ಅಹಮದಾಬಾದ್: ಗುಜರಾತ್‌ನ ಮೋರ್ಬಿಯಲ್ಲಿ ಸಂಭವಿಸಿದ ಕೇಬಲ್ ಸೇತುವೆ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ಬೆಳಗ್ಗೆ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಮಚ್ಚು ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಎಸ್‌ಡಿಆರ್‌ಎಫ್‌ನೊಂದಿಗೆ ಎನ್‌ಡಿಆರ್‌ಎಫ್ ತಂಡಗಳು ಸಹ ಈ ಕಾರ್ಯದಲ್ಲಿ ನಿರತವಾಗಿವೆ.
ಹೀಗಾಗಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಾಂಘ್ವಿ ತಡರಾತ್ರಿಯಿಂದ ಇಲ್ಲಿಯವರೆಗೂ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ದುಃಖದ ಸಂಗತಿಯೆಂದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತದೇಹಗಳನ್ನು ಪಡೆಯುವ ಪ್ರಕ್ರಿಯೆ ಮುಂದುವರೆದಿದೆ. ಸಾವಿನ ಸಂಖ್ಯೆ 141ಕ್ಕೂ ಹೆಚ್ಚು ತಲುಪಿದೆ ಎಂದು ಗುಜರಾತ್ ರಾಜ್ಯ ಸರ್ಕಾರ ತಿಳಿಸಿದೆ. ಇಂದು ಮಧ್ಯಾಹ್ನದ ವೇಳೆಗೆ ರಕ್ಷಣಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಈ ದುರಂತದಲ್ಲಿ ಸಾವನ್ನಪ್ಪಿರುವ ಸಂಖ್ಯೆ ನಿಖರವಾಗಿ ತಿಳಿಯಲಿದೆ. ರಕ್ಷಣಾ ಕಾರ್ಯಕ್ಕಾಗಿ ಕೇಂದ್ರ ಏಜೆನ್ಸಿಗಳ ಜೊತೆಗೆ ಅಗ್ನಿಶಾಮಕ ದಳ, ಕೋಸ್ಟ್ ಗಾರ್ಡ್, ಗರುಡ್ ಕಮಾಂಡೋಸ್ ಮತ್ತು ನೌಕಾಪಡೆಯ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮೋರ್ಬಿ ಮತ್ತು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಾಗಿದ್ದಾರೆ.
-
Gujarat | Early morning visuals from the accident site in #Morbi where more than 100 people have lost their lives after a cable bridge collapsed.
— ANI (@ANI) October 31, 2022 " class="align-text-top noRightClick twitterSection" data="
Gujarat Home Minister Harsh Sanghavi is also present at the spot. pic.twitter.com/TxtzWySFGT
">Gujarat | Early morning visuals from the accident site in #Morbi where more than 100 people have lost their lives after a cable bridge collapsed.
— ANI (@ANI) October 31, 2022
Gujarat Home Minister Harsh Sanghavi is also present at the spot. pic.twitter.com/TxtzWySFGTGujarat | Early morning visuals from the accident site in #Morbi where more than 100 people have lost their lives after a cable bridge collapsed.
— ANI (@ANI) October 31, 2022
Gujarat Home Minister Harsh Sanghavi is also present at the spot. pic.twitter.com/TxtzWySFGT
ಮೊರ್ಬಿಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ: ಮೂರು ದಿನಗಳ ಗುಜರಾತ್ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮೊರ್ಬಿಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ದುರಂತದ ಕುರಿತು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕ್ರಮಗಳು ರದ್ದು: ಮತ್ತೊಂದೆಡೆ ಬಿಜೆಪಿ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ನವೆಂಬರ್ 1 ರಂದು ಗಾಂಧಿನಗರದಲ್ಲಿ ನಡೆಯಲಿರುವ ಪೇಜ್ ಕಮಿಟಿ ಪ್ರಮುಖರ ದೀಪಾವಳಿ ಮಿಲನ್ ಕಾರ್ಯಕ್ರಮ ರದ್ದಾಗಿದೆ. ಅಕ್ಟೋಬರ್ 31 ರಿಂದ ಪ್ರಾರಂಭವಾಗುವ ರಾಜ್ಯಾದ್ಯಂತ ಪರಿವರ್ತನ ಸಂಕಲ್ಪ ಯಾತ್ರೆಯನ್ನು ಕಾಂಗ್ರೆಸ್ ಮುಂದೂಡಿದೆ. ಆದರೂ ಯಾತ್ರೆಗಾಗಿ ಗುಜರಾತ್ ತಲುಪುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರು ಮೊರ್ಬಿಗೆ ಭೇಟಿ ನೀಡಲಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನು ಓದಿ: ಭಾರಕ್ಕೆ ಕುಸಿಯಿತೇ ಸೇತುವೆ.. ದುರಂತಕ್ಕೂ ಮೊದಲು ಸೇತುವೆಗೆ ಭೇಟಿ ನೀಡಿದ ಕುಟುಂಬ ಹೇಳಿದ್ದೇನು?
