ETV Bharat / bharat

ಹೊಸ ಬಾಳಿಗೆ ಕಾಲಿಟ್ಟ ಮೂಗ ಮತ್ತು ಕಿವುಡ ಜೋಡಿಗಳು.. ವಿಶೇಷಚೇತನರ ಅತ್ಯಪರೂಪದ ಮದುವೆ - ಸಹೋದರಿಯರನ್ನು ವಿವಾಹವಾದ ಸಹೋದರರು

ರಾಜಸ್ಥಾನದ ಜೈಪುರದಲ್ಲೊಂದು ಅಪರೂಪದ ವಿವಾಹವೊಂದು ಜರುಗಿದ್ದು, ಮಸ್ಸೂರಿ ಸಮುದಾಯದ ವಿಶೇಷ ಜೋಡಿಗಳಿಗೆ ವಿವಾಹ ನೆರವೇರಿದೆ.

Deaf And Dumb Marriage Jaipur
ರಾಜಸ್ಥಾನದಲ್ಲಿ ಅತ್ಯಪರೂಪದ ಮದುವೆ: ನೆರೆದಿದ್ದವರ ಕಣ್ತುಂಬಿಸಿದ 'ವಿಶೇಷ' ವಿವಾಹ
author img

By

Published : Dec 16, 2021, 10:46 AM IST

ಜೈಪುರ(ರಾಜಸ್ಥಾನ): ವಿವಾಹ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದು ಕೆಲವೊಮ್ಮೆ ನಿಜವೂ ಹೌದು. ಆ ಮಾತಿಗೆ ಸಾಕ್ಷಿ ಎಂಬಂತೆ ಈಗ ರಾಜಸ್ಥಾನದ ಜೈಪುರದಲ್ಲೊಂದು ಅಪರೂಪದ ವಿವಾಹವೊಂದು ಜರುಗಿದೆ.

ಹೌದು, ಇಬ್ಬರು ಅವಳಿ-ಜವಳಿ ಸಹೋದರರು, ಇಬ್ಬರು ಅವಳಿ-ಜವಳಿ ಸಹೋದರಿಯರನ್ನು ವಿವಾಹವಾಗಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ ? ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗಳು ಕಿವುಡ ಮತ್ತು ಮೂಗರಿದ್ದಾರೆ. ನವ ವಧು-ವರರಿಗೆ ಹುಟ್ಟಿನಿಂದಲೂ ಈ ಸಮಸ್ಯೆ ಕಾಡುತ್ತಿದೆ.

ಮಸ್ಸೂರಿ ಸಮುದಾಯದ ನಿಯಮಗಳಂತೆ ಜೈಪುರ ನಗರದ ಜಗದೀಶ್ ಕಾಲೋನಿಯಲ್ಲಿ ವಿವಾಹ ಮಹೋತ್ಸವ ನಡೆದಿದ್ದು, ವಧು- ವರರ ಸಂಭ್ರಮ ಕಂಡು ಅಲ್ಲಿ ನೆರೆದಿದ್ದವರ ಕಣ್ತುಂಬಿ ಬಂದಿದೆ. ಅವರ ವಿವಾಹ ಕಾರ್ಯಕ್ರಮ ನಡೆಸುವುದು ಸ್ವಲ್ಪ ಕಠಿಣವಾಗಿತ್ತು ಎಂದು ಸಮುದಾಯದ ಮುಖ್ಯಸ್ಥ ಸೈಯದ್ ಅಸ್ಘರ್ ಅಲಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಅತ್ಯಪರೂಪದ ಮದುವೆ

ವಿವಾಹ ಸಮಾರಂಭದಲ್ಲಿ ಕೆಲವು ಸಂಬಂಧಿಗಳು ಸೇರಿದಂತೆ, ವಧು- ವರರ ಜೊತೆ ವಿದ್ಯಾಭ್ಯಾಸ ಮಾಡಿದ್ದ ಸುಮಾರು 50 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೋಡಿಗಳು ಒಂದೇ ಶಾಲೆಯಲ್ಲಿ, ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು ಎಂಬುದು ಮತ್ತೊಂದು ವಿಶೇಷ..

ಇದನ್ನೂ ಓದಿ: ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹರಾಜು... ಬರೋಬ್ಬರಿ 44 ಲಕ್ಷ ರೂ. ನೀಡಿ ಬಿಡ್​​ ಗೆದ್ದ ವ್ಯಕ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.