ETV Bharat / bharat

ತಿಹಾರ್ ಕೈದಿಗಳ ಕೊಲೆಗೆ ಸಂಚು ರೂಪಿಸಿದ್ದ ಐಸಿಸ್ ಉಗ್ರರ ಬಂಧನ - ತಿಹಾರ್ ಜೈಲಿನಲ್ಲಿದ್ದ ಆರೋಪಿಗಳನ್ನು ಕೊಲ್ಲಲು ಸಂಚು

ತಿಹಾರ್ ಜೈಲಿನಲ್ಲಿದ್ದ ಆರೋಪಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಇಬ್ಬರು ಐಎಸ್ಐಎಸ್ ಭಯೋತ್ಪಾದಕರನ್ನು ದೆಹಲಿ ಪೊಲೀಸರ ವಿಶೇಷ ಕೋಶ ತಂಡ ಬಂಧಿಸಿದೆ.

ISIS terrorist
ISIS terrorist
author img

By

Published : Mar 22, 2021, 7:34 AM IST

ನವದೆಹಲಿ: ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿದ್ದ ಆರೋಪಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಇಬ್ಬರು ಐಎಸ್ಐಎಸ್ (ಐಸಿಸ್) ಭಯೋತ್ಪಾದಕರನ್ನು ದೆಹಲಿ ಪೊಲೀಸರ ವಿಶೇಷ ಕೋಶ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಅಬ್ದುಲ್ಲಾ ಬಸಿತ್, ಅಜೀಮೋಶನ್ ಬಂಧಿತ ಐಸಿಸ್ ಭಯೋತ್ಪಾದಕರು. ದೆಹಲಿ ಗಲಭೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸಿ, ಅನೇಕ ಮಂದಿಯನ್ನು ಕೊಂದ ಆರೋಪಿಗಳನ್ನು ಕೊಲ್ಲಲು ಈ ಭಯೋತ್ಪಾದಕರು ಯೋಜನೆ ರೂಪಿಸಿದ್ದರು ಎಂದು ವಿಶೇಷ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಗಲಭೆಯ ಆರೋಪಿ ಶಾಹಿದ್ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿದ್ದಾರೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಎಲ್ಲರಿಗೂ ಪಾದರಸದ ವಿಷಪ್ರಾಶನ ಮಾಡುವ ಮೂಲಕ ಕೊಲೆ ಮಾಡಲು ಐಎಸ್ಐಎಸ್ ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಇನ್ನು ಕ್ರಿಮಿನಲ್, ಪಿತೂರಿ ಮತ್ತು ಕೊಲೆ ಯತ್ನ ಆರೋಪದಡಿ ಬಂಧಿತರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.