ETV Bharat / bharat

ಭಾರತಕ್ಕೆ ಹೊಸ ಅಪಾಯ ತಂದಿಟ್ಟ ಡೆಲ್ಟಾ ಪ್ಲಸ್​: ವ್ಯಾಕ್ಸಿನ್‌ ಕೆಲಸ ಮಾಡುವುದೇ? ಇಲ್ಲಿದೆ ಪೂರ್ತಿ ವಿವರ.. - ಕೊರೊನಾ ಲೇಟೆಸ್ಟ್ ನ್ಯೂಸ್

ಭಾರತದಲ್ಲಿ ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದೇ ಕಾರಣ ಮಾತ್ರವಲ್ಲದೇ, ಯೂರೋಪ್​ ರಾಷ್ಟ್ರಗಳಿಗೂ ಕೂಡಾ ಸಾಕಷ್ಟು ಕಿರಿಕಿರಿ ಉಂಟುಮಾಡಿತ್ತು. ಈಗ ಡೆಲ್ಟಾ ವೈರಸ್​ನ ರೂಪಾಂತರ ಡೆಲ್ಟಾ ಪ್ಲಸ್ ಯೂರೋಪ್​ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಭಾರತದ ಹಲವೆಡೆಯೂ ಈ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಗೆ ಕಾರಣವಾಗಿದೆ.

Decoded | Delta Plus variant, India's new worry
ಅಪಾಯಕಾರಿ ಡೆಲ್ಟಾ ಪ್ಲಸ್​: ಭಾರತದಲ್ಲಿ ಹೊಸ ಆತಂಕ
author img

By

Published : Jun 23, 2021, 7:47 AM IST

ನವದೆಹಲಿ: ಸಾಮಾನ್ಯವಾಗಿ ಮನುಷ್ಯರು ಹೇಗೆ ಬದುಕುಳಿಯಲು ಆಸ್ಪತ್ರೆಗಳು ಮತ್ತು ಚಿಕಿತ್ಸೆಯ ಮೊರೆ ಹೋಗುತ್ತಾರೋ, ಅದೇ ರೀತಿ ವೈರಸ್​​ಗಳೂ ಕೂಡಾ ತಮ್ಮ ಉಳಿವಿಗಾಗಿ ತಮ್ಮ ರೂಪವನ್ನು, ಜೀನ್​ಗಳನ್ನು ಬದಲಾಯಿಸಿಕೊಳ್ಳುತ್ತವೆ. ಇವುಗಳನ್ನು ರೂಪಾಂತರ ವೈರಸ್​ಗಳು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಮ್ಯೂಟೆಂಟ್​ಗಳು ಅಥವಾ ವೇರಿಯಂಟ್​ಗಳು ಎಂದು ಕರೆಯಲಾಗುತ್ತದೆ.

ಈಗ ಕೊರೊನಾ ತೀವ್ರವಾಗಿರುವ ಸಮಯದಲ್ಲಿ ಕೋವಿಡ್ ವೈರಸ್ ಕೂಡಾ ತನ್ನ ಉಳಿವಿಗಾಗಿ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಆ ರೂಪಗಳಲ್ಲಿ ಕೆಲವೊಂದು ಸೌಮ್ಯವಾಗಿದ್ದರೆ, ಇನ್ನೂ ಕೆಲವು ರೂಪಗಳು ತೀವ್ರ ಹಾನಿ ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತವೆ.

ಮೊದಲಿಗೆ ಈ ವೇರಿಯಂಟ್​ಗಳನ್ನು ಸಂಕೇತಾಕ್ಷರಗಳಿಂದ ಕರೆಯಲಾಗುತ್ತಿತ್ತು(ಉದಾಹರಣೆಗೆ B.1.617.2, ಅಥವಾ B.1.617.2) ಇವುಗಳನ್ನು ನೆನಪಿನಲ್ಲಿಡಲು ಮತ್ತು ಉಚ್ಚರಿಸಲು ಹಾಗೂ ಸಂವಹನಕ್ಕೆ ಕಷ್ಟವಾಗುವ ಕಾರಣದಿಂದಾಗಿ ಯಾವ ದೇಶದಲ್ಲಿ ಕೋವಿಡ್ ವೈರಸ್ ರೂಪಾಂತರ ಕಾಣಿಸಿಕೊಳ್ಳುತ್ತದೆಯೋ, ಅದೇ ದೇಶದ ಹೆಸರನ್ನು ಸೇರಿಸಿ, ವೈರಸ್​ ಅನ್ನು ಹೆಸರಿಸಲಾಗುತ್ತಿತ್ತು (ಉದಾಹರಣೆ ಆಫ್ರಿಕಾ ವೇರಿಯಂಟ್, ಯುಕೆ ವೇರಿಯಂಟ್ ಇತ್ಯಾದಿ) . ಈ ರೀತಿ ಹೆಸರಿಸುವ ಪದ್ಧತಿಗೆ ತೀವ್ರ ಆಕ್ಷೇಪ ಕಂಡು ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಘಟನೆ, ದೇಶಗಳ ಹೆಸರು ಬಿಟ್ಟು ಬೇರೆ ರೀತಿಯಲ್ಲಿ ಹೆಸರಿಡಬೇಕೆಂದು ಸೂಚನೆ ನೀಡಿತು.

