ಫರೀದ್‌ಕೋಟ್: ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಚುನಾವಣಾ ರ‍್ಯಾಲಿ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ.
ವೇದಿಕೆ ಮೇಲೆ ಇದ್ದ ಗಣ್ಯರಿಗೆ ಬೃಹತ್ ಹಾರ ಹಾಕುವಾಗ ದಿಢೀರನೇ ಬಿದ್ದಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳದೆ ವೇದಿಕೆಯಲ್ಲಿದ್ದವರು ಹಾರ ಹಾಕಲು ಯತ್ನಿಸಿದರೇ ಹೊರತು ಅವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಲಿಲ್ಲ. ಇದರಿಂದ ಕೋಪಗೊಂಡಂತೆ ಕಂಡುಬಂದ ಅವರು ಹಾರವನ್ನು ಹಾಕಿಸಿಕೊಳ್ಳದೆ ನಿರಾಕರಿಸಿ, ಅವರಿಗೇ ಹಾಕಿ ಎಂಬಂತೆ ಕೈ ಸನ್ನೆ ಮಾಡಿದರು.
ಹಿಂಬದಿಯಲ್ಲಿ ಸೋಫಾ ಇದ್ದರಿಂದ ಹೆಚ್ಚಿನ ತೊಂದರೆ ಆಗಿಲ್ಲ:
ರಾಜನಾಥ್ ಸಿಂಗ್ ಬಿದ್ದಾಗ ಅವರ ಹಿಂದೆ ಸೋಫಾ ಇರಿಸಲಾಗಿತ್ತು, ಇದರಿಂದಾಗಿ ಅವರಿಗೆ ಯಾವುದೇ ತರನಾದ ತೊಂದರೆ ಉಂಟಾಗಿಲ್ಲ. ಆದರೆ ಮುಖದಲ್ಲಿ ಸ್ವಲ್ಪ ತರಚಿದ ಗುರುತು ಉಂಟಾಗಿದೆ. ಈ ಘಟನೆಯ ದೃಶ್ಯ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ನಿನ್ನೆ ನಡೆದಿದೆ ಎನ್ನಲಾಗಿದೆ.