ETV Bharat / bharat

ದೀಪಾವಳಿಯಲ್ಲಿ ಬಂಪರ್ ವ್ಯಾಪಾರ: ದೇಶದಲ್ಲಿ ₹1.25 ಲಕ್ಷ ಕೋಟಿ ವಹಿವಾಟು - ದೇಶದಲ್ಲಿ 1.25 ಲಕ್ಷ ಕೋಟಿ ರೂಪಾಯಿಗಳ ವ್ಯಾಪಾರ

ಈ ಬಾರಿಯ ದೀಪಾವಳಿ ವ್ಯಾಪಾರ ದಾಖಲೆ ಬರೆದಿದೆ. ದೇಶಾದ್ಯಂತ ದಶಕದ ಬಳಿಕ ಇದೇ ಮೊದಲ ಬಾರಿಗೆ 1.25 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯಾಪಾರ ನಡೆದಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ (ಸಿಎಐಟಿ) ಒಕ್ಕೂಟ ಮಾಹಿತಿ ನೀಡಿದೆ.

Diwali festival sales helped huge business to the tune of Rs 1.25 lakh crores: CAIT
ದೀಪಾವಳಿಯಲ್ಲಿ ಬಂಪರ್ ವ್ಯಾಪಾರ; ದೇಶದಲ್ಲಿ 1.25 ಲಕ್ಷ ಕೋಟಿ ರೂಪಾಯಿಗಳ ವಹಿವಾಟು - ಸಿಎಐಟಿ
author img

By

Published : Nov 5, 2021, 8:59 PM IST

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಈ ಸಲ ವ್ಯಾಪಾರಿಗಳ ಬಾಳಲ್ಲಿ ಬೆಳಕು ತಂದಿದ್ದು, ಮಾರುಕಟ್ಟೆಯಲ್ಲಿ ದಾಖಲೆಯ ವ್ಯಾಪಾರವಾಗಿದೆ.

ಹಂತಹಂತವಾಗಿ ಕೋವಿಡ್‌ ನಿರ್ಬಂಧಗಳ ಸಡಿಲಿಕೆಯ ಬಳಿಕ ಹಬ್ಬದ ಖರೀದಿಗಾಗಿ ಜನರು ಮಾರುಕಟ್ಟೆಗೆ ಆಗಮಿಸಿದ ಪರಿಣಾಮ ಇದೇ ಮೊದಲ ಬಾರಿಗೆ 1.25 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯಾಪಾರ ನಡೆದಿದೆ.

ಇದು ದೀಪಾವಳಿಯ ಸಂದರ್ಭದಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲೆಯ ವ್ಯಾಪಾರದ ಅಂಕಿಅಂಶವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ. ಸುಮಾರು 70 ಮಿಲಿಯನ್ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸಿಎಐಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಇಂತಹ ಬೃಹತ್ ಶಾಪಿಂಗ್ ಕಳೆದ ಎರಡು ವರ್ಷಗಳಿಂದ ವ್ಯಾಪಾರದಲ್ಲಿನ ಆರ್ಥಿಕ ಕುಸಿತವನ್ನು ಕೊನೆಗೊಳಿಸಿದೆ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ವ್ಯಾಪಾರಿ ಸಮುದಾಯದಲ್ಲಿ ಉತ್ತಮ ವಹಿವಾಟಿನ ನಿರೀಕ್ಷೆಗಳನ್ನು ಈ ಬೆಳವಣಿಗೆ ಮೂಡಿಸಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಚೀನಾ ವಸ್ತುಗಳ ತಿರಸ್ಕಾರ

ಚೀನಾದ ಸರಕುಗಳು ಈ ಸಲ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟವಾಗಿಲ್ಲ. ಗ್ರಾಹಕರು ಭಾರತೀಯ ವಸ್ತುಗಳ ಖರೀದಿಗೆ ವಿಶೇಷ ಒತ್ತು ನೀಡಿದ್ದರಿಂದ ಚೀನಾಕ್ಕೆ 50,000 ಕೋಟಿ ರೂ.ಗಿಂತಲೂ ಹೆಚ್ಚಿನ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ದೀಪಾವಳಿ ಹಬ್ಬದ ಸಾಂಪ್ರದಾಯಿಕ ವಸ್ತುಗಳೆಂದರೆ ಮಣ್ಣಿನ ದೀಪಗಳು, ವರ್ಣರಂಜಿತ ಅಲಂಕಾರಗಳು, ಮೇಣದಬತ್ತಿಗಳು, ಕಾಗದದ ಮಚ್ಚೆ ದೀಪಗಳಿಂದ ಸಣ್ಣ ಕುಂಬಾರರು, ಕುಶಲಕರ್ಮಿಗಳು ಹಾಗೂ ಕರಕುಶಲಕರ್ಮಿಗಳಿಗೆ ಗಣನೀಯ ವ್ಯಾಪಾರ ನೀಡುತ್ತವೆ. ಸಿಹಿತಿಂಡಿಗಳು, ಒಣ ಹಣ್ಣುಗಳು, ಪಾದರಕ್ಷೆಗಳು, ಕೈಗಡಿಯಾರಗಳು, ಆಟಿಕೆಗಳು, ಗೃಹಾಲಂಕಾರ ಹಾಗೂ ಫ್ಯಾಶನ್ ಉಡುಪುಗಳನ್ನು ಒಳಗೊಂಡಿರುವ ಇತರ ಉತ್ಪನ್ನಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ.

