ETV Bharat / bharat

ಮಗಳನ್ನು ಬರ್ಬರವಾಗಿ ಕೊಂದ ಸಾಹಿಲ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೋಷಕರ ಆಗ್ರಹ.. ಕೇಜ್ರಿವಾಲ್​​ರಿಂದ 10 ಲಕ್ಷ ಪರಿಹಾರ ಘೋಷಣೆ

ಅತ್ಯಂತ ಅಮಾನುಷವಾಗಿ ತಮ್ಮ ಮಗಳನ್ನು ಹತ್ಯೆಗೈದ ದುರುಳನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಈ ನಡುವೆ ಆರೋಪಿಗೆ ಸೂಕ್ತ ಶಿಕ್ಷೆಗೆ ಕ್ರಮ ವಹಿಸುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್​ ಭರವಸೆ ನೀಡಿದ್ದಾರೆ. ಅಲ್ಲದೇ ಸಾವನ್ನಪ್ಪಿದ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

Delhi teen murder: accused arrested
ಬಂಧಿತ ಆರೋಪಿ
author img

By

Published : May 30, 2023, 9:37 AM IST

Updated : May 30, 2023, 10:33 PM IST

ನವದೆಹಲಿ: ಇಲ್ಲಿನ ಶಹಬಾದ್‌ ಡೈರಿ ಪ್ರದೇಶದಲ್ಲಿ ಭಾನುವಾರ ಬರ್ಬರವಾಗಿ ಹತ್ಯೆಗೀಡಾದ 16 ವರ್ಷದ ಬಾಲಕಿ ಸಾಕ್ಷಿಯ ಪೋಷಕರು ಆರೋಪಿ ಸಾಹಿಲ್ ಖಾನ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ, ''ರಾತ್ರಿ 8:30ಕ್ಕೆ ನನ್ನ ಮಗಳನ್ನು ಕೊಂದಿರುವ ವಿಷಯ ಗೊತ್ತಾಯಿತು. ನಮ್ಮ ಮನೆಗೆ ಬಂದ ಹುಡುಗಿಯೊಬ್ಬಳು ಮಾಹಿತಿ ನೀಡಿದಳು. ಬಹುಶಃ ಅವರಿಬ್ಬರ ನಡುವೆ ಜಗಳ ಆಗಿರಬಹುದು ಎಂದು ನಾನು ಭಾವಿಸಿದೆ. ನಾನು ಮತ್ತು ಹೆಂಡತಿ ಅಲ್ಲಿಗೆ ಹೋದಾಗ ನಮ್ಮ ಮಗಳು ತುಂಬಾ ದಯನೀಯ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆ ಕಳೆದ ಕೆಲವು ದಿನಗಳಿಂದ ನನ್ನ ಅತ್ತಿಗೆಯ ಮನೆಯಲ್ಲಿ ವಾಸಿಸುತ್ತಿದ್ದಳು. ನಾನು ಕೂಲಿ ಕೆಲಸ ಮಾಡುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಅವಳು ಮೊದಲನೆಯವಳು. ತನ್ನ ಮಗಳನ್ನು ಕೊಂದ ಆರೋಪಿ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಮಗಳು ಅವನ ಸ್ನೇಹಿತೆ ಎಂಬುವುದು ಕೂಡ ನನಗೆ ಗೊತ್ತಿಲ್ಲ. ನಾನು ಅವನನ್ನು ನೋಡಿಲ್ಲ. ಅವಳ ಸ್ನೇಹಿತರಲ್ಲಿ ಯಾರೊಬ್ಬರೂ ಹೇಳಲಿಲ್ಲ. ನನ್ನ ಮಗಳು ತುಂಬಾ ಒಳ್ಳೆಯ ಸ್ವಭಾವದವಳು. ಆತನಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಹೇಳಿದರು.

  • Sahil, accused of the 16-year-old girl murder case in Delhi has been arrested near Bulandshahr, Uttar Pradesh.

