ETV Bharat / bharat

ಜಾತಿ ಪ್ರಮಾಣಪತ್ರ ಪರಿಶೀಲಿಸಲು ಐಎಎಸ್ ಅಧಿಕಾರಿ ರಾಜಶೇಖರ್​ ಹುಟ್ಟೂರಿಗೆ ಭೇಟಿ ಕೊಟ್ಟ ದೆಹಲಿ ಸಮಿತಿ

ಹಿರಿಯ ಐಎಎಸ್​ ಅಧಿಕಾರಿ ವಿಶೇಷ ಕಾರ್ಯದರ್ಶಿ (vigilance) ವೈ ವಿ ವಿ ಜೆ ರಾಜಶೇಖರ್​ ಅವರ ಜಾತಿ ಪ್ರಮಾಣಪತ್ರದ ಸತ್ಯಾಸತ್ಯತೆ ಪರಿಶೀಲಿಸಲು ದೆಹಲಿ ವಿಧಾನ ಸಭೆಯ ಸಮಿತಿ ಸದಸ್ಯರು ಅವರ ಹುಟ್ಟೂರಿಗೆ ಭೇಟಿ ಕೊಟ್ಟಿದ್ದಾರೆ.

author img

By ETV Bharat Karnataka Team

Published : Aug 26, 2023, 1:14 PM IST

Delhi Assembly panel visit to bureaucrat Rajasekhar's hometown
ಜಾತಿ ಪ್ರಮಾಣಪತ್ರ ಪರಿಶೀಲಿಸಲು ಐಎಎಸ್ ಅಧಿಕಾರಿ ರಾಜಶೇಖರ್​ ಹುಟ್ಟೂರಿಗೆ ಭೇಟಿ ಕೊಟ್ಟ ದೆಹಲಿ ಸಮಿತಿ

ನವದೆಹಲಿ: ವಿಧಾನಸಭಾ ಸಮಿತಿ ಸದಸ್ಯರು ಇತ್ತೀಚೆಗೆ ಹಿರಿಯ ಐಎಎಸ್​ ಅಧಿಕಾರಿ, ವಿಶೇಷ ಕಾರ್ಯದರ್ಶಿ (vigilance) ವೈ ವಿ ವಿ ಜೆ ರಾಜಶೇಖರ್​ ಅವರ ಒಬಿಸಿ ಪ್ರಮಾಣಪತ್ರ ಪರಿಶೀಲಿಸುವ ಸಲುವಾಗಿ ಅವರ ಹುಟ್ಟೂರಿಗೆ ಭೇಟಿ ನೀಡಿದೆ. ಜೂನ್​ ತಿಂಗಳಲ್ಲಿ ಅಮಾನತುಗೊಂಡ DANICS ಅಧಿಕಾರಿ ರಾಜಶೇಖರ್​ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. 1994ರಲ್ಲಿ ಸಿವಿಲ್​ ಸರ್ವೀಸ್​ ಪರೀಕ್ಷೆ ಬರೆಯುವ ವೇಳೆ ನಕಲಿ ಒಬಿಸಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು. ವೈ ವಿ ವಿ ಜೆ ರಾಜಶೇಖರ್ ​ಒಬಿಸಿ ವರ್ಗಕ್ಕೆ ಸೇರಿದವರಲ್ಲ ಎಂಬುದಾಗಿ ಆರೋಪಿಸಿದ್ದರು.

