ETV Bharat / bharat

ವಿಧಾನಸಭೆ ಸದಸ್ಯರಾಗಿ ಗುರುವಾರ ದೀದಿ ಪ್ರಮಾಣವಚನ.. ರಾಜ್ಯಪಾಲರಿಂದಲೇ ಏಕೆ ಶಾಸಕರಿಗೆ Otha? - ಮಮತಾ ಬ್ಯಾನರ್ಜಿ ಪ್ರಮಾಣವಚನ

ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಭವಾನಿಪುರದ ನೂತನ ಚುನಾಯಿತ ಶಾಸಕಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಅಕ್ಟೋಬರ್ 7, 2021 ರಂದು ಬೆಳಗ್ಗೆ 11.45 ರಂದು ಅಸೆಂಬ್ಲಿಯಲ್ಲಿ ಕಾರ್ಯಕ್ರಮ ನಿಗದಿಪಡಿಸಲಾಗಿದೆ.

Mamata Banerjee
ಗುರುವಾರ ಮಮತಾ ಬ್ಯಾನರ್ಜಿ ಪ್ರಮಾಣವಚನ
author img

By

Published : Oct 5, 2021, 7:15 PM IST

ಕೋಲ್ಕತಾ (ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಭವಾನಿಪುರದ ನೂತನ ಚುನಾಯಿತ ಶಾಸಕಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಅಕ್ಟೋಬರ್ 7, 2021 ರಂದು ಬೆಳಿಗ್ಗೆ 11.45 ರಂದು ಅಸೆಂಬ್ಲಿಯಲ್ಲಿ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ. ಹೊಸದಾಗಿ ಆಯ್ಕೆಯಾದ ಇಬ್ಬರು ತೃಣಮೂಲ ಕಾಂಗ್ರೆಸ್ ಶಾಸಕರಾದ ಜಂಗೀಪುರದಿಂದ ಜಾಕೀರ್ ಹುಸೇನ್ ಮತ್ತು ಸಂಸೆರ್‌ಗುಂಜ್‌ನ ಅಮಿರುಲ್ ಇಸ್ಲಾಂ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಭವಾನಿಪುರದ ಉಪಚುನಾವಣೆ ಮತ್ತು ಜಂಗೀಪುರ ಮತ್ತು ಸಂಸರ್‌ಗ್ಂಜ್‌ನ ಚುನಾವಣೆಯ ಫಲಿತಾಂಶಗಳನ್ನು ಅಕ್ಟೋಬರ್ 3, 2021 ರಂದು ಘೋಷಿಸಲಾಯಿತು. ಅದರ ನಂತರ ಮುಖ್ಯಮಂತ್ರಿಯವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ತೊಡಕುಗಳು ಉಂಟಾಗಿದ್ದವು. ಮುಖ್ಯವಾಗಿ ಕಾರ್ಯಕ್ರಮದ ದಿನಾಂಕ ಸಂಬಂಧ ಗೊಂದಲ ಉಂಟಾಗಿತ್ತು.

ದೀದಿ ಮನವಿಗೆ ಒಕೆ ಎಂದ ಗರ್ವನರ್​

ಆದರೆ, ಮಂಗಳವಾರ ತಡರಾತ್ರಿ ರಾಜ್ಯಪಾಲರು ಗೊಂದಲವನ್ನು ಪರಿಹರಿಸಿದ್ದರು. ಮುಖ್ಯಮಂತ್ರಿಯವರು ಗುರುವಾರ ಪ್ರಮಾಣವಚನ ಬೋಧಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು. ರಾಜ್ಯಪಾಲರು ಅದಕ್ಕೆ ಒಪ್ಪಿದ್ದಾರೆ. ಆದ್ದರಿಂದ ಗುರುವಾರ, ಅಂದರೆ ಮಹಾಲಯ ಅಮವಾಸ್ಯೆಯ ಒಂದು ದಿನದ ನಂತರ, ರಾಜ್ಯಪಾಲರು ಮಮತಾ ಬ್ಯಾನರ್ಜಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಗೊಂದಲಕ್ಕೆ ತೆರೆ ಎಳೆದ ರಾಜ್ಯಪಾಲರು

ಪ್ರಮಾಣವಚನ ಕಾರ್ಯಕ್ರಮವನ್ನು ರಾಜಭವನದಲ್ಲಿ ನಡೆಸಬೇಕೇ ಅಥವಾ ವಿಧಾನಸಭೆ ಆವರಣದಲ್ಲಿ ಮಾಡಬೇಕೇ ಎಂಬ ಗೊಂದಲ ಇತ್ತು. ಈ ಕಾರ್ಯಕ್ರಮವು ರಾಜಭವನದಲ್ಲಿ ನಡೆದರೆ, ವಿಧಾನಸಭಾ ಸ್ಪೀಕರ್, ಬಿಮನ್ ಬಂಡೋಪಾಧ್ಯಾಯ ಆ ಕಾರ್ಯಕ್ರಮವನ್ನು ಬಿಟ್ಟುಬಿಡಬಹುದು ಎಂದು ಹೇಳಲಾಗಿತ್ತು. ಆದಾಗ್ಯೂ, ಸ್ವತಃ ರಾಜ್ಯಪಾಲರು ಟ್ವಿಟರ್ ಸಂದೇಶ ಕಳುಹಿಸಿ ಮಂಗಳವಾರದ ಗೊಂದಲವನ್ನು ಕೊನೆಗೊಳಿಸಿದ್ದರು. ವಿಧಾನಸಭೆ ಆವರಣದಲ್ಲೇ ಪ್ರಮಾಣ ವಚನ ಕಾರ್ಯಕ್ರಮ ಜರುಗಲಿದೆ.

ಸ್ಪೀಕರ್​​ ಅವರೇ ಪ್ರಮಾಣವಚನ ಬೋಧಿಸಬೇಕಲ್ವೇ?

ಸಾಮಾನ್ಯವಾಗಿ, ಹೊಸದಾಗಿ ಚುನಾಯಿತರಾದ ಶಾಸಕರಿಗೆ ಸ್ಪೀಕರ್ ಪ್ರಮಾಣವಚನ ಬೋಧಿಸುತ್ತಾರೆ. ಅದಕ್ಕಾಗಿ ವಿಧಾನಸಭೆ ಅಧಿಕಾರಿಗಳು ರಾಜ್ಯಪಾಲರ ಕಚೇರಿಯಿಂದ ಅನುಮತಿ ಪಡೆಯಬೇಕು. ರಾಜ್ಯಪಾಲರು ಅಧಿಕಾರವನ್ನು ಸ್ಪೀಕರ್‌ಗೆ ಹಸ್ತಾಂತರಿಸುತ್ತಾರೆ. ಆದರೆ ರಾಜ್ಯಪಾಲರು ಬಯಸಿದರೆ ಅವರೇ ಪ್ರಮಾಣವಚನವನ್ನೂ ಬೋಧಿಸಬಹುದು.

ಇದೀಗ ರಾಜ್ಯಪಾಲರೇ ಪ್ರಮಾಣವಚನ ಬೋಧಿಸುವುದಾಗಿ ಹೇಳಿರುವುದರಿಂದ ಅವರೇ ಈ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ. ಈ ಉಪಚುನಾವಣೆಯಲ್ಲಿ ದಾಖಲೆಯ 58,835 ಮತಗಳ ಅಂತರದಿಂದ ದೀದಿ ಗೆದ್ದಿದ್ದಾರೆ. ಅವರು ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಚುನಾವಣೆಯಲ್ಲಿ ಗೆಲ್ಲುವ ಅಗತ್ಯವಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.