    (Source: Police) pic.twitter.com/TtGnRAR37B

    — ANI (@ANI) May 29, 2023 " class="align-text-top noRightClick twitterSection" data=" ">

ಸಂತ್ರಸ್ತೆಯ ತಾಯಿ ಹೇಳಿದ್ದೇನು?: "ಬಾಲಕಿಯೊಬ್ಬಳು ಘಟನೆಯ ಬಗ್ಗೆ ನಮಗೆ ತಿಳಿಸಿದಾಗ ನನಗೆ ಆಘಾತವಾಯಿತು. ಆರಂಭದಲ್ಲಿ ನಾನು ಅವಳ ಮಾತು ನಂಬಲಿಲ್ಲ. ಆರೋಪಿ ಸಾಹಿಲ್ ಖಾನ್‌ ಎಂಬಾತನ್ನು ಯಾವತ್ತೂ ನೋಡಿಲ್ಲ. ನಾವು ನಮ್ಮ ಮಗಳಿಗೆ ನ್ಯಾಯ ಕೊಡಿಸುತ್ತೇವೆ" ಎಂದು ತಾಯಿ ಕಣ್ಣೀರು ಹಾಕಿದರು.

10 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಕೇಜ್ರಿವಾಲ್: ರಾಷ್ಟ್ರ ರಾಜಧಾನಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಗೀಡಾದ 16 ವರ್ಷದ ಬಾಲಕಿಯ ಕುಟುಂಬಕ್ಕೆ ನಮ್ಮ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ.

"ಇದು ಅತ್ಯಂತ ನೋವಿನ ಘಟನೆ. ದೆಹಲಿ ಸರ್ಕಾರವು ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ನೀಡಲಿದೆ" ಎಂದು ದೆಹಲಿ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆರೋಪಿಗೆ ಕಠಿಣ ಶಿಕ್ಷೆಯಾಗುವುದನ್ನು ತಮ್ಮ ಸರ್ಕಾರ ಖಚಿತಪಡಿಸುತ್ತದೆ ಎಂದು ಕೇಜ್ರಿವಾಲ್ ಸಂತ್ರಸ್ತೆಯ ಕುಟುಂಬಕ್ಕೆ ಅವರು ಭರವಸೆ ನೀಡಿದರು.

  • #WATCH | Delhi: "My daughter was stabbed many times, her head was also bludgeoned into pieces. We demand stringent punishment for the accused," says Father of the 16-year-old minor girl who was stabbed to death by 20-year-old accused, Sahil, in Shahbad dairy area pic.twitter.com/CkRJhXIAVx

ಆರೋಪಿ ಪೊಲೀಸರಿಗೆ ಸಿಕ್ಕಿದ್ದು ಹೇಗೆ?: ಘಟನೆಯ ನಂತರ ಆರೋಪಿ ಸಾಹಿಲ್ ಖಾನ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಬಸ್‌ನಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೊರಟಿದ್ದ. ಈತನ ಹಠಾತ್ ಆಗಮನದ ಬಗ್ಗೆ ಅವನ ಚಿಕ್ಕಮ್ಮ (ಬುವಾ) ತಂದೆಗೆ ಫೋನ್ ಮಾಡಿದ್ದರು. ಈ ಫೋನ್​ ಕರೆ ಆರೋಪಿಯ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿತು. ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕಾಗಿ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

"ಸಾಹಿಲ್​ ಖಾನ್‌​ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಬಳಿ ಬಂಧಿಸಲಾಗಿದೆ. ಆತನ ಚಿಕ್ಕಮ್ಮನಿಂದ ತಂದೆಗೆ ಬಂದ ಕರೆ ಆಧರಿಸಿ ಸ್ಥಳ ಪತ್ತೆ ಹಚ್ಚಲಾಗಿದೆ. ಸದ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆತನನ್ನು ಸೋಮವಾರ ರಾತ್ರಿ ದೆಹಲಿಗೆ ಕರೆತರಲಾಗಿದೆ. ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ" ಎಂದು ದೆಹಲಿ ಪೊಲೀಸ್ ಅಧಿಕಾರಿ ದೇವೇಂದ್ರ ಪಾಠಕ್ ಹೇಳಿದ್ದಾರೆ.

