ಗುರುವಾರ ನಸುಕಿನ ಜಾವ ಸಂಭವಿಸಿದ ಕಾರು ಅಪಘಾತದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಎನ್ ಆರ್ ಇಳಂಗೋವ ಅವರ ಪುತ್ರ ರಾಕೇಶ್ ಮೃತಪಟ್ಟಿದ್ದು, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಕೇಶ್ ಮತ್ತು ಆತನ ಸ್ನೇಹಿತ ಪುದುಚೇರಿಗೆ ತೆರಳುವಾಗ ನಸುಕಿನ ಜಾವ 3.45ರ ಸುಮಾರಿಗೆ ಕೊಟ್ಟಕುಪ್ಪಂ ಬಳಿ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳೀಯರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ, ಒಳಗಡೆ ಸಿಕ್ಕಿಕೊಂಡಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಕೇಶ್ ಸ್ನೇಹಿತನನ್ನು ಪಾಂಡಿಚೇರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
(ಇದನ್ನೂ ಓದಿ: ಅಪ್ಪು ಇಲ್ಲದ ನೋವು.. ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಜಗ್ಗೇಶ್ ನಿರ್ಧಾರ!)