ಹೈದರಾಬಾದ್(ತೆಲಂಗಾಣ): ಖಿನ್ನತೆಗೊಳಗಾಗಿದ್ದ 25 ವರ್ಷದ ಬಿಡಿಎಸ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ತಂದರೆ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇಲ್ಲಿನ ಆರ್ಮಿ ಕಾಲೇಜ್ನ ಡೆಂಟಲ್ ಸೈನ್ಸ್ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜುಲೈ 31ರಂದು ಹಾಸ್ಟೆಲ್ ರೂಂನಲ್ಲಿನ ಪ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. BDSನ ನಾಲ್ಕನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೂಲತಃ ಹರಿಯಾಣದವಳು ಎಂದು ತಿಳಿದು ಬಂದಿದೆ. ಆಕೆ ನೇಣಿಗೆ ಶರಣಾಗಿರುವ ಸುದ್ದಿಯನ್ನ ಕಾಲೇಜ್ನ ಸಿಬ್ಬಂದಿ ವರ್ಗಕ್ಕೆ ನೀಡಲಾಗಿತ್ತು.
ಇದನ್ನೂ ಓದಿರಿ: ಗಾಯದ ಮೇಲೆ ಬರೆ.. ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಕನ್ನಡಿಗ ಮಯಾಂಕ್ ಅಗರವಾಲ್
ಪೋಷಕರು ನೀಡಿರುವ ಮಾಹಿತಿ ಪ್ರಕಾರ, ಖಿನ್ನತೆಗೊಳಗಾಗಿರುವ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ. 2016-17ರಲ್ಲಿ MBBS ಕೋರ್ಸ್ಗೋಸ್ಕರ ಸೀಟ್ ಸಿಗದ ಕಾರಣ BDS ಮಾಡಿದ್ದಳು. ಆದರೆ, ಇದರಿಂದ ಖಿನ್ನತೆಗೊಳಗಾಗಿದ್ದಳು ಎಂದು ತಿಳಿದು ಬಂದಿದೆ.
ಈ ವೇಳೆ, ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಕಳೆದ ವಾರವಷ್ಟೇ ವಿದ್ಯಾರ್ಥಿ ಜೊತೆ ಆಕೆಯ ತಾಯಿ ವಿಡಿಯೋ ಕಾಲ್ ಮಾಡಿ ಮದುವೆ ವಿಷಯ ಪ್ರಸ್ತಾಪ ಮಾಡಿದ್ದರಂತೆ. ಈ ವೇಳೆ ಎಲ್ಲರೊಂದಿಗೆ ಸರಿಯಾಗಿ ಮಾತನಾಡಿದ್ದಳು ಎಂದು ಅವರು ತಿಳಿಸಿದ್ದಾರೆ.