ಈಗ ಗ್ರೀಕ್ ವರ್ಣಮಾಲೆಯ ಅಕ್ಷರಗಳನ್ನು ಬಳಸಿ, ಅಥವಾ ಬೇರೆ ಬೇರೆ ಪದಗಳಿಂದ ಕೋವಿಡ್ ವೈರಸ್ ವೇರಿಯಂಟ್​ಗಳನ್ನು ಗುರ್ತಿಸಲಾಗುತ್ತಿದೆ. ಇವುಗಳಲ್ಲಿ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ ಮುಖ್ಯವಾದ ವೇರಿಯಂಟ್​ಗಳು ಎಂದು ಗುರ್ತಿಸಲಾಗಿದೆ. ಅಧಿಕೃತವಾಗಿ 7 ಸಾವಿರಕ್ಕೂ ಹೆಚ್ಚು ವೇರಿಯಂಟ್​ಗಳು ಅಸ್ಥಿತ್ವದಲ್ಲಿವೆ ಎಂದು ಹೇಳಲಾಗುತ್ತಿದೆ. ಈ ವೇರಿಯಂಟ್​ಗಳಲ್ಲಿ ಕೆಲವೊಂದು ಸಾಕಷ್ಟು ಅಪಾಯಕಾರಿ ಎಂದು ಹೇಳಲಾಗುತ್ತಿದೆ.

ಮೊದಲೇ ಹೇಳಿದಂತೆ ವೈರಸ್​ಗಳು ತಮ್ಮ ಉಳಿವಿಗಾಗಿ ತಮ್ಮ ರೂಪವನ್ನು ಬದಲಾಯಿಸಿಕೊಳ್ಳುವಂತೆ, ರೂಪಾಂತರಿ ವೈರಸ್​ಗಳೂ ತಮ್ಮ ಉಳಿವಿಗಾಗಿ ತಮ್ಮ ರೂಪವನ್ನು ಬದಲಾಯಿಸಕೊಳ್ಳುತ್ತವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದದು ಡೆಲ್ಟಾ ವೈರಸ್​.. ಕೆಲವು ಅಧಿಕೃತ ಮಾಹಿತಿ ಪ್ರಕಾರ ಭಾರತದಲ್ಲಿ ಅತ್ಯಧಿಕ ಸಾವು ನೋವಿನ ಪ್ರಮಾಣಕ್ಕೆ ಕಾರಣವಾಗಿದೆ. ಈ ವೈರಸ್ ಕೂಡಾ ಡೆಲ್ಟಾ ಪ್ಲಸ್ ಆಗಿ ತನ್ನ ರೂಪವನ್ನು ಬದಲಾಯಿಸಿಕೊಂಡಿದೆ.

ಡೆಲ್ಟಾ ಪ್ಲಸ್ ಏನು?

ಡೆಲ್ಟಾ ಪ್ಲಸ್​​ ಮೊದಲೇ ಹೇಳಿದಂತೆ ಡೆಲ್ಟಾ ವೈರಸ್​ನ ಮ್ಯೂಟೆಂಟ್. ಈ ವೈರಸ್ ಅನ್ನು ತಾಂತ್ರಿಕವಾಗಿ B.1.617.2.1 ಅಥವಾ AY.1 ಎಂದು ಕರೆಯಲಾಗುತ್ತದೆ. ಡೆಲ್ಟಾ ಪ್ಲಸ್​ನ ಮೂಲ ವೈರಸ್ ಆದ ಡೆಲ್ಟಾ ವೈರಸ್​ ಮೊದಲ ಬಾರಿಗೆ ಭಾರತದಲ್ಲಿ ಹಿಂದಿನ ವರ್ಷವೇ ಕಂಡು ಬಂದಿತ್ತು.

ಭಾರತದಲ್ಲಿ ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದೇ ಕಾರಣ ಮಾತ್ರವಲ್ಲದೇ, ಯೂರೋಪ್​ ರಾಷ್ಟ್ರಗಳಿಗೂ ಕೂಡಾ ಸಾಕಷ್ಟು ಕಿರಿಕಿರಿ ಉಂಟುಮಾಡಿತ್ತು. ಈಗ ಡೆಲ್ಟಾ ವೈರಸ್​ನ ರೂಪಾಂತರ ಡೆಲ್ಟಾ ಪ್ಲಸ್ ಯೂರೋಪ್​ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಭಾರತದ ಹಲವೆಡೆಯೂ ಈ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಗೆ ಕಾರಣವಾಗಿದೆ.