ಪ್ರೇಮ ವೈಫಲ್ಯ ಹತ್ಯೆಗೆ ಕಾರಣವೇ?: ಸಂತ್ರಸ್ತೆ 2021 ರಿಂದ ಸಾಹಿಲ್ ಜತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅವರು ಆಗಾಗ ಜಗಳವಾಡುತ್ತಿದ್ದರು. ಈ ನಡುವೆ ಹಳೆಯ ಪ್ರೇಮ ಸಂಬಂಧದ ಬಗ್ಗೆ ವಿಚಾರ ಹಂಚಿಕೊಂಡಿದ್ದಳು. ಬಳಿಕ ಆಕೆ ಸಾಹಿಲ್​​ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿ, ಅವನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು. ಆದರೆ ಸಾಹಿಲ್​ ಅವಳನ್ನು ಸಂಪರ್ಕಿಸುತ್ತಲೇ ಇದ್ದನಂತೆ. ಮತ್ತೆ ಒಂದಾಗಲು ಬಯಸಿದ್ದನಂತೆ. ಶನಿವಾರ ಸಹ ಇದೇ ವಿಚಾರವಾಗಿ ಇಬ್ಬರು ಜಗಳವಾಡಿದ್ದರು. ಇದರಿಂದ ಅವರ ಸಂಬಂಧ ಇನ್ನಷ್ಟು ಹದಗೆಟ್ಟಿತ್ತು. ಅಂತಿಮವಾಗಿ ಆಕೆಯ ಹತ್ಯೆಗೆ ಇದು ಕಾರಣವಾಗಿರಬಹುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಯ ಕೈಯಲ್ಲಿ "ಪ್ರವೀಣ್" ಎಂಬ ಹೆಸರಿನ ಹಚ್ಚೆಯಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಸಂತ್ರಸ್ತೆ ತನ್ನ ಮಾಜಿ ಪ್ರಿಯಕರನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ್ದಾನೆ. ಕೆಲವು ದಿನಗಳ ಹಿಂದೆ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯ ದೇಹದಲ್ಲಿ 34 ಗಾಯದ ಗುರುತುಗಳು ಕಂಡು ಬಂದಿವೆ ಮತ್ತು ಆಕೆಯ ತಲೆಬುರುಡೆ ಛಿದ್ರಗೊಂಡಿದೆ. ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದುವರೆದ ತನಿಖೆ: "ಆರೋಪಿ ಸಾಹಿಲ್ ಮತ್ತು ಮೃತ ಅಪ್ರಾಪ್ತೆ ನಡುವೆ ಪ್ರೇಮ ಸಂಬಂಧವಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಭಾನುವಾರ ಇಬ್ಬರಿಗೂ ಜಗಳವಾಗಿದೆ. ನಂತರ ಆಕೆ ಜನ್ಮದಿನದ ಕಾರ್ಯಕ್ರಮವೊಂದಕ್ಕೆ ಬೀದಿಯಲ್ಲಿ ಹೋಗುತ್ತಿದ್ದಾಗ ಎದುರಾದ ಸಾಯಿಲ್ 20 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆಕೆಯ ಶವ ರಸ್ತೆಯಲ್ಲಿಯೇ ಬಹಳ ಹೊತ್ತು ಅನಾಥವಾಗಿ ಬಿದ್ದಿತ್ತು. ನಾವು ಆರೋಪಿ ಸಾಹಿಲ್‌ನನ್ನು ಉತ್ತರಪ್ರದೇಶದ ಬುಲಂದ್‌ಶಹರ್‌ನಿಂದ ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ" ಎಂದು ಉಪ ಪೊಲೀಸ್ ಆಯುಕ್ತ ರವಿಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

