ಹೈದರಾಬಾದ್: ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಪೀಳಿಗೆಗೆ ಹಬ್ಬಗಳ ಆಚರಣೆ ಬಗ್ಗೆ ಜ್ಞಾನ ಕಡಿಮೆ. ಬಹಳಷ್ಟು ಅವಿಭಕ್ತ ಕುಟುಂಬಗಳು ದೀಪಾವಳಿಯಂಥ ಹಬ್ಬಗಳ ಆಚರಣೆ ಹೇಗೆ ಮಾಡಬೇಕು ತಿಳಿಯಲು ಅಂತರ್ಜಾಲವನ್ನು ಜಾಲಾಡುತ್ತಾರೆ. ಆದರೆ ಹಿರಿಯರು ವಾಸವಿರುವ ಮನೆಗಳಲ್ಲಿ ಹಿಂದೂ ಸಂಸ್ಕೃತಿಯಂತೆ ಸಂಪ್ರದಾಯ ಬದ್ಧವಾಗಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬದ ದಿನ ಲಕ್ಷ್ಮಿ ದೇವಿಗೆ ವಿಶೇಷ ವಿಧಿ ವಿಧಾನಗಳಲ್ಲಿ ಪೂಜೆ ಸಲ್ಲಿಸುವುದು. ಲಕ್ಷ್ಮೀ ದೇವಿ ಪೂಜಿಸಿದ ಬಳಿಕ ಮುಂಭಾಗ ಎರಡು ದೊಡ್ಡ ಮಣ್ಣಿನ ದೀಪಗಳನ್ನು ರಾತ್ರಿಯಿಡೀ ಬೆಳಗಿಸಬೇಕು. ರಾತ್ರಿಯಿಡೀ ದೀಪ ಉರಿಸಿದಿರೆ ವ್ಯಕ್ತಿ ಅಥವಾ ಕುಟುಂಬಕ್ಕೆ ಸಂಪತ್ತು, ಕೀರ್ತಿ, ಉತ್ತಮ ಆರೋಗ್ಯ ಲಭಿಸುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಪ್ರಚಲಿತ.
ಶುಭಕಾಲ: ಅಕ್ಟೋಬರ್ 24ರಂದು 2022, ಸಂಜೆ 07:02 ರಿಂದ 08.23 ರವರೆಗೆ ಲಕ್ಷ್ಮಿ ದೇವಿಯ ಆರಾಧನೆಗೆ ಅತ್ಯಂತ ಶುಭ ಸಮಯ. ಪ್ರದೋಷ ಕಾಲ: 05:50 pm - 08:23 pm. ವೃಷಭ ಕಾಲ: 07:02 ಗಂಟೆ - 08:58 ಗಂಟೆಗಳು ಲಕ್ಷ್ಮಿ ದೇವಿಯನ್ನು 'ಚೋಗಡಿಯಾ' ಅಥವಾ ಮಂಗಳಕರ ಸಂಜೆ ಸಮಯದಲ್ಲಿ ಪೂಜಿಸಲಾಗುತ್ತದೆ. ಲಾಭದಾಯಕ ಪರಿಸ್ಥಿತಿಗಳಿಗೆ ದೀಪಾವಳಿಯಂದು ರಾತ್ರಿ 10:36 ರಿಂದ 12:11 ರವರೆಗೆ ಇರುತ್ತದೆ.
'ನಿಶ್ಚಿತಾ ಮುಹೂರ್ತ' ಅಥವಾ ಮಧ್ಯೆರಾತ್ರಿ ಲಕ್ಷ್ಮಿ ದೇವಿಯನ್ನು ಪೂಜಿಸಲು ಅತ್ಯುತ್ತಮ ಗಳಿಗೆ ಎನ್ನಲಾಗಿದೆ. ಆ ನಿಶ್ಚಿತ ಮುಹೂರ್ತದ ಸಮಯದಲ್ಲಿ ಲಕ್ಷ್ಮಿ ದೇವಿಯು ಪ್ರತಿ ಮನೆಗೆ ಭೇಟಿ ನೀಡುತ್ತಾಳೆ ಎಂದು ನಂಬಲಾಗಿದೆ. ಅಕ್ಟೋಬರ್ 24, 2022 ರಂದು, ನಿಶ್ಚಿತಾ ಮುಹೂರ್ತವು ರಾತ್ರಿ 11:46 ರಿಂದ ಪ್ರಾರಂಭವಾಗಿ, 12:37ಕ್ಕೆ ಕೊನೆಗೊಳ್ಳುತ್ತದೆ.
