ETV Bharat / bharat

ದೆಹಲಿ ಬಜೆಟ್​ ಅಧಿವೇಶನ 2021-22: ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭಾಷಣ - Delhi budget

ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಕೊರೊನಾ ಕಾಲದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಾರ್ಚ್ 9 ರಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

session-2021-22
ದೆಹಲಿ ಬಜೆಟ್​ ಅಧಿವೇಶನ 2021-22
author img

By

Published : Mar 8, 2021, 12:32 PM IST

ನವದೆಹಲಿ: ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ನಡೆಯಲಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಭಾಷಣದೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಕೊರೊನಾ ಬಿಕ್ಕಟ್ಟಿನ ನಂತರ, ಮೊದಲ ಬಾರಿಗೆ ದೆಹಲಿ ವಿಧಾನಸಭೆಯ ಇಂತಹ ಸುದೀರ್ಘ ಅಧಿವೇಶನವನ್ನು ಕರೆಯಲಾಗಿದೆ.

ದೆಹಲಿ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. ಪ್ರತಿಪಕ್ಷದ ಕೊಡುಗೆಯನ್ನು ಶ್ಲಾಘಿಸುತ್ತ ದೆಹಲಿಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ಹೇಳಿದ್ರು. ಮಾಲಿನ್ಯ ಹೆಚ್ಚಾದ ಹಿನ್ನೆಲೆ ಗ್ರೀನ್ ವಾರ್ ರೂಮ್ ಅನ್ನು ಪ್ರಾರಂಭಿಸಲಾಗಿದೆ ಎಂದರು. ಮಾಲಿನ್ಯ ತಡೆಗಟ್ಟಲು GRAP ಅಡಿಯಲ್ಲಿ ಹಲವಾರು ನಿಬಂಧನೆಗಳನ್ನು ಜಾರಿಗೆ ತರಲಾಗಿದೆ. ದೆಹಲಿಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ 1000 ವಿದ್ಯುತ್ ಮತ್ತು ಸಿಎನ್‌ಜಿ ಚಾಲಿತ ಬಸ್‌ಗಳು ಖರೀದಿಸಲು ತಯಾರಿ ನಡೆಸುತ್ತಿವೆ. ಕಾರ್ಮಿಕರ ಸುಧಾರಣೆಗಾಗಿ ಸರ್ಕಾರ 44 ಕ್ಕೂ ಹೆಚ್ಚು ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುತ್ತಿದೆ.

ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಸುಧಾರಿಸಿದೆ, 12 ನೇ ತರಗತಿಯಲ್ಲಿ 97.92% ಮತ್ತು 10 ನೇ ತರಗತಿಯಲ್ಲಿ 82% ಕ್ಕಿಂತ ಹೆಚ್ಚು ಫಲಿತಾಂಶ ದಾಖಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಹಾಜರಾಗಲು ಪ್ರತಿಭಾಗ್​ ವಿಕಾಸ್ ಯೋಜನೆ ಅಡಿಯಲ್ಲಿ ವೈಯಕ್ತಿಕ ತರಬೇತಿಯನ್ನು ನೀಡಲಾಯಿತು.

ದೆಹಲಿ ಒಟ್ಟು ದೇಶೀಯ ಉತ್ಪನ್ನದಲ್ಲಿ 5% ಇಳಿಕೆಯ ಹೊರತಾಗಿಯೂ, ಉಚಿತ ವಿದ್ಯುತ್, ನೀರಿನ ಸೌಲಭ್ಯದ ಜೊತೆಗೆ, ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸಲಾಯಿತು ಎಂದು ತಮ್ಮ ಬಜೆಟ್​ ಭಾಷಣದ ವೇಳೆ ಅನಿಲ್​ ಬೈಜಾಲ್​ ತಿಳಿಸಿದ್ರು. ಸದನದಲ್ಲಿ ಲೆಫ್ಟಿನೆಂಟ್ ಗವರ್ನರ್ ಭಾಷಣ ಮಾಡಿದ ನಂತರ, ದೆಹಲಿ ಸರ್ಕಾರದ ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಅವರು 2020-21ರ ಆರ್ಥಿಕ ವರ್ಷಕ್ಕೆ ದೆಹಲಿಯ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ.

ಕೊರೊನಾ ಹಿನ್ನೆಲೆ ಅಸೆಂಬ್ಲಿ ಹಾಲ್‌ಗೆ ಹೋಗುವ ಎಲ್ಲ ಸದಸ್ಯರಿಗೆ ನಕಾರಾತ್ಮಕ ಕರೋನಾ ವರದಿ ಕಡ್ಡಾಯವಾಗಿದೆ. ಮಾರ್ಚ್ 9 ರಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ದೆಹಲಿ ಸರ್ಕಾರದ ಬಜೆಟ್‌ನಲ್ಲಿ ಹಲವು ಪ್ರಮುಖ ಮತ್ತು ಹೊಸ ನಿರ್ಧಾರಗಳನ್ನು ನಿರೀಕ್ಷಿಸಲಾಗಿದೆ. 2020-21ನೇ ಸಾಲಿನಲ್ಲಿ ದೆಹಲಿಯ ಬಜೆಟ್ 65 ಸಾವಿರ ಕೋಟಿ ಆಗಿತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.