ಜಲೌನ್(ಉತ್ತರ ಪ್ರದೇಶ): ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಮಗನ ಕಾರು ಅಪಘಾತಕ್ಕೀಡಾಗಿದ್ದು, ಯೋಗೀಶ್ ಕುಮಾರ್ ಮೌರ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ಜಲೌನ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಯೋಗೇಶ್ ಮೌರ್ಯ ಪ್ರಯಾಣಿಸುತ್ತಿದ್ದ ಕಾರು ಇಂದು ಮಧ್ಯಾಹ್ನ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿರುವ ಪರಿಣಾಮ ನಜ್ಜುಗುಜ್ಜಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಆಗಿಲ್ಲವೆಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಜಲೌನ್ನ ಆಲಂಪುರದ ಬೈಪಾಸ್ ಬಳಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕಾಗಮಿಸಿರುವ ಕಲ್ಪಿ ಪೊಲೀಸ್ ಠಾಣೆಯ ಅಧಿಕಾರಿಗಳು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅದೃಷ್ಟವಶಾತ್ ಉಪ ಮುಖ್ಯಮಂತ್ರಿ ಮಗ ಯೋಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
-
माँ पीतांबरा की असीम अनुकंपा एवं आप सभी के आशीर्वाद से पुत्र योगेश कुमार मौर्य पूर्ण रूप से स्वस्थ है। चिकित्सकों के परामर्श से कुछ देर में पुनः माँ पितांबरा के दर्शन/पूजन हेतु प्रस्थान करेंगे। pic.twitter.com/kIcq0LMr2e
— Keshav Prasad Maurya (@kpmaurya1) March 26, 2022 " class="align-text-top noRightClick twitterSection" data="
">माँ पीतांबरा की असीम अनुकंपा एवं आप सभी के आशीर्वाद से पुत्र योगेश कुमार मौर्य पूर्ण रूप से स्वस्थ है। चिकित्सकों के परामर्श से कुछ देर में पुनः माँ पितांबरा के दर्शन/पूजन हेतु प्रस्थान करेंगे। pic.twitter.com/kIcq0LMr2e
— Keshav Prasad Maurya (@kpmaurya1) March 26, 2022माँ पीतांबरा की असीम अनुकंपा एवं आप सभी के आशीर्वाद से पुत्र योगेश कुमार मौर्य पूर्ण रूप से स्वस्थ है। चिकित्सकों के परामर्श से कुछ देर में पुनः माँ पितांबरा के दर्शन/पूजन हेतु प्रस्थान करेंगे। pic.twitter.com/kIcq0LMr2e
— Keshav Prasad Maurya (@kpmaurya1) March 26, 2022
ಇದನ್ನೂ ಓದಿ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಹಲ್ಲೆ ಆರೋಪ..
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಹಾನಿಗೊಂಡಿದೆ ಎಂದಿರುವ ಅವರು, ಅಪಘಾತ ನಡೆದ ಸಂದರ್ಭದಲ್ಲಿ ಡೆಪ್ಯುಟಿ ಸಿಎಂ ಅವರ ಮಗ ಯೋಗೇಶ್ ಕಾರಿನೊಳಗೆ ಇದ್ದರು ಎಂದು ಖಚಿತಪಡಿಸಿದ್ದಾರೆ. ನಿನ್ನೆ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಡೆಪ್ಯುಟಿ ಸಿಎಂ ಆಗಿ ಕೇಶವ್ ಪ್ರಸಾದ್ ಮೌರ್ಯ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.