ETV Bharat / bharat

ಪ್ರಾಣಿಗಳಿಂದ ಅಪಘಾತ ತಡೆಗೆ ಕ್ರಮ: ರೈಲು ಹಳಿ ಸುತ್ತ 1,000 ಕಿ.ಮೀ ಆವರಣ ಗೋಡೆ ನಿರ್ಮಾಣ - Decision to build 1000 km rail enclosure

ರೈಲು ಆವರಣ ತಡೆಗೋಡೆ ನಿರ್ಮಿಸುವ ವಿಷಯದಲ್ಲಿ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಎರಡು ವಿಭಿನ್ನ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲೊಂದು ವಿನ್ಯಾಸವನ್ನು ಅನುಮೋದಿಸಲಾಗಿದ್ದು, ಈ ವಿನ್ಯಾಸದ ಗೋಡೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ 1,000 ಕಿಮೀ ಗೋಡೆ ನಿರ್ಮಿಸಲು ಯೋಜಿಸಿದ್ದೇವೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದರು.

ಪ್ರಾಣಿಗಳಿಂದ ಅಪಘಾತ ತಡೆಗೆ 1000 ಕಿಮೀ ರೈಲು ಹಳಿಗೆ ಆವರಣ ಗೋಡೆ ನಿರ್ಮಿಸಲು ನಿರ್ಧಾರ
Cattle run over cases Railways to build 1000 km of boundary walls in worst affected sections
author img

By

Published : Nov 17, 2022, 11:05 AM IST

ನವದೆಹಲಿ: ಗಾಂಧಿನಗರ - ಮುಂಬೈ ರೈಲು ಮಾರ್ಗದಲ್ಲಿ ಇತ್ತೀಚೆಗೆ ವಂದೇ ಭಾರತ್ ರೈಲಿನಡಿ ದನಕರುಗಳು ಸಿಲುಕಿ ಸಾವಿಗೀಡಾದ ಕೆಲ ಘಟನೆಗಳೂ ಸೇರಿದಂತೆ ಒಟ್ಟಾರೆಯಾಗಿ ಜಾನುವಾರುಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು, 1 ಸಾವಿರ ಕಿಲೋ ಮೀಟರ್ ರೈಲು ಮಾರ್ಗದ ಪಕ್ಕದಲ್ಲಿ ಮುಂದಿನ ಆರು ತಿಂಗಳೊಳಗಾಗಿ ಆವರಣ ಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಆವರಣ ಗೋಡೆ ನಿರ್ಮಿಸುವ ವಿಷಯದಲ್ಲಿ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಎರಡು ವಿಭಿನ್ನ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲೊಂದು ವಿನ್ಯಾಸವನ್ನು ಅನುಮೋದಿಸಲಾಗಿದ್ದು, ಈ ವಿನ್ಯಾಸದ ಗೋಡೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ 1,000 ಕಿಮೀ ಗೋಡೆ ನಿರ್ಮಿಸಲು ಯೋಜಿಸಿದ್ದೇವೆ ಎಂದು ವೈಷ್ಣವ್ ಹೇಳಿದರು. ಸಾಮಾನ್ಯ ಆವರಣ ಗೋಡೆಗಳು ಜಾನುವಾರುಗಳ ಸಮಸ್ಯೆಯನ್ನು ತಡೆಯುವ ಬದಲಿಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಮಸ್ಯೆಯುಂಟು ಮಾಡುತ್ತವೆ.

ರೈಲ್ವೇ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಾನುವಾರು ಅಥವಾ ಮನುಷ್ಯರು ಹಳಿಗಳ ಮೇಲೆ ಬಂದ ಕಾರಣದಿಂದ ಇಲಾಖೆಗೆ ಉಂಟಾದ ನಷ್ಟಗಳು ಹೆಚ್ಚಾಗಿವೆ. ಹಣಕಾಸು ವರ್ಷ 2022 ರಲ್ಲಿ 2,115 ರೈಲು ನಷ್ಟ ಪ್ರಕರಣಗಳು ವರದಿಯಾಗಿದ್ದರೆ, ಏಪ್ರಿಲ್ ಮತ್ತು ಅಕ್ಟೋಬರ್ 2022 ರ ನಡುವೆ ಕೇವಲ ಆರು ತಿಂಗಳಲ್ಲಿ 2,650 ಪ್ರಕರಣ ವರದಿಯಾಗಿವೆ.

ಅಕ್ಟೋಬರ್‌ನ ಮೊದಲ ಒಂಬತ್ತು ದಿನಗಳಲ್ಲಿ 200 ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಓಡಾಟದಲ್ಲಿ ಜಾನುವಾರುಗಳು ಅಡ್ಡ ಬಂದ ಪ್ರಕರಣಗಳು ನಡೆದಿವೆ. ಈ ವರ್ಷ ಇಲ್ಲಿಯವರೆಗೆ 4,000 ಕ್ಕೂ ಹೆಚ್ಚು ರೈಲುಗಳು ಜಾನುವಾರು ಓಡಾಟದಿಂದ ಪ್ರಭಾವಿತವಾಗಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಣಕಾಸು ವರ್ಷ 2022 ರಲ್ಲಿ ಸುಮಾರು 26,000 ಜಾನುವಾರು ಅಡ್ಡ ಬಂದ ಪ್ರಕರಣಗಳು ವರದಿಯಾಗಿವೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು-ಚೆನ್ನೈ ವಂದೇ ಭಾರತ್ ವಿಶೇಷ ರೈಲಿನಲ್ಲಿ ಪ್ರಯಾಣಿಸಬೇಕೇ? ಹೀಗಿದೆ ದರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.