ETV Bharat / bharat

ಕಷ್ಟನಷ್ಟ ನೂರಾರು, ಕೈ ಹಿಡಿದಿದ್ದು ಬಿರಿಯಾನಿ: ಸೋತು ಗೆದ್ದ ಮಾಧುರಿಯ ಯಶೋಗಾಥೆ

author img

By

Published : Dec 16, 2022, 7:43 PM IST

Updated : Dec 16, 2022, 7:50 PM IST

ಬಿರಿಯಾನಿ ತಯಾರಿಸಿ, ಮಾರಾಟ ಮಾಡಿ ಗೆಲುವಿನ ಪಯಣ ನಡೆಸುತ್ತಿರುವ ಮಾಧುರಿ ತಮ್ಮ ಪ್ರಯಾಣವನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡರು.

ಮಾಧುರಿಯ ಯಶೋಗಾಥೆ
Madhuris success story

ನಷ್ಟ, ಕಷ್ಟಗಳು ಅವಳನ್ನು ಎಷ್ಟೊಂದು ನೋಯಿಸಿದ್ದವು. ಆಕೆ ತನಗಿನ್ನೂ 'ಸಾವು ಒಂದೇ ದಾರಿ' ಎಂದುಕೊಂಡಿದ್ದಳು! ಆದರೆ ಕೊನೆಯ ಕ್ಷಣದಲ್ಲಿ ಜೀವನ ತಿರುವು ಪಡೆಯಿತು. ಈ ವೇಳೆ ಆಕೆಗೆ ಅದೆಲ್ಲಿಂದಲೋ ಒಂದು ನೆರವಿನ ಹಸ್ತ ಕೈಚಾಚುತ್ತದೆ. ಅದರ ಬೆಂಬಲದಿಂದ ಆಕೆ ಹಠದಿಂದ ತನ್ನ ಜೀವನ ಬದಲಾಯಿಸಿಕೊಳ್ಳುತ್ತಾಳೆ. ಬಿರಿಯಾನಿಯೊಂದಿಗೆ ಗೆಲುವಿನ ಪಯಣ ನಡೆಸುತ್ತಿರುವ ಮಾಧುರಿ ತಮ್ಮ ಪ್ರಯಾಣವನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

'ನಮ್ಮದು ನಲ್ಗೊಂಡ ಜಿಲ್ಲೆಯ ವಂಕ ಮಾಮಿಡಿ ಗ್ರಾಮ. ನನಗೆ ನಾಲ್ವರು ಸಹೋದರರಿದ್ದಾರೆ. ಅಜ್ಜಂದಿರು ಸೀರೆಗೆ ಕಪ್ಪು ಪ್ರಿಂಟಿಂಗ್ ಹಾಕಿ ಮಾರುತ್ತಿದ್ದರು. ನಾನು ಬಾಲ್ಯದಿಂದಲೂ ಅವರಿಗೆ ಸಹಾಯ ಮಾಡುತ್ತಿದ್ದೆ. ನಾವು ಮೂವರೂ ಸೇರಿ ಪ್ರತಿದಿನ 15 ಸೀರೆಗಳನ್ನು ಪ್ರಿಂಟ್ ಮಾಡುತ್ತಿದ್ದೆವು. ಅವುಗಳಲ್ಲಿ ಕೆಲವು ಮಾರಾಟವಾಗುತ್ತಿದ್ದವು ಮತ್ತು ಇನ್ನು ಕೆಲವು ಮನೆಗೆ ಮರಳಿ ಬರುತ್ತಿದ್ದವು. ಸ್ವಲ್ಪ ಸಮಯದ ನಂತರ ಕೊಯ್ಯಲಗುಡೆಂನ ಭಾಸ್ಕರ್ ಎಂಬುವರೊಂದಿಗೆ ನನ್ನ ವಿವಾಹವಾಯಿತು. ನಾವು ಕಸೂತಿ ಮಾಡಿದ ಡ್ರೆಸ್ ಮೆಟೀರಿಯಲ್ಸ್ ಮತ್ತು ರೇಷ್ಮೆ ಸೀರೆಗಳನ್ನು ಪ್ರದರ್ಶನಗಳಲ್ಲಿ ಮಾರಾಟ ಮಾಡುತ್ತಿದ್ದೆವು. ನನ್ನ ಮಗ ನಾಲ್ಕು ವರ್ಷದವನಾಗುವ ತನಕ ಅವನನ್ನೂ ನನ್ನೊಂದಿಗೆ ಕರೆದೊಯ್ಯುತ್ತಿದ್ದೆ. ಆದರೆ ಪೈಪೋಟಿ ಹೆಚ್ಚಿದ್ದರಿಂದ ಮಾರಾಟ ಅಷ್ಟಾಗಿ ಇರಲಿಲ್ಲ'

