ETV Bharat / bharat

ಮೀಟಿಂಗ್‌ಗಾಗಿ ಹರಿದ್ವಾರಕ್ಕೆ ಬಂದಿದ್ದ ಯುವತಿ ಮೇಲೆ ಸಂಸ್ಥೆಯ ಮುಖ್ಯಸ್ಥ, ಸ್ನೇಹಿತರಿಂದ ಅತ್ಯಾಚಾರ - ಈಟಿವಿ ಭಾರತ ಕರ್ನಾಟಕ

ಮೀಟಿಂಗ್​ ಹೆಸರಿನಲ್ಲಿ ದೆಹಲಿಯಿಂದ ಹರಿದ್ವಾರಕ್ಕೆ ಸಹೋದ್ಯೋಗಿ ಯುವತಿಯನ್ನು ಕರೆತಂದಿರುವ ಕೆಲವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

DELHI GIRL GANG RAPED IN HARIDWAR
DELHI GIRL GANG RAPED IN HARIDWAR
author img

By

Published : Aug 30, 2022, 5:57 PM IST

ಹರಿದ್ವಾರ(ಉತ್ತರಾಖಂಡ): ದೆಹಲಿ ಮೂಲದ ಯುವತಿಯೋರ್ವಳ ಮೇಲೆ ಹರಿದ್ವಾರದಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಸಭೆಯ ಹೆಸರಿನಲ್ಲಿ ಆಕೆಯನ್ನು ಕರೆದುಕೊಂಡು ಬಂದಿರುವ ಕಂಪೆನಿಯ ಮುಖ್ಯಸ್ಥ​ ಹಾಗೂ ಆತನ ಸ್ನೇಹಿತರು ಸೇರಿಕೊಂಡು ದುಷ್ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರಿದ್ವಾರದ ಫ್ಲಾಟ್​​​ವೊಂದರಲ್ಲಿ ಘಟನೆ ನಡೆದಿದೆ. ಮದ್ಯದಲ್ಲಿ ಅಮಲು ಬರುವ ಪದಾರ್ಥ ಬೆರೆಸಿ, ಯುವತಿಗೆ ಕುಡಿಸಿದ್ದಾರೆ. ಆಕೆ ಮೂರ್ಛೆ ಹೋಗಿದ್ದು, ಅತ್ಯಾಚಾರವೆಸಗಿದ್ದಾರೆ. ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಕೋಟ್ವಾಲಿ ರಾಣಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಕೊತ್ವಾಲಿ ರಾಣಿಪುರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಜಾಫ್‌ಗಢದ ಯುವತಿ ದೆಹಲಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 27 ರಂದು ಸಂಸ್ಥೆಯ ಮುಖ್ಯಸ್ಥ ಅನಿಲ್ ಠಾಕೂರ್​ ಹಾಗೂ ಸಹ ಸಿಬ್ಬಂದಿ ರಾಹುಲ್​ ಹಾಗೂ ಇತರೆ ಸ್ನೇಹಿತರೊಂದಿಗೆ ಕೆಲಸದ ನಿಮಿತ್ಯ ಯುವತಿ ಹರಿದ್ವಾರಕ್ಕೆ ಬಂದಿದ್ದರು.

ಇದನ್ನೂ ಓದಿ: ಬಾಸ್ಕೆಟ್​ ಬಾಲ್​​​ ಆಟಗಾರ್ತಿ ಮೇಲೆ ಅತ್ಯಾಚಾರ ಯತ್ನ: ಛಾವಣಿಯಿಂದ ಕೆಳಗೆ ತಳ್ಳಿ ದುಷ್ಕೃತ್ಯ

ರಾಹುಲ್ ಹಾಗೂ ಇತರೆ ಸಿಬ್ಬಂದಿ ಬೇರೆ ಹೋಟೆಲ್​​ನಲ್ಲಿ ತಂಗಿದ್ದರು. ಸಂತ್ರಸ್ತೆ ತನ್ನ ಮುಖ್ಯಸ್ಥನ ಜೊತೆಗೆ ಪ್ರತ್ಯೇಕ ಹೋಟೆಲ್​​​ನಲ್ಲಿ ಉಳಿದುಕೊಂಡಿದ್ದಾಳೆ. ಆಗಸ್ಟ್​​ 28ರ ರಾತ್ರಿ ರಾಹುಲ್​ ಹಾಗೂ ಆತನ ಸ್ನೇಹಿತರು ಊಟ ತಂದಿದ್ದರು. ಊಟದ ಜೊತೆ ಮದ್ಯ ಸೇವಿಸುವಂತೆ ಯುವತಿಯನ್ನು ಒತ್ತಾಯಿಸಿ ಕುಡಿಸಿದ್ದಾರೆ. ಆದರೆ ಮದ್ಯದಲ್ಲಿ ಮತ್ತು ಬರುವ ಪದಾರ್ಥ ಸೇರಿಸಿದ್ದರಿಂದ ಯುವತಿ ಮೂರ್ಛೆ ಹೋಗಿದ್ದಳು.

ಮೂರ್ಛೆ ಹೋಗುತ್ತಿದ್ದಂತೆ ಯುವತಿಯನ್ನು ರೂಂನಲ್ಲಿ ಕೂಡಿ ಹಾಕಿ ಎಲ್ಲರೂ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ. ಬೆಳಗ್ಗೆದ್ದಾಗ ಆಕೆಗೆ ತನ್ನ ಮೇಲೆ ನಡೆದಿರುವ ದುಷ್ಕೃತ್ಯ ತಿಳಿದಿದೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೋಸ್ಕರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.