ವ್ಯಾಕ್ಸಿನ್​ಗಳು ಕೆಲಸ ಮಾಡುವುದಿಲ್ಲ?

ಈಗ ಸದ್ಯಕ್ಕೆ ಇರುವ ಕೋವಿಡ್ ವ್ಯಾಕ್ಸಿನ್​ಗಳು, ಆ್ಯಂಟಿಬಾಡಿಗಳು ಮತ್ತು ವೈರಸ್ ವಿರುದ್ಧದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಡೆಲ್ಟಾ ಪ್ಲಸ್ ವೈರಸ್ ಹೊಂದಿರಬಹುದೆಂದು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ ಎಲ್ಲಾ ಕೊರೊನಾ ವೈರಸ್​ಗಳಿಗಿಂತ ಡೆಲ್ಟಾ ಪ್ಲಸ್ ವೈರಸ್ ತುಂಬಾ ವೇಗವಾಗಿ ಹರಡುವ ಸಾಧ್ಯತೆಯಿದೆ. ಇದರಿಂದ ವಿಜ್ಞಾನಿಗಳು ಸರ್ಕಾರಕ್ಕೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ 20ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿಯೂ ಹಲವೆಡೆ ಪತ್ತೆಯಾಗಿದೆ ಎಂಬುದು ಅಧಿಕೃತ ಮಾಹಿತಿ.

ಭಾರತಕ್ಕೆ ಏಕೆ ಆತಂಕ?

ಭಾರತದಲ್ಲಿ ಮೂರನೇ ಅಲೆಗೆ ಡೆಲ್ಟಾ ಪ್ಲಸ್ ವೈರಸ್ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಕೊರೊನಾ ಎರಡನೇ ಅಲೆಯಿಂದ ಭಾರತದಲ್ಲಿ ಸಾಕಷ್ಟು ಹಾನಿಯಾಗಿದೆ. ಲಕ್ಷಾಂತರ ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಈಗ ಕಾಣಿಸಿಕೊಳ್ಳುತ್ತಿರುವ ಡೆಲ್ಟಾ ಪ್ಲಸ್​ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಕಾರಣದಿಂದಾಗಿ ಭಾರತ ಮಾತ್ರವಲ್ಲದೇ ಜನನಿಬಿಡ ದೇಶಗಳಲ್ಲಿ ಇದು ಸುಲಭವಾಗಿ ಹರಡುತ್ತದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸಿಐಡಿ ಇನ್ಸ್​ಪೆಕ್ಟರ್ ಹತ್ಯೆಗೈದ ಅಪರಿಚಿತ ಬಂದೂಕುಧಾರಿಗಳು

ಆರ್ಥಿಕತೆ ಈಗಾಗಲೇ ಮುಗ್ಗರಿಸಿದ್ದು, ಎರಡನೇ ಅಲೆಯ ನಂತರ ಅದನ್ನು ಮೇಲೆತ್ತುವ ಪ್ರಯತ್ನ ನಡೆಯುತ್ತಿದೆ. ಬದುಕು ಕಟ್ಟಿಕೊಳ್ಳಲು ಜನ, ಹೊರಗೆ ಬರಬೇಕಾದ ಅನಿವಾರ್ಯತೆಯೂ ಹೆಚ್ಚಿದೆ. ಈ ವೇಳೆ ವೈರಸ್ ಹರಡುವ ವೇಗ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಡೆಲ್ಟಾ ವೈರಸ್ ಬಗ್ಗೆ ಕಾಳಜಿ ವಹಿಸಲು ಸೂಚಿಸಿದೆ.

ಕೋವಿಡ್ ವ್ಯಾಕ್ಸಿನೇಷನ್ ಈ ವೈರಸ್ ಅನ್ನು ಮಣಿಸಲು ಅಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಡೆಲ್ಟಾ ವೈರಸ್ ಅನ್ನು ಮಣಿಸುವ ಕೋವಿಡ್ ಲಸಿಕೆ ಸಿಕ್ಕರೂ ಭಾರತದಂಥಹ ಬೃಹತ್ ರಾಷ್ಟ್ರದಲ್ಲಿ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಲು ಹರಸಾಹಸ ಪಡಬೇಕಾಗುತ್ತದೆ. ಈಗ ವ್ಯಾಕ್ಸಿನೇಷನ್ ವೇಗವಾಗಿ ನಡೆಯುತ್ತಿರುವುದು ಸ್ವಾಗತಾರ್ಹವಾದರೂ, ಇನ್ನಷ್ಟು ವೇಗ ಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.