ನವದೆಹಲಿ : 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮತ್ತೆ ಶಾಲೆಗಳನ್ನು ತೆರೆಯುವಂತೆ ಒತ್ತಾಯಿಸಿ ಪೋಷಕರ ಗುಂಪು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಿ ಶನಿವಾರ ಪ್ರತಿಭಟಿಸಿತು.
ದೆಹಲಿ ರಾಜ್ಯ ಸಾರ್ವಜನಿಕ ಶಾಲೆಗಳ ನಿರ್ವಹಣಾ ಸಂಘದ ನೇತೃತ್ವದಲ್ಲಿ ಪ್ರತಿಭಟನಾನಿರತ ಪೋಷಕರು ಸಿಎಂ ಮನೆ ಬಳಿ ಜಮಾಯಿಸಿ ಮುಷ್ಕರ ನಡೆಸಿದರು. 9ರಿಂದ 12ನೇ ತರಗತಿಯವರೆಗೆ ಶಾಲೆಗಳು, ಅಂಗನವಾಡಿ, ನ್ಯಾಯಾಲಯ ಕಾರ್ಯರೂಪಕ್ಕೆ ಬಂದಿರುವುದರಿಂದ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೂ ಸಹ ಶಾಲೆಗಳಲ್ಲಿ ಪಾಠ ಮಾಡಲು ಅನುಮತಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಮಕ್ಕಳು ಆಫ್‌ಲೈನ್ ತರಗತಿಗಳಿಗೆ ಹಾಜರಾಗಲಿ ಎಂದು ಬಯಸುವ ಪೋಷಕರು, ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಉಳಿದವರು ಆನ್‌ಲೈನ್ ಮಾಧ್ಯಮದ ಮೂಲಕ ಮುಂದುವರಿಯಬಹುದು ಎಂದು ಸರ್ಕಾರ ಎಸ್‌ಒಪಿ ಹೊರಡಿಸಬೇಕು ಎಂದು ಆರ್ಸಿ ಜೈನ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ.. ಪಶ್ಚಿಮ ಬಂಗಾಳವನ್ನು ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಮಾಡುವ ಭರವಸೆ?
ಶಾಲೆಯಿಂದ ಒಂದು ವರ್ಷ ದೂರವಾದ ನಂತರ ಮಕ್ಕಳು ನಿರಾಶೆಗೊಂಡಿದ್ದಾರೆ. ಅವರ ಪೋಷಕರು ಸಹ ತಮ್ಮ ಕೆಲಸಕ್ಕೆ ಹೋಗಲು ಕಷ್ಟ ಪಡುತ್ತಿದ್ದಾರೆ. ಅದೇ ಸಮಯದಲ್ಲಿ ಮಗುವಿನ ಶಿಕ್ಷಣವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ರಾಜಧಾನಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಳೆದ ಮಾರ್ಚ್‌ನಲ್ಲಿ ಮುಚ್ಚಲಾಗಿತ್ತು.