ಹರ್ಷ ಸಾಂಘ್ವಿ ಹೇಳಿದ್ದೇನು?: ಗೃಹ ಸಚಿವ ಹರ್ಷ ಸಾಂಘ್ವಿ ಮೊರ್ಬಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ‘‘ತುಂಬಾ ದುಃಖದ ಘಟನೆ ನಡೆದಿದೆ, ಸೇತುವೆ ಮೇಲೆ ಸುಮಾರು 300 ಮಂದಿ ಇದ್ದರು ಎಂದು ತಿಳಿದು ಬಂದಿದೆ. 6:30 ರಿಂದ 6.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸ್ಥಳೀಯರ ಸಹಾಯದಿಂದ ಕೂಡಲೇ ಕಾರ್ಯಾಚರಣೆ ಪ್ರಾರಂಭಿಸಿ ಹಲವಾರು ಜನರನ್ನು ರಕ್ಷಿಸಲಾಯಿತು.
-
#MorbiBridgeCollapse | Indian Army teams deployed in Morbi, Gujarat carried out search and rescue operations for survivors of the mishap. All three defence services have deployed their teams for search operations: Defence officials pic.twitter.com/tfEjCW3MhE
— ANI (@ANI) October 31, 2022 " class="align-text-top noRightClick twitterSection" data="
">#MorbiBridgeCollapse | Indian Army teams deployed in Morbi, Gujarat carried out search and rescue operations for survivors of the mishap. All three defence services have deployed their teams for search operations: Defence officials pic.twitter.com/tfEjCW3MhE
— ANI (@ANI) October 31, 2022#MorbiBridgeCollapse | Indian Army teams deployed in Morbi, Gujarat carried out search and rescue operations for survivors of the mishap. All three defence services have deployed their teams for search operations: Defence officials pic.twitter.com/tfEjCW3MhE
— ANI (@ANI) October 31, 2022
ದುರಂತದ ಮೊದಲು ಬಚಾವ್ ಮಾಡಿದ ವ್ಯಕ್ತಿಯನ್ನು 6.50 ಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣವೇ ರಾಜ್‌ಕೋಟ್ ನಗರದಿಂದ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ತಂಡವನ್ನು ಮೊರ್ಬಿಗೆ ಕಳುಹಿಸಲಾಯಿತು. ಘಟನೆಯ ಮಾಹಿತಿಯನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಪೇಂದ್ರ ಪಟೇಲ್‌ಗೆ ಕರೆ ಮಾಡಿದರು ಎಂದರು.
ಸರ್ಕಾರಿ ಆಸ್ಪತ್ರೆಗಳ ರಜೆಗಳು ರದ್ದು: ಮೊರ್ಬಿಯಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆ ನೌಕರರ ರಜೆಯನ್ನು ರದ್ದುಗೊಳಿಸಲಾಗಿದೆ. ಕೂಡಲೇ ನೌಕರರನ್ನು ಹಾಜರಾಗಲು ಆದೇಶಿಸಲಾಗಿದೆ. ಇದಲ್ಲದೆ, ಸುತ್ತಮುತ್ತಲಿನ ಎಲ್ಲ ಖಾಸಗಿ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಗಳ ವೈದ್ಯರಿಗೆ ಖಾಸಗಿ ಆಸ್ಪತ್ರೆಗಳಿಗೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ ಹೇಳಿದ್ದಾರೆ.
