ETV Bharat / bharat

Delhi robbery : ದಂಪತಿ ಬಳಿ ದರೋಡೆಗೆ ಖದೀಮರು .. ಅವರ ಬಳಿ ಬರೀ 20 ರೂ. ನಕಲಿ ಆಭರಣ ಕಂಡು 100 ರೂ. ಕೊಟ್ಟು ಪರಾರಿಯಾಗಿದ್ದವರ ಬಂಧನ

ಕುಖ್ಯಾತ ದರೋಡೆಕೋರ ನೀರಜ್ ಬವಾನಿಯಾ ವಿಡಿಯೋ ನೋಡಿ ಪ್ರಭಾವಿತರಾಗಿದ್ದ ಕಳ್ಳರು 100 ರೂ. ಕೊಟ್ಟು ಪರಾರಿಯಾಗಿದ್ದಾರೆ.

author img

By

Published : Jun 25, 2023, 10:55 PM IST

Delhi robbery
ದೆಹಲಿ ದರೋಡೆ

ನವದೆಹಲಿ: ಶಹದಾರ ಜಿಲ್ಲೆಯಲ್ಲಿ ದರೋಡೆಗೆ ಯತ್ನಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಂಪತಿಯನ್ನು ಅಡ್ಡಗಟ್ಟಿದ್ದ ಕಳ್ಳರು ಬಂದೂಕು ತೋರಿಸಿ ಬೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಚಿನ್ನಾಭರಣ ದೋಚಲು ಮುಂದಾದಾಗ ಅದು ನಕಲಿ ಎಂದು ಗೊತ್ತಾಗಿದೆ. ಹಾಗು ಅವರ ಕೇವಲ 20 ರೂ. ಮಾತ್ರ ಇರುವುದನ್ನು ಕಂಡ ಕಳ್ಳರು, ದಂಪತಿಗೆ 100 ರೂ. ಕೊಟ್ಟು ಅಲ್ಲಿಂದ ಪರಾರಿಯಾಗಿದ್ದರು.

ಇದೀಗ ಪರಾರಿಯಾಗಿದ್ದ ಆರೋಪಿಗಳನ್ನು ಶಹದಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಲ್ಮೆಟ್ ಮತ್ತು ಸಂಪೂರ್ಣವಾಗಿ ಬಟ್ಟೆಗಳಿಂದ ಮುಖ ಮುಚ್ಚಿಕೊಂಡು ಕಳ್ಳರು ದರೋಡೆಗೆ ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣ ಕುರಿತು ಮಾಹಿತಿ ನೀಡಿರುವ ಶಹದಾರ ಜಿಲ್ಲೆಯ ಡಿಸಿಪಿ ರೋಹಿತ್ ಮೀನಾ, ಬಂಧಿತ ಆರೋಪಿಗಳನ್ನು ಶಹದಾರ ನಿವಾಸಿ ಹರ್ಷ ರಜಪೂತ್ ಮತ್ತು ಬುರಾರಿ ನಿವಾಸಿ ದೇವ್ ವರ್ಮಾ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಬಂದೂಕು ತೋರಿಸಿ ದಂಪತಿ ದರೋಡೆಗೆ ಯತ್ನಿಸಿರುವ ಬಗ್ಗೆ ಮಾಹಿತಿ ಸಿಕ್ಕತ್ತು. ಮಾಹಿತಿ ತಿಳಿದ ತಕ್ಷಣ ಪಾಗ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅಲ್ಲಿ ದಂಪತಿ ದೂರಿನ ಮೇರೆಗೆ ಪ್ರಕರಣ ದಾಖಲಾಸಿಕೊಂಡಿದ್ದರು.

ಇದನ್ನೂ ಓದಿ : ಭಟ್ಕಳದಲ್ಲಿ ಉದ್ಯಮಿ ಮನೆಗೆ ಕನ್ನ.. ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನ, ನಗದು ಕದ್ದೊಯ್ದ ಖದೀಮರು

ಬಳಿಕ ಆರೋಪಿಗಳ ಚಲನವಲನ ತಿಳಿಯಲು 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ನೋಡಿದ್ದಾರೆ. ಇದೇ ವೇಳೆ ಈಶಾನ್ಯ ಜಿಲ್ಲೆಯ ಸ್ವಾಗತ ಪ್ರದೇಶದಲ್ಲಿ ಇದೇ ದುಷ್ಕರ್ಮಿಗಳು ಸರಗಳ್ಳತನ ನಡೆಸಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳನ್ನು ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡ ನಂತರ ಸ್ಥಳೀಯರ ಮಾಹಿತಿ ಸಹಕಾರದಿಂದ ಮೊದಲು ಆರೋಪಿ ಹರ್ಷ ರಜಪೂತ್ ಎಂಬಾತನನ್ನು ಜಗತ್ಪುರಿಯಲ್ಲಿ ಬಂಧಿಸಿ ವಿಚಾರಣೆ ನಡೆಸಿದ ನಂತರ ಆತನ ಸಹಚರ ದೇವ್ ವರ್ಮಾನನ್ನು ಬುರಾರಿಯ ಸಂತ ನಗರದಲ್ಲಿ ಬಂಧಿಸಲಾಯಿತು.

ದೇವ್ ವರ್ಮಾ ಖಾಸಗಿ ಸಂಸ್ಥೆಯೊಂದರಲ್ಲಿ ಜಿಎಸ್‌ಟಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಮತ್ತೋರ್ವ ಅರೋಪಿ ಹರ್ಷ ರಜಪೂತ್ ಮೊಬೈಲ್ ಮೆಕ್ಯಾನಿಕ್ ಆಗಿದ್ದಾನೆ. ಈ ಇಬ್ಬರು ಕುಖ್ಯಾತ ದರೋಡೆಕೋರ ನೀರಜ್ ಬವಾನಿಯಾ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಿ ನಂತರ ನೀರಜ್ ಬವಾನಿಯಾ ಜೀವನಶೈಲಿಯಿಂದ ಇವರು ಸ್ಫೂರ್ತಿ ಪಡೆದು ಅಪರಾಧದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ತಮ್ಮನ್ನು ನೀರಜ್ ಬವಾನಿಯಾ ಗ್ರೂಪ್‌ನ ಸದಸ್ಯರು ಎಂದು ಕರೆದುಕೊಂಡಿದ್ದರು. ಸದ್ಯ ಆರೋಪಿಗಳ ಬಳಿ ಇದ್ದ ಒಂದು ಪಿಸ್ತೂಲ್, ಆರು ಕಾಟ್ರಿಡ್ಜ್‌ಗಳು, 30 ಮೊಬೈಲ್‌ಗಳು ಮತ್ತು ಅಪರಾಧಕ್ಕೆ ಬಳಸಿದ ಬೈಕ್​ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಾನ್ಪುರದಲ್ಲಿ ಐಟಿ ದಾಳಿ, ಐಷಾರಾಮಿ ಕಾರ್ ಮ್ಯಾಟ್ ತಳದಲ್ಲಿ ಅಡಗಿಸಿಟ್ಟಿದ್ದ ಏಳು ಕೋಟಿ ಮೌಲ್ಯದ 12 ಚಿನ್ನದ ಬಿಸ್ಕೆಟ್ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.