ಅವಳು ಸಮಯಕ್ಕೆ ಸರಿಯಾಗಿ ಬಂದಳು, ಇಲ್ಲದಿದ್ದರೆ.. 'ನಾವು 25 ಗ್ರಾಂ ಚಿನ್ನ ಮಾರಾಟ ಮಾಡಿದೆವು ಮತ್ತು ಸ್ವಂತದ್ದು ಅಂತ ಏನಾದರೂ ಮಾಡುವ ಇಚ್ಛೆಯಿಂದ ಗಾರ್ಮೆಂಟ್ಸ್ ಅಂಗಡಿಯನ್ನು ಪ್ರಾರಂಭಿಸಿದೆವು. ಆದರೆ ಆ ವ್ಯಾಪಾರದಲ್ಲಿ ಸಾಲ ಮಾಡಿಕೊಂಡಿದ್ದೇ ಬಂತು, ಲಾಭ ಮಾತ್ರ ಏನೂ ಆಗಲಿಲ್ಲ. ಸಾಲ ಮರುಪಾವತಿಗಾಗಿ ಮನೆ ಮಾರಿದೆವು. ಮಕ್ಕಳಿಗೆ ತಿನ್ನಿಸಲು ಕೂಡ ನಮ್ಮ ಕೈಯಲ್ಲಿ ಒಂದು ರೂಪಾಯಿ ಇರಲಿಲ್ಲ. ನನ್ನ ಸಮಸ್ಯೆಗಳನ್ನು ಕುಟುಂಬದವರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ನಾನು ಸಾಯಬೇಕೆಂದುಕೊಂಡಿದ್ದೆ. ನಾನು ಸತ್ತರೂ ನನ್ನ ಮಗನನ್ನು ಹೇಗಾದರೂ ಮಾಡಿ ಅತ್ತೆಯಂದಿರು ನೋಡಿಕೊಳ್ಳುತ್ತಾರೆ ಎಂದು ನಾನು ಮತ್ತು ನನ್ನ ಪತಿ ಆತ್ಮಹತ್ಯೆಗೆ ಸಿದ್ಧರಾಗಿದ್ದೆವು. ಆದರೆ ಅದೇ ಸಮಯದಲ್ಲಿ ನನ್ನ ಸಹೋದರಿಯೊಬ್ಬಳು ದೇವರಂತೆ ಅಕ್ಕಿ ಮೂಟೆ ತೆಗೆದುಕೊಂಡು ಮನೆಗೆ ಬಂದಳು. ನಮ್ಮ ಕಷ್ಟ ತಿಳಿದು ನಮ್ಮ ಆಪ್ತರೆಲ್ಲರೂ ನಮ್ಮ ಬೆಂಬಲಕ್ಕೆ ನಿಂತರು. ಅತ್ತಿಗೆ ನನ್ನನ್ನು ಮಹಿಳಾ ಸ್ವಯಂ ಕಛೇರಿಗೆ ಕರೆದೊಯ್ದು 3000 ರೂಪಾಯಿ ಕೊಟ್ಟು ಸದಸ್ಯಳನ್ನಾಗಿ ಮಾಡಿದರು. ಸಾಲ ಪಡೆದು ಏನಾದರೂ ಮಾಡು ಎಂದು ಭರವಸೆ ನೀಡಿದಳು.'

