ಪನ್ನಾ(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿವೆ. ಇದರ ಮಧ್ಯೆ ಕೂಡ ಪನ್ನಾದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಗಳು ಸಿಕ್ಕಿವೆ. ಅವುಗಳನ್ನ ಹರಾಜು ಹಾಕಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಮಧ್ಯಪ್ರದೇಶದ ಪನ್ನಾದಲ್ಲಿ ಈ ಹಿಂದಿನಿಂದಲೂ ಹೇರಳವಾಗಿ ವಜ್ರದ ಹರಳುಗಳು ಸಿಗುತ್ತಿರುತ್ತವೆ. ಚುನಾವಣೆ ಸಂದರ್ಭದಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ಹರಳುಗಳು ಪತ್ತೆಯಾಗಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ 21.60 ಕ್ಯಾರೆಟ್‌ನ 6 ವಜ್ರಗಳು ಸಿಕ್ಕಿದ್ದು, ಇವುಗಳ ಅಂದಾಜು ಬೆಲೆ 56 ಲಕ್ಷ 98 ಸಾವಿರದ 640 ರೂ ಎನ್ನಲಾಗಿದೆ.
ಜೂನ್‌ನಲ್ಲಿ 12 ವಜ್ರಗಳನ್ನು ವಜ್ರ ಸಿಕ್ಕಿದ್ದು,ಇದರಲ್ಲಿ 9 ಬ್ರೈಟ್, 2 ನೊಸ್ ಮತ್ತು 1 ನೋಸ್ ಹಾಲೊಡಕು ಬಣ್ಣದ ವಜ್ರ ಆಗಿದೆ. ಈ ವಜ್ರಗಳ ತೂಕ 44.39 ಕ್ಯಾರೆಟ್ ಆಗಿದ್ದು, ಇದರ ಅಂದಾಜು ಮೌಲ್ಯ 6 ಕೋಟಿ 73 ಲಕ್ಷ 7 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: 24 ವಾರಗಳ ಗರ್ಭಪಾತಕ್ಕೆ ಅವಕಾಶ ನೀಡಿದ ಸುಪ್ರೀಂ..'ಸುರಕ್ಷತೆಯ ಅಂಶ' ಅಧ್ಯಯನಕ್ಕೆ AIIMSಗೆ ನಿರ್ದೇಶನ
ಮಧ್ಯಪ್ರದೇಶದಲ್ಲಿ ಸ್ಥಳೀಯ ಚುನಾವಣೆ ನಡೆಯುತ್ತಿರುವ ಕಾರಣ ಹರಾಜು ಪ್ರಕ್ರಿಯೆ ನಡೆದಿಲ್ಲ. ಮುಂದಿನ ಕೆಲ ದಿನಗಳಲ್ಲಿ ಇದರ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.