ETV Bharat / bharat

ಅಂಬಾನಿ ಕುಟುಂಬಕ್ಕೆ ಬೆದರಿಕೆ ಒಡ್ಡಿಲ್ಲ: ಜೈಷ್ ಉಲ್ ಹಿಂದ್ - ಮುಂಬೈ ಪೊಲೀಸರಿಂದ ತನಿಖೆ

ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಬೆಳವಣಿಗೆಗಳು ನಡೆಯುತ್ತಿವೆ.

did-not-threaten-the-ambani-family-clarifies-jaish-ul-hind
ಅಂಬಾನಿ ಕುಟುಂಬಕ್ಕೆ ಬೆದರಿಕೆ ಒಡ್ಡಿಲ್ಲ: ಜೈಷ್ ಉಲ್ ಹಿಂದ್
author img

By

Published : Mar 2, 2021, 5:20 AM IST

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ನಿಲ್ಲಿಸಿದ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಜೈಷ್-ಉಲ್- ಹಿಂದ್ ಪ್ರತಿಕ್ರಿಯೆ ನೀಡಿದ್ದು ತಮಗೂ, ಜಿಲೆಟಿನ್ ಕಡ್ಡಿಗಳು ಪತ್ತೆಯಾದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.

did-not-threaten-the-ambani-family-clarifies-jaish-ul-hind
ಜೈಷ್ ಉಲ್ ಹಿಂದ್ ಸಂಘಟನೆಯದ್ದು ಎನ್ನಲಾದ ಪೋಸ್ಟ್​

ಕೆಲವು ದಿನಗಳ ಹಿಂದೆ ಟೆಲಿಗ್ರಾಮ್​ನಲ್ಲಿ ಜೈಷ್ ಉಲ್ ಹಿಂದ್ ಸಂಘಟನೆಯದ್ದು ಎಂದು ಹೇಳಿಕೊಳ್ಳಲಾದ ಪೋಸ್ಟ್​ ವೈರಲ್​ ಆಗಿದ್ದು, ಈ ಪೋಸ್ಟ್​ನಲ್ಲಿ ಮುಕೇಶ್ ಅಂಬಾನಿಯನ್ನು ಬೆದರಿಸಿ, ಹಣಕ್ಕೆ ಬೇಡಿಕೆ ಇಡಲು ಕಾರಿನಲ್ಲಿ ಜಿಲೆಟಿನ್ ಕಡ್ಡಿ ಇಟ್ಟಿರುವಾಗಿ ಉಲ್ಲೇಖಿಸಲಾಗಿತ್ತು.

ಈ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಜೈಷ್ ಉಲ್ ಹಿಂದ್, ಘಟನೆಗೂ, ನಮಗೂ ಯಾವುದೇ ಸಂಬಂಧವಿಲ್ಲ. ನಾವು ಮುಕೇಶ್ ಅಂಬಾನಿಗೆ ಯಾವುದೇ ಬೆದರಿಕೆ ಒಡ್ಡಿಲ್ಲ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಇನ್ಸ್​ಟಾದಲ್ಲಿ 'ವಿರಾಟ' ಪರ್ವ: ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ ನಾಯಕನ ಹವಾ..

ಇದರ ಜೊತೆಗೆ ಕಾಫೀರರಿಂದ ನಾವು ಹಣ ತೆಗೆದುಕೊಳ್ಳುವುದಿಲ್ಲ. ಉದ್ಯಮಿಗಳೊಂದಿಗೆ ನಾವು ಯಾವುದೇ ರೀತಿಯ ವಿವಾದ ಹೊಂದಿಲ್ಲ. ನಾವು ಬಿಜೆಪಿ, ಆರ್​ಎಸ್​ಎಸ್​ನ ಫ್ಯಾಸಿಸಂ ವಿರುದ್ಧ, ನರೇಂದ್ರ ಮೋದಿ ಮುಸ್ಲಿಂರಿಗೆ ಮಾಡುತ್ತಿರುವ ಅನ್ಯಾಯದ​ ವಿರುದ್ಧ ಮತ್ತು ಷರಿಯಾ ಪರ ಹೋರಾಡುತ್ತೇವೆ, ಹಣಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದೆ.

ಜೈಷ್-ಉಲ್- ಹಿಂದ್​ನ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಈ ಸಂಘಟನೆಯ ಅಸ್ಥಿತ್ವದ ಬಗ್ಗೆ ಮುಂಬೈ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.