ETV Bharat / bharat

ಅಲೋಪತಿ ವಿರುದ್ಧ ರಾಮದೇವ್ ಹೇಳಿಕೆ: ದೆಹಲಿ ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ಸಾಧ್ಯತೆ

ಅಲೋಪತಿ ಒಂದು ಅವಿವೇಕಿ ವಿಜ್ಞಾನ ಮತ್ತು ರೆಮ್ಡೆಸಿವಿರ್​, ಫ್ಯಾಬಿಫ್ಲೂ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ಔಷಧಗಳು ಕೊರೊನಾ ಸೋಂಕಿತರ ಆರೋಗ್ಯ ಉತ್ತಮಗೊಳಿಸಲು ವಿಫಲವಾಗಿವೆ ಎಂಬ ರಾಮ್‌ದೇವ್ ಹೇಳಿಕೆ ಕುರಿತು ಇಂದು ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

Baba Ramdev
Baba Ramdev
author img

By

Published : Jul 30, 2021, 9:37 AM IST

ನವದೆಹಲಿ: ಅಲೋಪತಿ ಬಗ್ಗೆ ಬಾಬಾ ರಾಮದೇವ್ ಮಾಡಿರುವ ಸುಳ್ಳು ಆರೋಪಗಳಿಗೆ ತಡೆ ನೀಡುವಂತೆ ಕೋರಿ ಏಳು ವೈದ್ಯರ ವೈದ್ಯಕೀಯ ಸಂಘಗಳು ಸಲ್ಲಿಸಿದ್ದ ಮನವಿ ಕುರಿತು ಇಂದು ಹೈಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆಫ್ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ಜುಲೈ 26 ರಂದು ದೆಹಲಿ ಹೈಕೋರ್ಟ್​ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಅಂದು ನ್ಯಾಯಮೂರ್ತಿ ಸಿ.ಹರಿಶಂಕರ್ ರಜೆ ಕಾರಣ ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ (ಜುಲೈ 30) ಮುಂದೂಡಲಾಗಿತ್ತು. ಈ ಹಿನ್ನೆಲೆ ಇಂದು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಅಲೋಪತಿ ಒಂದು ಅವಿವೇಕಿ ವಿಜ್ಞಾನ ಮತ್ತು ರೆಮ್ಡೆಸಿವಿರ್​, ಫ್ಯಾಬಿಫ್ಲೂ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ಔಷಧಗಳು ಕೊರೊನಾ ಸೋಂಕಿತರ ಆರೋಗ್ಯ ಉತ್ತಮಗೊಳಿಸಲು ವಿಫಲವಾಗಿವೆ ಎಂದು ರಾಮ್‌ದೇವ್ ವಿಡಿಯೋ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಏಮ್ಸ್ ವೈದ್ಯರ ಸಂಘವು, ಅಲೋಪತಿ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಪ್ರತಿವಾದಿ ರಾಮದೇವ್ ವಿರುದ್ಧ ಶಾಶ್ವತ ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.