ದೀಪಾವಳಿ ಹಬ್ಬ ಆಚರಣೆ ಹೇಗೆ? ಯಾವ ಕೆಲಸ ಮಾಡಬೇಕು, ಅಶುಭ ಗಳಿಗೆ ಹೇಗೆ ತಪ್ಪಿಸಬೇಕೆನ್ನುವುದನ್ನು ಗಾಜಿಯಾಬಾದ್‌ನ ಏವಂ ವಾಸ್ತು ಅನುಸಂಧಾನ ಕೇಂದ್ರದ ಆಚಾರ್ಯ ಶಿವಕುಮಾರ ಶರ್ಮಾ ಅವರು ಹೀಗೆ ಮಾಹಿತಿ ನೀಡುತ್ತಾರೆ.
ಹೊಸ ಪೊರಕೆ ಖರೀದಿಸಿ: ದೀಪಾವಳಿ ಹಬ್ಬದಂದು ಹೊಸ ಪೊರಕೆಯನ್ನು ಖರೀದಿಸಬೇಕು. ಹಳೆಯ ಪೊರೆಕೆ ಬಳಕೆ ಬೇಡ. ಪುರಾತನ ಕಾಲದಲ್ಲಿ ದೀಪಾವಳಿಯಿಂದ ಮರುದಿನ ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಮನೆಯನ್ನು ಗುಡಿಸಿ ಮನೆಯ ಹೆಂಗಸರು ಮನೆಯ ದ್ವಾರದಲ್ಲಿ ರಂಗೋಲಿ ಹಾಕುತ್ತಿದ್ದರು. ಆದರೆ, ಲಕ್ಷ್ಮಿ ದೇವಿಯ ಆವಾಹನೆಯು ದಿನವು ಜಾಗೃತಿಯ ಮಾರ್ಗ. ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿದರೆ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ.
ಎರಡು ದೀಪಗಳನ್ನು ಬೆಳಗಿಸಿ: ದೀಪಾವಳಿ ಹಬ್ಬದ ಪೂಜಾ ಸಮಯದಲ್ಲಿ ಬೆಳಗಿದ ಎರಡು ದೊಡ್ಡ ದೀಪಗಳನ್ನು ರಾತ್ರಿಯಿಡಿ ಬೆಳಗಲಿ. ಲಕ್ಷ್ಮಿ ಮತ್ತು ಗಣೇಶನ ವಿಗ್ರಹದ ಬಲಭಾಗದಲ್ಲಿ ತುಪ್ಪದ ದೀಪವನ್ನು ,ಎಡಭಾಗದಲ್ಲಿ ಎಣ್ಣೆಯ ಸಾಸಿವೆ ಎಣ್ಣೆ ದೀಪ ಬೆಳಗಿಸಿ, ರಾತ್ರಿಯಿಡೀ ಉರಿವ ದೀಪವು ಮನೆಗೆ ಲಕ್ಷ್ಮಿ ದೇವಿಗೆ ಬರುವ ದಾರಿ ತೋರಿಸುತ್ತಲೇ ಇರುತ್ತದೆ.
ಬೆಕ್ಕಿನ ದರ್ಶನ ಮಂಗಳಕರ: ಧನ್ತೇರಸ್‌ನಿಂದ ದೀಪಾವಳಿಯ ರಾತ್ರಿಯವರೆಗೆ ಮನೆಯ ಸುತ್ತಲೂ ಬೆಕ್ಕು ಕಾಣಿಸಿಕೊಂಡರೆ ಅದು ಮಂಗಳಕರ. ದೀಪಾವಳಿ ಹಬ್ಬದಲ್ಲಿ ರಾತ್ರಿ ಲಕ್ಷ್ಮಿ ದೇವಿಯು ಮನೆಗಳಲ್ಲಿ ಬೆಕ್ಕಿನ ರೂಪದಲ್ಲಿ ತಿರುಗುತ್ತಾಳೆ ಎಂಬ ನಂಬಿಕೆ ಇದ್ದು, ಅಂದಿನ ದಿನ ಬೆಕ್ಕಿನ ದೃಷ್ಠಿ ಬಹಳ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ವಿಷ್ಣುವಿನ ಆರಾಧನೆ ಮಾಡಿ: ಗಣೇಶನು ಲಕ್ಷ್ಮಿಯ ದತ್ತುಪುತ್ರ. ಯಾವಾಗಲೂ ಲಕ್ಷ್ಮಿಯ ಎಡಭಾಗದಲ್ಲಿ ಇರುತ್ತಾರೆ. ಲಕ್ಷ್ಮಿ ದೇವಿ ಜತೆಗೆ ಗಣೇಶನನ್ನು ಪೂಜಿಸುತ್ತೇವೆ. ಆದರಂತೆ ವಿಷ್ಣುವಿನ ವಿಗ್ರಹವನ್ನು ಲಕ್ಷ್ಮಿ ದೇವಿಯ ಬಲಭಾಗದಲ್ಲಿ ಇಡಬೇಕು. ವಿಷ್ಣುವಿನ ಜತೆಗೆ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸಬೇಕು ಎನ್ನುವುದು ಭಕ್ತರ ಅಭಿಲಾಷೆ.
