ETV Bharat / bharat

ಮೂಗ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಯುವಕನೊಬ್ಬ ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಈ ಕುರಿತು ಸಮಸ್ತಿಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Differently abled minor girl raped in Bihar Samastipur
ಮೂಗ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ
author img

By

Published : Aug 23, 2021, 7:02 PM IST

Updated : Aug 23, 2021, 7:17 PM IST

ಪಾಟ್ನಾ: ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ವಿಶೇಷ ಚೇತನ ಯುವತಿ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಸಂತ್ರಸ್ತೆಯು ಆಕೆಯ ಮನೆಯಲ್ಲಿ ಒಬ್ಬಳೇ ಇದ್ದಾಗ ಅದೇ ಪ್ರದೇಶದ ಯುವಕ ಆಕೆಯ ಮೇಲೆ ಮೃಗದಂತೆ ಎರಗಿ, ಅತ್ಯಾಚಾರ ಮಾಡಿದ್ದಾನೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಗಮನಸಿದ ತಾಯಿ ಅರೆಕ್ಷಣ ದಂಗಾಗಿದ್ದಾರೆ. ರಕ್ತಸ್ರಾವ ಕಂಡು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಘಟನೆ ಬೆಳಕಿಗೆ ಬಂದಿದೆ.\

ಈ ಕುರಿತು ಮಾತನಾಡಿರುವ ಸಂತ್ರಸ್ತೆಯ ತಾಯಿ, "ನಾನು ಮನೆಗೆ ಹಿಂದಿರುಗಿದಾಗ ನನ್ನ ಮಗಳು ಕಿವುಡ ಮತ್ತು ಮೂಗಳಾಗಿದ್ದಾಳೆ. ರಕ್ತಸ್ರಾವ ನೋಡಿ, ಅವಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದೆವು. ಪ್ರಜ್ಞೆ ಬಂದ ನಂತರ ಆಕೆ ತನ್ನ ಕಷ್ಟವನ್ನು ಹೇಳಿದಳು" ಎಂದು ಹೇಳಿದರು.

"ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ನಂತರ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ನಮಗೆ ಮಾಹಿತಿ ನೀಡಿದರು. ಅದರಂತೆ ನಾನು ಸಮಸ್ತಿಪುರದ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳ ವಿರುದ್ಧ ಲಿಖಿತ ದೂರು ಸಲ್ಲಿಸಿದೆ" ಎಂದು ಹೇಳಿದರು.

ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಪುಷ್ಪಲತಾ, "ಸಂತ್ರಸ್ತೆಯ ತಾಯಿ ಹೇಳಿಕೆ ಆಧಾರದ ಮೇಲೆ ಗುರುತಿಸಲಾದ ಯುವಕನ ವಿರುದ್ಧ ನಾವು ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ" ಎಂದು ಹೇಳಿದರು.

ಓದಿ: ಆಫ್ಘನ್​ನಿಂದ 75 ಸಿಖ್ಖರ ಸ್ಥಳಾಂತರ: ಕೇಂದ್ರಕ್ಕೆ ಧನ್ಯವಾದ ತಿಳಿಸಿದ ಸಿರ್ಸಾ

Last Updated : Aug 23, 2021, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.