ETV Bharat / bharat

ಶೇ 100 ರಷ್ಟು ಬೆಳವಣಿಗೆ ಕಂಡ ಡಿಡಿ, ಆಕಾಶವಾಣಿ.. ಪಾಕ್​ನಲ್ಲೂ ಜನಪ್ರಿಯತೆ..

author img

By

Published : Jan 4, 2021, 10:01 AM IST

2020 ರಲ್ಲಿ ಪಾಕಿಸ್ತಾನದಲ್ಲಿ ಸಹ ಡಿಡಿ ಮತ್ತು ಆಕಾಶವಾಣಿ ಜನಪ್ರಿಯತೆ ಗಳಿಸಿವೆ. ಭಾರತ ಹೊರತುಪಡಿಸಿದರೆ ದೂರದರ್ಶನ ವೀಕ್ಷಕರು ಮತ್ತು ಆಕಾಶವಾಣಿ ಕೇಳುಗರ ಸಂಖ್ಯೆ ಪಾಕಿಸ್ತಾನದಲ್ಲಿ ಹೆಚ್ಚಾಗಿ ಕಂಡುಬಂದಿದೆ.

ದೂರದರ್ಶನ, ಆಕಾಶವಾಣಿ
ದೂರದರ್ಶನ, ಆಕಾಶವಾಣಿ

ನವದೆಹಲಿ: ಪ್ರಸಾರ ಭಾರತಿಯ ಡಿಜಿಟಲ್‌ ಚಾನೆಲ್‌ಗ‌ಳು (ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ) 2020ರಲ್ಲಿ ಶೇ 100ರಷ್ಟು ಬೆಳವಣಿಗೆ ಸಾಧಿಸಿವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ದೂರದರ್ಶನ ಮತ್ತು ಆಕಾಶವಾಣಿ ತನ್ನದೇ ಆದ ವೀಕ್ಷಕರನ್ನು ಹೊಂದಿವೆ. 2020 ರಲ್ಲಿ ಪಾಕಿಸ್ತಾನದಲ್ಲಿ ಸಹ ಡಿಡಿ ಮತ್ತು ಆಕಾಶವಾಣಿ ಜನಪ್ರಿಯತೆ ಗಳಿಸಿವೆ. ಭಾರತ ಹೊರತುಪಡಿಸಿದರೆ ದೂರದರ್ಶನ ವೀಕ್ಷಕರು ಮತ್ತು ಆಕಾಶವಾಣಿ ಕೇಳುಗರ ಸಂಖ್ಯೆ ಪಾಕಿಸ್ತಾನದಲ್ಲಿ ಹೆಚ್ಚಾಗಿ ಕಂಡುಬಂದಿದೆ. ಅಮೆರಿಕದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ.

2020 ರ ಅವಧಿಯಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ 'ನ್ಯೂಸ್‌ ಆನ್‌ ಏರ್‌’ ಆ್ಯಪ್‌ ಬಳಕೆ ಮಾಡಿದ್ದಾರೆ. ಡಿಡಿ ನ್ಯಾಷನಲ್ ಮತ್ತು ಡಿಡಿ ನ್ಯೂಸ್ ಹೊರತುಪಡಿಸಿ, ಪ್ರಸಾರ ಭಾರತಿಯ ಟಾಪ್ 10 ಡಿಜಿಟಲ್ ಚಾನೆಲ್‌ಗಳಲ್ಲಿ ಡಿಡಿ ಚಂದನ ಸಹ ಒಂದಾಗಿದೆ. ಉಳಿದಂತೆ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಸಹ್ಯಾದ್ರಿ, ಬಾಂಗ್ಲಾ ