ನವದೆಹಲಿ : ನಾಳೆ ನಡೆಯಲಿರುವ 'ಚಕ್ಕಾ ಜಾಮ್' ಹಿನ್ನೆಲೆ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನ ಮುಂದುವರಿಸಿದ್ದಾರೆ.
ಈ ನಡುವೆ ನಾಳೆ ಮೂರು ಗಂಟೆಗಳ ಕಾಲ ನಡೆಯುವ 'ಚಕ್ಕಾ ಜಾಮ್' ದೆಹಲಿಯಲ್ಲಿ ಅನ್ವಯವಾಗುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಗುರುವಾರ ಮಾಹಿತಿ ನೀಡಿದ್ದರು. 'ಚಕ್ಕಾ ಜಾಮ್'ನಲ್ಲಿ ಸಿಲುಕುವ ಜನರಿಗೆ ರೈತರು ಆಹಾರ ಮತ್ತು ನೀರನ್ನು ಒದಗಿಸುತ್ತಾರೆ ಎಂದು ಗಾಜಿಪುರ ಗಡಿ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ವೇಳೆ ಟಿಕಾಯತ್ ತಿಳಿಸಿದ್ದರು.
ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನವೆಂಬರ್ 26ರಿಂದ ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈತರ ಸಮಸ್ಯೆ ಚರ್ಚಿಸಲು ಸಮಯ ನೀಡುವಂತೆ ವಿರೋಧಪಕ್ಷಗಳ ಪಟ್ಟು