ETV Bharat / bharat

ದೆಹಲಿಯಲ್ಲಿ ಮತ್ತೆ ಕೋವಿಡ್​ ಹೆಚ್ಚಳ: ಶಾಲೆಗಳಿಗೆ ಮಾರ್ಗಸೂಚಿ ಬಿಡುಗಡೆಗೆ ನಿರ್ಧಾರ - ದೆಹಲಿ ಶಾಲೆಗಳಿಗೆ ಕೋವಿಡ್​ ಮಾರ್ಗಸೂಚಿ

ಕೆಲ ದಿನಗಳಿಂದ ಮಕ್ಕಳು ಸೋಂಕಿಗೆ ಗುರಿಯಾಗುತ್ತಿರುವ ಬಗ್ಗೆ ಪೋಷಕರಿಂದ ಮಾಹಿತಿ ಬಂದಿದೆ. ಹೀಗಾಗಿ ಶಾಲೆಗಳಿಗಾಗಿ ಶುಕ್ರವಾರ ಸಾಮಾನ್ಯ​ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.

ಶಾಲೆಗಳಿಗೆ ಮಾರ್ಗಸೂಚಿ ಬಿಡುಗಡೆಗೆ ಮುಂದಾದ ಸರ್ಕಾರ

author img

By

Published : Apr 14, 2022, 5:13 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕೋವಿಡ್​ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಶಾಲೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಮಾಹಿತಿ ನೀಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಮಕ್ಕಳು ಸೋಂಕಿಗೆ ಗುರಿಯಾಗುತ್ತಿರುವ ಬಗ್ಗೆ ಪೋಷಕರಿಂದ ನನಗೆ ಮಾಹಿತಿ ಬಂದಿದೆ. ಶಾಲೆಗಳಿಗಾಗಿಯೇ ಶುಕ್ರವಾರ ಸಾಮಾನ್ಯ​ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಕೋವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಾಗಿದೆ.

ಆದರೆ, ಆಸ್ಪತ್ರೆಗೆ ದಾಖಲಾಗುವರರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಗಾಬರಿಪಡುವ ಅವಶ್ಯಕತೆ ಇಲ್ಲ. ಸ್ವಲ್ವ ಎಚ್ಚರ ವಹಿಸಿದರೆ ಸಾಕು. ಈಗಾಗಲೇ ನಾವು ಕೋವಿಡ್​ನೊಂದಿಗೆ ಜೀವಿಸುವುದನ್ನು ಕಲಿತಿದ್ದೇವೆ. ಜತೆಗೆ ಸರ್ಕಾರ ಕೂಡಾ ನಿರಂತರವಾಗಿ ಪರಿಸ್ಥಿತಿ ಮೇಲೂ ನಿಗಾ ವಹಿಸಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಬುಧವಾರ ಒಂದೇ ದಿನ ಹೊಸದಾಗಿ 299 ಕೋವಿಡ್​ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ, ಖಾಸಗಿ ಶಾಲೆಯ ಓರ್ವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸೋಂಕು ತಗುಲಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡಿದೆ.

ಇದನ್ನೂ ಓದಿ: 'ಜಿಲ್ಲಾಧಿಕಾರಿಯ ಕಪಾಳಕ್ಕೆ ಬಾರಿಸಿದರೆ ರಾಜಕಾರಣಿ': ಬಿಜೆಪಿ ಸಂಸದನ 'ರಾಜಕೀಯ ಪಾಠ'!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.