ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ- 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 73 ರನ್ಗಳನ್ನು ಬಾರಿಸಿದ್ದಾರೆ. ಆಟಗಾರ ಇಶಾನ್ ಕಿಶನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಮುಂಬರುವ ಪಂದ್ಯದಲ್ಲೂ ಇದೇ ರೀತಿ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.
ಚೊಚ್ಚಲ ಪಂದ್ಯದಲ್ಲಿ ಕಿಶನ್ ಅವರ ಅರ್ಧಶತಕ ಮತ್ತು ವಿರಾಟ್ ಕೊಹ್ಲಿಯ ಅಬ್ಬರದ ಪ್ರದರ್ಶನ ಭಾರತಕ್ಕೆ ಏಳು ವಿಕೆಟ್ ಜಯಗಳಿಸಲು ಕಾರಣವಾಗಿದೆ. ಇನ್ನು ಕಿಶನ್ 32 ಎಸೆತಗಳಲ್ಲಿ 56 ರನ್ ಗಳಿಸಿದ್ದಾರೆ.
ಇದನ್ನು ಓದಿ: ಕೊಹ್ಲಿ-ಇಶಾನ್ ಕಿಶನ್ ಅಬ್ಬರದ ಅರ್ಧಶತಕ.. ಆಂಗ್ಲರ ವಿರುದ್ಧ ಟೀಂ ಇಂಡಿಯಾ ಜಯಭೇರಿ..
ಇನ್ನು ಈ ಬಗ್ಗೆ ಮಾತನಾಡಿದ ಕಿಶನ್, "ಇದು ನನಗೆ ಹೆಮ್ಮೆಯ ಭಾವನೆಯಾಗಿತ್ತು. ಏಕೆಂದರೆ ನಾನು ಕೊಹ್ಲಿಯವರನ್ನು ಟಿವಿಯಲ್ಲಿ ನೋಡಿದ್ದೇನೆ. ಆದರೆ, ಕ್ರೀಡಾಂಗಣದಲ್ಲಿ ಅವರ ವರ್ತನೆ ಎಲ್ಲವೂ ವಿಭಿನ್ನ, ಪ್ರೇರೇಪಿಸುವಂತಿದೆ. ಅವರಿಂದ ಕಲಿಯಲು ಬಹಳಷ್ಟು ಇದೆ. ಈ ಸರಣಿಯಲ್ಲಿ ನಾನು ಅವರಿಂದ ಸಾಕಷ್ಟು ಕಲಿಯುತ್ತೇನೆ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ" ಎಂದಿದ್ದಾರೆ.