ಫೋಟೊ ಬಳಕೆ ಹೇಗೆ?:ಈ ಹಿಂದೆ ಹಿರಿಯರು ತಮ್ಮ ಅಂಗಡಿ, ಸಂಸ್ಥೆಗಳಲ್ಲಿ ಲಕ್ಷ್ಮಿ ನಿಂತಿರುವ ಫೋಟೊವನ್ನು ಪೂಜೆ ಸಲ್ಲಿಸುತ್ತಿದ್ದರು. ಇದರರ್ಥ ವ್ಯಾಪಾರ ಸಂಸ್ಥೆಗಳಲ್ಲಿ ನಿರಂತರ ವ್ಯಾಪಾರ ಜರುಗಲಿ ಎಂಬ ನಂಬಿಕೆ. ಹೀಗಾಗಿ ನಿಂತಿರುವ ಲಕ್ಷ್ಮಿ ಮತ್ತು ಗಣೇಶನ ವಿಗ್ರಹವನ್ನು ಪೂಜಿಸುವುದು ವ್ಯಾಪಾರಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಲಾಗುತ್ತದೆ.
ಸರಸ್ವತಿ, ದುರ್ಗಾ, ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ರಾತ್ರಿಯಲ್ಲಿ ಗಂಟೆ ಅಥವಾ ಶಂಖವನ್ನು ಬಾರಿಸಬಾರದು. ಗಂಟೆಯನ್ನು ಬಾರಿಸುವುದು ಎಂದರೆ ಲಕ್ಷ್ಮಿ ದೇವಿಯನ್ನು ಮನೆಯಿಂದ ಕಳುಹಿಸುವುದು. ಹಗಲಿನಲ್ಲಿ ಲಕ್ಷ್ಮಿಯನ್ನು ಪೂಜಿಸುವ ಸಮಯದಲ್ಲಿ ಶಂಖ ಮತ್ತು ಗಂಟೆಯನ್ನು ಊದಬಹುದು, ಆದರೆ ನಿಮ್ಮ ಮನೆಯಲ್ಲಿ ರಾತ್ರಿ. ಆರತಿ ಮಾಡುವ ಮೂಲಕ ಆರತಿಯನ್ನು ಅರ್ಪಿಸಬೇಕೆನ್ನುತ್ತಾರೆ.
ಹೊಸ ಬಟ್ಟೆ, ಬಂಗಾರ ಖರೀದಿ ಜೋರು:ಆರಂಭದಲ್ಲಿ ದೀಪಾವಳಿ ಹಬ್ಬದ ಮುಂಚೆ ಜನರು ತಮ್ಮ ಮನೆ, ಸಂಸ್ಥೆಗಳು, ಅಂಗಡಿಗಳು ಮತ್ತು ಕಚೇರಿಗಳನ್ನು ಸ್ವಚ್ಛಗೊಳಿಸುವರು. ಹಬ್ಬಕ್ಕಾಗಿ ಮಕ್ಕಳು,ಕುಟುಂಬ ಸದಸ್ಯರಿಗೆ ಬಂಗಾರ,ಹೊಸಬಟ್ಟೆಗಳನ್ನು ಖರೀದಿಸುವರು. ಹೀಗೆ ಮಾಡುವುದರಿಂದ ಎಲ್ಲಡೆ ಸಂತಸ ಮನೆ ಮಾಡಲಿದೆ ಎಂಬುದು ಜನರ ನಂಬಿಕೆ ಆಗಿದೆ.
ಇದನ್ನು ಓದಿ:ಕರ್ವಾ ಚೌತ್ಗೆ ವಿಶೇಷವಾದ ಭಕ್ಷ್ಯಗಳು ಇಲ್ಲಿವೆ..!