ETV Bharat / bharat

70 ವರ್ಷಗಳಲ್ಲಿ ಇದೇ ಮೊದಲಿಗೆ ದೆಹಲಿಯಲ್ಲಿ ಕಡಿಮೆ ಗರಿಷ್ಠ ತಾಪಮಾನ.! - ದೆಹಲಿಯಲ್ಲಿ ಮಳೆಯ ಪ್ರಮಾಣ

ತೌಕ್ತೆಯಿಂದ ಮಳೆ ಬೀಳುತ್ತಿರುವ ಕಾರಣದಿಂದ ತಾಪಮಾನ ಕುಸಿದಿದೆ ಎಂದು ಹೇಳಲಾಗುತ್ತಿದ್ದು, ದೆಹಲಿಯಲ್ಲಿ ಮಳೆಯ ಅಬ್ಬರವೂ ತೀವ್ರವಾಗಿದೆ.

delhi-records-the-lowest-maximum-temperature-in-70-years
70 ವರ್ಷಗಳಲ್ಲಿ ಇದೇ ಮೊದಲಿಗೆ ದೆಹಲಿಯಲ್ಲಿ ಕಡಿಮೆ ಗರಿಷ್ಠ ತಾಪಮಾನ.!
author img

By

Published : May 20, 2021, 3:21 AM IST

ನವದೆಹಲಿ: ತೌಕ್ತೆ ಚಂಡಮಾರುತ ದೇಶದ ಪಶ್ಚಿಮ ಕರಾವಳಿಯಲ್ಲಿ ಸಾಕಷ್ಟು ಹಾನಿ ಸೃಷ್ಟಿಸಿದೆ. ಕೇರಳ, ತಮಿಳನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್​ನಲ್ಲಿ ಭಾರಿ ಹಾನಿ ಮಾಡಿದ ತೌಕ್ತೆ ದೆಹಲಿಯಲ್ಲೂ ತನ್ನ ಅಬ್ಬರ ಆರಂಭಿಸಿದೆ.

ಹೌದು, ರಾಷ್ಟ್ರರಾಜಧಾನಿಯಲ್ಲಿ ಗರಿಷ್ಠ ತಾಪಮಾನದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಮೇ ತಿಂಗಳಲ್ಲಿ 23.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು 70 ವರ್ಷಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶದ ಸತ್ನಾದಲ್ಲಿ ಸಿಡಿಲು ಬಡಿದು 7 ಮಂದಿ ಸಾವು, ನಾಲ್ವರಿಗೆ ಗಾಯ

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಈ ಹಿಂದೆ 13 ಮೇ 1982ರಂದು, ಗರಿಷ್ಠ ತಾಪಮಾನವು 24.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. 1951ರಲ್ಲಿ 23.8 ಡಿಗ್ರಿ ಸೆಲ್ಸಿಯಸ್ ಪ್ರಸ್ತುತವಾಗಿರುವ ಕಡಿಮೆ ಗರಿಷ್ಠ ತಾಪಮಾನಕ್ಕೆ ಸಮನಾಗಿದೆ.

ತೌಕ್ತೆಯಿಂದ ಮಳೆ ಬೀಳುತ್ತಿರುವ ಕಾರಣದಿಂದ ತಾಪಮಾನ ಕುಸಿದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಒಟ್ಟು 31.3 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.