ETV Bharat / bharat

ಆಧುನಿಕ ಶೈಲಿಯಲ್ಲಿ ರೈತರ ಸಹಾಯಕ್ಕೆ ಮುಂದಾದ ಧೋನಿ.. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ರು ಹಣ!

ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ, ಇದೀಗ ಡ್ರೋನ್ ಕಂಪನಿಯಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ಈ ಮೂಲಕ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

Dhoni Indian Garuda Drone Company
Dhoni Indian Garuda Drone Company
author img

By

Published : Jun 6, 2022, 4:38 PM IST

ಚೆನ್ನೈ(ತಮಿಳುನಾಡು): ಟೀಂ ಇಂಡಿಯಾ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡು ಈಗಾಗಲೇ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಒಲವು ಹೊಂದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಆಧುನಿಕ ಶೈಲಿಯಲ್ಲಿ ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಅವರು, ಮಹತ್ವದ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇಂಡಿಯನ್​ ಗರುಡ ಡ್ರೋನ್ ಕಂಪನಿಯಲ್ಲಿ ಶೇರ್​ ಖರೀದಿಸಿರುವ ಮಾಹಿ, ರೈತರಿಗೆ ನೆರವಾಗಲು ನಿರ್ಧಾರ ಕೈಗೊಂಡಿದ್ದಾರೆ.

ಗರುಡ ಕಂಪನಿಯ ಡ್ರೋನ್​​ಗಳು ರೈತರಿಗೆ ಸಹಕಾರಿಯಾಗಿದ್ದು, ಅವುಗಳ ಸಹಾಯದಿಂದ ಕೀಟನಾಶಕ, ಕಳೆನಾಶಕ, ನೀರು, ರಸಗೊಬ್ಬರವನ್ನ ಸುಲಭವಾಗಿ ಬೆಳೆಗಳಿಗೆ ಹಾಕಬಹುದಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಜಮೀನಿಗೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಲು ಈ ಡ್ರೋನ್​ಗಳು ಸಹಕಾರಿಯಾಗಿದ್ದು, ಧೋನಿ ಇದೀಗ ಶೇರ್ ಹೋಲ್ಡರ್​ ಆಗಿದ್ದಾರೆ.

ಗರುಡ ಏರೋಸ್ಪೇಸ್​​ನ ಷೇರುದಾರರ ಜೊತೆ ಬ್ರಾಂಡ್​ ಅಂಬಾಸಿಡರ್​ ಆಗಿರುವ ಧೋನಿ, ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಗರುಡ ಕಂಪನಿಯಲ್ಲಿ ಧೋನಿ ಎಷ್ಟೊಂದು ಹಣ ಹೂಡಿಕೆ ಮಾಡಿದ್ದಾರೆಂಬುದರ ಬಗ್ಗೆ ಯಾವುದೇ ರೀತಿಯ ವಿವರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಗರುಡ ಎರೋಸ್ಪೇಸ್​​ನ ಭಾಗವಾಗಲು ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆಂದು ಕಂಪನಿ ಪ್ರಕಟಣೆ ಹೊರಡಿಸಿದೆ. ಗರುಡ ಕಂಪನಿಯ 300 ಡ್ರೋನ್​​ಗಳು ಈಗಾಗಲೇ 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ 500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಆಸ್ಟ್ರೇಲಿಯಾ ತಂಡ ಪ್ರಕಟ; ವಾರ್ನರ್​, ಸ್ಮಿತ್ ಕಮ್​ಬ್ಯಾಕ್​

ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಸದ್ಯ ಐಪಿಎಲ್​​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ರಾಂಚಿಯಲ್ಲಿರುವ ತಮ್ಮ ಫಾರ್ಮ್​​​ಹೌಸ್​ನಲ್ಲಿ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ ಬಟ್ಟೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.