'ನಿರೀಕ್ಷೆಯಂತೆ ಮೂರು ತಿಂಗಳಲ್ಲಿ ನನಗೆ, ಆಕೆಗೆ ಹಾಗೂ ಮತ್ತೊಬ್ಬರಿಗೆ 1,20,000 ರೂಪಾಯಿ ಸಾಲ ಮಂಜೂರಾಯಿತು. ಬಂದ ಎಲ್ಲ ಮೊತ್ತವನ್ನು ನಾನೇ ತೆಗೆದುಕೊಂಡು ವ್ಯಾಪಾರ ಮಾಡುವಂತೆ ಇಬ್ಬರೂ ನನಗೆ ಹೇಳಿದರು. ಆ ದಿನ ನಾನು ಅಳುತ್ತಿದ್ದೆ. ಆ ಕ್ಷಣಗಳು ನನಗೆ ಮತ್ತೆ ಜೀವ ತುಂಬಿದ ಕ್ಷಣಗಳಾಗಿದ್ದವು. ನನಗೆ ತುಂಬಾ ಚೆನ್ನಾಗಿ ಅಡುಗೆ ಮಾಡಲು ಬರುತ್ತಿದ್ದುದರಿಂದ ಅಡುಗೆಗೆ ಸಂಬಂಧಿಸಿದ ವ್ಯಾಪಾರವನ್ನೇ ಮಾಡುವಂತೆ ಎಲ್ಲರೂ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕೆಲ ಎಕ್ಸಿಬಿಷನ್​ಗಳಲ್ಲಿ ಕ್ಯಾಂಟೀನ್ ಹಾಕಲು ನನಗೆ ಅನುಮತಿ ಸಿಕ್ಕಿತು. ಮೊದಲ ಪ್ರಯತ್ನವಾಗಿ ನಾವು 2017 ರಲ್ಲಿ ಹೈದರಾಬಾದ್ ಪ್ರದರ್ಶನದಲ್ಲಿ ಕ್ಯಾಂಟೀನ್ ಹಾಕಿದ್ದೆವು. ಆ ಸಮಯದಿಂದ ನನಗೆ ಸ್ವಲ್ಪ ಧೈರ್ಯ ಬಂದಿತು.'