9 ಸಾವಿರ ಕೋಟಿ ರೂ. ಚಿನ್ನಾಭರಣ ವ್ಯಾಪಾರ

ಈ ವರ್ಷ 9,000 ಕೋಟಿ ರೂಪಾಯಿಗೂ ಅಧಿಕ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಖರೀದಿಸಲಾಗಿದೆ. ದೀಪಾವಳಿಯು ಹೊಸ ಅವಕಾಶಗಳು, ದೇಶದಲ್ಲಿ ಭವಿಷ್ಯದ ವ್ಯಾಪಾರಕ್ಕಾಗಿ ಉತ್ತಮ ಸಾಮರ್ಥ್ಯದ ದೃಷ್ಟಿಯಿಂದ ವ್ಯಾಪಾರದ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ವ್ಯಾಪಾರಿಗಳನ್ನು ಪ್ರೇರೇಪಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇ-ಕಾಮರ್ಸ್‌ಗಳದ್ದೇ ಸಿಂಹಪಾಲು

ಅಕ್ಟೋಬರ್‌ನಲ್ಲಿ ಆನ್‌ಲೈನ್ ಹಬ್ಬದ ಮಾರಾಟದ ಮೊದಲ ವಾರದಲ್ಲಿ, ವಿವಿಧ ಇ-ಕಾಮರ್ಸ್ ಸಂಸ್ಥೆಗಳು ಭಾಗವಹಿಸಿದ್ದು, 2021ರಲ್ಲಿ ಶೇ.23 ರಷ್ಟು ವಾರ್ಷಿಕ ಮಾರಾಟದ ಬೆಳವಣಿಗೆ ಕಂಡಿದೆ. ಇದರರ್ಥ 4.6 ಬಿಲಿಯನ್ ಡಾಲರ್‌ (ರೂ. 32,000 ಕೋಟಿ) ಮೌಲ್ಯದ ಸರಕುಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗಿದೆ ಎಂದು ಹೋಮ್‌ಗ್ರೋನ್ ಸಂಸ್ಥೆಯ ರೆಡ್‌ಸೀರ್ ಕನ್ಸಲ್ಟಿಂಗ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಹಬ್ಬದ ಮಾರಾಟದ ಸಮಯದಲ್ಲಿ ಫ್ಲಿಪ್‌ಕಾರ್ಟ್ ಶೇ.64ರಷ್ಟು ಮಾರುಕಟ್ಟೆ ಪಾಲು ಹೊಂದುವ ಮೂಲಕ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ ಎಂದು ರೆಡ್‌ಸೀರ್‌ ಹೇಳಿಕೊಂಡಿದೆ. ಈ ಹಿಂದೆ, ರೆಡ್‌ಸೀರ್ ಕನ್ಸಲ್ಟಿಂಗ್ ಹಬ್ಬದ ಮಾರಾಟದ ಮೊದಲ ವಾರದಲ್ಲಿ 4.8 ಶತಕೋಟಿ ಡಾಲರ್‌ ಮಾರಾಟದ ಮುನ್ಸೂಚನೆ ನೀಡಿತ್ತು. ಅಲ್ಲದೆ, ಒಟ್ಟಾರೆ ಆನ್‌ಲೈನ್ ಶಾಪರ್ಸ್ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 20 ಪ್ರತಿಶತದಷ್ಟು ಬೆಳವಣಿಕೆ ಕಂಡಿದೆ.

ಸಣ್ಣ ನಗರಗಳಿಗೂ ವ್ಯಾಪಾರ ವಿಸ್ತರಣೆ

ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇತ್ತೀಚೆಗೆ ತಮ್ಮ ಹಬ್ಬದ ಮಾರಾಟದ ಈವೆಂಟ್‌ನ ಆರಂಭಿಕ ಪ್ರವೃತ್ತಿಗಳು ಶ್ರೇಣಿ 2 ಮತ್ತು 3 ನಗರಗಳಿಂದ ಹೆಚ್ಚಿದ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ. ಅಮೆಜಾನ್‌ನ ತಿಂಗಳ ಅವಧಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಮತ್ತು ಫ್ಲಿಪ್‌ಕಾರ್ಟ್‌ನ ದಿ ಬಿಗ್ ಬಿಲಿಯನ್ ಡೇಸ್ ಅನ್ನು ಅಕ್ಟೋಬರ್‌ನಲ್ಲಿ ನಡೆಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.