ಇದನ್ನು ಓದಿ:ತೂಗು ಸೇತುವೆ ಕುಸಿದು 60ಕ್ಕೂ ಹೆಚ್ಚು ಜನ ಸಾವು: ರಾಷ್ಟ್ರಪತಿ ಮುರ್ಮು, ಮೋದಿ, ಶಾ ಸಂತಾಪ
ತನಿಖೆಗಾಗಿ ಎಸ್‌ಐಟಿ ರಚಿಸಿದ ಸರ್ಕಾರ: ಮೊರ್ಬಿಯ ದುರಂತ ಅಪಘಾತದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಐದು ಸದಸ್ಯರ ತಂಡದಲ್ಲಿ ಆರ್ & ಬಿ ಕಾರ್ಯದರ್ಶಿ ಸಂದೀಪ್ ವಾಸವ, ಐಎಎಸ್ ರಾಜ್‌ಕುಮಾರ್ ಬೇನಿವಾಲ್, ಐಪಿಎಸ್ ಸುಭಾಷ್ ತ್ರಿವೇದಿ, ಮುಖ್ಯ ಇಂಜಿನಿಯರ್ ಕೆಎಂ ಪಟೇಲ್ ಜೊತೆಗೆ ಡಾ.ಗೋಪಾಲ್ ಇದ್ದಾರೆ. ಈ ವಿಶೇಷ ತನಿಖಾ ತಂಡ ಅಪಘಾತದ ಕಾರಣವನ್ನು ಪತ್ತೆ ಮಾಡುತ್ತದೆ.
43 ವರ್ಷಗಳ ನಂತರ ಮೊರ್ಬಿಯ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಅಪಘಾತವಾಗಿದೆ. ಆಗಸ್ಟ್ 11, 1979 ರಂದು ಮಚ್ಚು ನದಿಯ ಅಣೆಕಟ್ಟು ಕುಸಿದಾಗ 1,800 - 25,000 ಜನರು ಮೃತಪಟ್ಟಿದ್ದರು.
-
Gujarat | Search and rescue operations underway in Morbi where 132 people died after a cable bridge collapsed yesterday. #MorbiBridgeCollapse pic.twitter.com/uTIZiIu8Ps
— ANI (@ANI) October 31, 2022 " class="align-text-top noRightClick twitterSection" data="
">Gujarat | Search and rescue operations underway in Morbi where 132 people died after a cable bridge collapsed yesterday. #MorbiBridgeCollapse pic.twitter.com/uTIZiIu8Ps
— ANI (@ANI) October 31, 2022Gujarat | Search and rescue operations underway in Morbi where 132 people died after a cable bridge collapsed yesterday. #MorbiBridgeCollapse pic.twitter.com/uTIZiIu8Ps
— ANI (@ANI) October 31, 2022
ಕಂಪನಿ ವಿರುದ್ಧ ಪ್ರಕರಣ ದಾಖಲು: ಮೋರ್ಬಿ ಅಪಘಾತಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಐಪಿಸಿಯ 304, 308, 114 ಅಳವಡಿಸಲಾಗಿದೆ. ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘ್ವಿ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಮೊರ್ಬಿಯ ಈ ಐತಿಹಾಸಿಕ ಸೇತುವೆಯನ್ನು ನವೀಕರಣಗೊಳಿಸುವುದಕ್ಕೆ ಒರೆವಾ ಎಂಬ ಕಂಪನಿಯು ಇತ್ತೀಚೆಗೆ ವಹಿಸಿಕೊಂಡಿತ್ತು.
ಟೆಂಡರ್‌ನ ನಿಯಮಗಳ ಪ್ರಕಾರ, ಕಂಪನಿಯು ಮುಂದಿನ 15 ವರ್ಷಗಳವರೆಗೆ ಸೇತುವೆಯನ್ನು ನಿರ್ವಹಿಸಬೇಕಾಗಿತ್ತು. ಕಂಪನಿಯು ಏಳು ತಿಂಗಳ ರಿಪೇರಿ ನಂತರ ನವೆಂಬರ್ 26 ರಂದು ಸಾರ್ವಜನಿಕರಿಗೆ ತೆರೆಯಿತು. ಸೇತುವೆ ನವೀಕರಣಗೊಂಡು ಐದು ದಿನಗಳ ನಂತರ ಅಂದ್ರೆ ಅಕ್ಟೋಬರ್ 30ರ ಸಂಜೆ 6.30 ರಿಂದ 7:30 ರ ನಡುವೆ ಸೇತುವೆ ಅಪಘಾತಕ್ಕೀಡಾಯಿತು.
ಇದನ್ನು ಓದಿ: ಮೊರ್ಬಿ ದುರಂತದಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ 4ರ ಬಾಲಕ.. ತಂದೆ - ತಾಯಿ ಸಾವು!