ಖಾಲಿ ಕೈಗಳಿಂದ ಆರಂಭ... 'ಅದರ ಮುಂದಿನ ವರ್ಷ ಹೈದರಾಬಾದ್ ದಮ್ ಬಿರಿಯಾನಿಯ ರುಚಿ ತೋರಿಸಲು ಕೇರಳಕ್ಕೆ ಹೋದೆವು. ಅಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಮ್ಮ 1 ಲಕ್ಷ ರೂಪಾಯಿ ಮೌಲ್ಯದ ಸಾಮಾನು ಸರಂಜಾಮು ಕೊಚ್ಚಿ ಹೋದವು. ಹೀಗಾಗಿ ನಾವು ಬರಿಗೈಯಲ್ಲೇ ಮನೆಗೆ ಬಂದೆವು. ಆದರೆ ಇಷ್ಟಕ್ಕೆ ಸೋಲದ ನಾವು ಮತ್ತೊಂದು ಪ್ರಯತ್ನವಾಗಿ 2019 ರಲ್ಲಿ ದೆಹಲಿ ಎಕ್ಸಿಬಿಷನ್​ಗೆ ಹೋದೆವು. ಅಲ್ಲಿ ನಮ್ಮ ಬಿರಿಯಾನಿಗೆ ತುಂಬಾ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಮೊದಲ ದಿನ 30 ಕೆಜಿ ಬಿರಿಯಾನಿ ತಯಾರಿಸಿದ್ದೆವು. ಅದು ಕೇವಲ 5 ಗಂಟೆಗಳಲ್ಲಿ ಮಾರಾಟವಾಯಿತು. ಎರಡನೇ ದಿನ 50 ಕೆಜಿ ತಯಾರಿಸಿದ್ದು, ಸಂಜೆ ವೇಳೆಗೆ ಮಾರಾಟವಾಯಿತು. ಆಮೇಲೆ 10 ದಿನ ನಿತ್ಯವೂ 100 ಕೆಜಿ ಹೈದರಾಬಾದಿ ಬಿರಿಯಾನಿ ತಯಾರಿಸುತ್ತಿದ್ದೆವು. ಅದೆಲ್ಲವೂ ಸಂಜೆಯ ಮುನ್ನವೇ ಖಾಲಿಯಾಗುತ್ತಿತ್ತು. ಆ ಒಂದು ಎಕ್ಸಿಬಿಷನ್​ ಸಮಯದಲ್ಲಿಯೇ ನಾವು 12 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಬಿರಿಯಾನಿ ಮಾರಾಟ ಮಾಡಿದ್ದೇವೆ. ಇದು ನಮಗೆ ಸಿಕ್ಕ ಅನಿರೀಕ್ಷಿತ ಲಾಭವಾಗಿತ್ತು. ಇಲ್ಲಿಂದ ನಾವು ಹಿಂತಿರುಗಿ ನೋಡಲಿಲ್ಲ. ನನ್ನ ಬಿರಿಯಾನಿಗೆ ಒಳ್ಳೆಯ ಹೆಸರು ಬಂತು. ದೆಹಲಿ, ಬೆಂಗಳೂರು, ಮದ್ರಾಸ್, ಕೇರಳ ಮತ್ತು ಲಕ್ನೋ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶದಲ್ಲಿ 25 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಬಿರಿಯಾನಿ ಮಾರಿ ಲಾಭ ಪಡೆದಿದ್ದೇವೆ. ನಮ್ಮ ತಂಡದಲ್ಲಿ 20ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಕಳೆದು ಹೋದ ಚಿನ್ನವನ್ನೆಲ್ಲ ಮರಳಿ ಕೊಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸುತ್ತಿದ್ದೇನೆ. ದೇಶಾದ್ಯಂತ ಪ್ರದರ್ಶನಗಳಲ್ಲಿ ಭಾಗವಹಿಸುವ ಗುರಿ ಹೊಂದಿದ್ದೇನೆ. ಜೊತೆಗೆ ಕ್ಯಾಂಟೀನ್ ಕೂಡ ನಡೆಸುತ್ತಿದ್ದೇವೆ.''

'ಜೀವನದಲ್ಲಿ ಕಷ್ಟಕ್ಕೆ ಹೆದರಿ ಸಾಯಲು ಮುಂದಾಗುವುದು ತಪ್ಪು. ಅಂದು ನಾವು ಸತ್ತಿದ್ದರೆ ನನ್ನ ಮಗ ಅನಾಥನಾಗುತ್ತಿದ್ದ. ಏನೇ ಆದರೂ ಸಾವು ಯಾವ ಸಮಸ್ಯೆಗೂ ಪರಿಹಾರವಲ್ಲ. ತಾಳ್ಮೆಯಿಂದ ಇನ್ನೊಂದು ಹೆಜ್ಜೆ ಇಡಲು ಪ್ರಯತ್ನಿಸಿದರೆ ಹೊಸ ಬದುಕು ನಮಗಾಗಿ ಕಾದಿರುತ್ತದೆ. ನೀವು ಮತ್ತೆ ಗೆಲ್ಲಬಹುದು. ಅದಕ್ಕೆ ನಾನೇ ಉದಾಹರಣೆ.'- ಮಾಧುರಿ

ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಂಟರ್ ಫೆಸ್ಟ್! ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವ

Last Updated : Dec 16, 2022, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.