ದೆಹಲಿ ವಿಧಾನಸಭೆಯ ಒಬಿಸಿ ಕಲ್ಯಾಣ ಸಮಿತಿಯು ದೂರನ್ನು ಪರಿಗಣಿಸಿ ತಮ್ಮ ನಿಲುವನ್ನು ಮಂಡಿಸುವಂತೆ ರಾಜಶೇಖರ್​ ಅವರಿಗೆ ನೋಟಿಸ್​ ಜಾರಿಗೊಳಿಸಿದೆ. ಆದರೆ, ರಾಜಶೇಖರ್​ ಅವರು ಸಮಿತಿ ಮುಂದೆ ಹಾಜರಾಗಿಲ್ಲ. ನಿಯಮಗಳ ಪ್ರಕಾರ ಸೇವಾ ವಿಷಯಗಳಲ್ಲಿ ನೀವು ಯಾವದೇ ಅಧಿಕಾರ ಹೊಂದಿಲ್ಲ ಎಂದು ಸಮಿತಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್​ ಅವರಿಂದ ಶೀಘ್ರ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಈ ಹಿನ್ನೆಲೆ ಆಮ್​ ಆದ್ಮಿ ಪಕ್ಷದ ಶಾಸಕ ಮದನ್​ ಲಾಲ್​​​ ನೇತೃತ್ವದಲ್ಲಿ ವಿಧಾನಸಭೆಯ ಒಬಿಸಿ ಕಲ್ಯಾಣ ಸಮಿತಿಯ ಮೂವರು ಸದಸ್ಯರು ಈ ವಾರದ ಆರಂಭದಲ್ಲಿ ವಿಶಾಖಪಟ್ಟನಂ ಮತ್ತು ಅನಕಪಲ್ಲಿಗೆ ಭೇಡಿ ಕೊಟ್ಟಿತ್ತು. ಈ ಭೇಟಿ ರಾಜಶೇಖರ್​ ಅವರ ಜಾತಿ ಪ್ರಮಾಣಪತ್ರದ ಪರಿಶೀಲನೆ ಕುರಿತಾಗಿತ್ತು. ಸಮಿತಿ ಈಗಾಗಲೇ ರಾಜಶೇಖರ್​ ಅವರಿಗೆ ಹಲವು ನೋಟಿಸ್​ಗಳನ್ನು ಜಾರಿಗೊಳಿಸಿದೆ. ಆದರೆ, ಸಮಿತಿ ಮುಂದೆ ರಾಜಶೇಖರ್​ ಅವರು ಹಾಜರಾಗಿಲ್ಲ ಎಂದು ಶಾಸಕ ಮದನ್​ ಲಾಲ್​​​ ತಿಳಿಸಿದ್ದಾರೆ. ನಂತರ ಸೇವಾ ಮತ್ತು ವಿಜಿಲೆನ್ಸ್​​ ಇಲಾಖೆಗಳಿಂದ ಮಾಹಿತಿ ಕೇಳಲಾಗಿದ್ದರೂ ಕೂಡ ಸಂಬಂಧಿತ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಕೂಡ ತಿಳಿಸಿದ್ದಾರೆ.

ಸಮಿತಿ ವಿಶಾಖಪಟ್ಟಣಕ್ಕೆ ಭೇಟಿ ಕೊಟ್ಟಿದೆ. ರಾಜಶೇಖರ್​​ ಅವರು ಅನಕಪಲ್ಲಿಗೆ ಸೇರಿದ್ದು, ಪ್ರಸ್ತುತ ಆಂಧ್ರಪ್ರದೇಶದಲ್ಲಿ ಪ್ರತ್ಯೇಖ ಜಿಲ್ಲೆಯಾಗಿದೆ. ಅನಕಪಲ್ಲ ಅಧಿಕಾರಿಗಳು ಸಮಿತಿಯೊಂದಿಗೆ ಸಹಕರಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಗಳನ್ನು ಒದಗಿಸಲಿಲ್ಲ ಎಂದಿದ್ದಾರೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮದನ್​ ಲಾಲ್​​​ ತಿಳಿಸಿದ್ದಾರೆ.

ಇದನ್ನೂ ಓದಿ: ಇದ್ದೊಬ್ಬ ಅತಿಥಿ ಶಿಕ್ಷಕಿಗೆ ಅನಾರೋಗ್ಯ.. 8 ತಿಂಗಳಿಂದ ಪಶ್ಚಿಮ ಬಂಗಾಳದ ಶಾಲೆಗೆ ಬೀಗ; ಪಾಠ, ಪರೀಕ್ಷೆಗಳಿಲ್ಲದೇ ಅಂಧಃಕಾರದಲ್ಲಿ ಮಕ್ಕಳು!

ಅರವಿಂದ್​ ಕೇಜ್ರಿವಾಲ್​​ ಸರ್ಕಾರಕ್ಕೆ ಸಂಬಂಧಿಸಿದಂತೆ ಹಲವು ತನಿಖೆಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ ರಾಜಶೇಖರ್​ ಅವರನ್ನು ಆಮ್​ ಆದ್ಮಿ ಪಕ್ಷ ಗುರಿಯಾಗಿಸಿತ್ತು ಎಂದು ಮೂಲಗಳು ತಿಳಿಸಿವೆ. ರಾಜಶೇಖರ್​ ಅವರು ಯೂನಿಯನ್​ ಪಬ್ಲಿಕ್ ಸರ್ವೀಸ್​​ ಕಮೊಷನ್​​​ ನಿಂದ DANICS (ದೆಹಲಿ ಅಂಡಮಾನ್ ಮತ್ತು ನಿಕೋಬಾರ್​ ದ್ವೀಪಗಳ ನಾಗರಿಕ ಸೇವೆಗಲು) ಅಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಆ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಗಳು ದಾಖಲೆ ಪರಿಶೀಲನೆ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.