"ಅಶಿಕ್ಷಿತ ವ್ಯಕ್ತಿ ಕೂಡ ಈ ರೀತಿ ಯಾರನ್ನಾದರೂ ಕೊಲ್ಲುವಷ್ಟು ಕ್ರೂರನಾಗಿರಲು ಸಾಧ್ಯವಿಲ್ಲ. ಘಟನೆ ನಡೆದಾಗ ಸ್ಥಳದಲ್ಲಿ ಹಲವಾರು ಜನರಿದ್ದರು. ಆದರೆ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಂಗವು ಈ ವಿಷಯವನ್ನು ತ್ವರಿತ ವಿಚಾರಣೆಗೆ ತೆಗೆದುಕೊಳ್ಳಬೇಕು. ಮತ್ತು ತೀರ್ಪನ್ನು ಆದಷ್ಟು ಬೇಗ ಪ್ರಕಟಿಸಿಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ( ಎನ್‌ಸಿಡಬ್ಲ್ಯೂ)ದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ.

"ಇದು, ತುಂಬ ನೋವು ಉಂಟುಮಾಡುವ ಕೃತ್ಯ. ಇನ್ನೂ ಶ್ರದ್ಧಾ ವಾಲ್ಕರ್‌ಗೆ ನ್ಯಾಯ ಸಿಕ್ಕಿಲ್ಲ. ಇನ್ನು ಎಷ್ಟು ಜನ ಶ್ರದ್ಧಾಗಳು ಹೀಗೆ ಕ್ರೂರವಾಗಿ ಬಲಿಪಶುಗಳಾಗಬೇಕೊ ತಿಳಿಯುತ್ತಿಲ್ಲ" ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ರಾಜಧಾನಿಯಲ್ಲಿ ಜನರ ರಕ್ಷಣೆ ಮಾಡುವ ಹೊಣೆಯನ್ನು ಸಂವಿಧಾನ ಲೆಫ್ಟಿನಂಟ್‌ ಗವರ್ನರ್ ಅವರಿಗೆ ನೀಡಿದೆ. ಅವರು ಕೇಜ್ರಿವಾಲ್ ಅವರ ಕೆಲಸಗಳಿಗೆ ತಡೆಯೊಡ್ಡುತ್ತಾ ಕಾಲಹರಣ ಮಾಡುತ್ತಿದ್ದಾರೆ" ಎಂದು ಎಎಪಿ ಹಿರಿಯ ನಾಯಕಿ ಅತಿಷಿ ಟೀಕಿಸಿದ್ದಾರೆ.

ದೆಹಲಿಯ ಶಹಬಾದ್‌ ಡೈರಿ ಪ್ರದೇಶದಲ್ಲಿ ಭಾನುವಾರ ರಾತ್ರಿ 16 ವರ್ಷದ ಬಾಲಕಿಗೆ ಸುಮಾರು 20 ಬಾರಿ ಚಾಕುವಿನಿಂದ ಇರಿದು ಬಳಿಕ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರೋಪಿ ಫ್ರಿಡ್ಜ್ ಮತ್ತು ಹವಾನಿಯಂತ್ರಕ ಪರಿಕರಗಳ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ. ಬಾಲಕಿ ಜೆ.ಜೆ.ಕಾಲೊನಿಯ ನಿವಾಸಿ.

ಜನದಟ್ಟಣೆ ನಡುವೆಯೇ ಕೃತ್ಯ ನಡೆದಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಆರೋಪಿ ಚಾಕುವಿನಿಂದ ಬಾಲಕಿಯನ್ನು ಇರಿಯುತ್ತಿದ್ದುದನ್ನು ಜನರು ನಿಂತು ನೋಡುತ್ತಿದ್ದು, ಯಾರೊಬ್ಬರು ಅದನ್ನು ತಡೆಯುವ ಯತ್ನ ಮಾಡಿಲ್ಲ. ಕೃತ್ಯದ ಹಿಂದೆಯೇ ಸಾಹಿಲ್‌ ಸ್ಥಳದಿಂದ ಪರಾರಿಯಾಗುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

Last Updated : May 30, 2023, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.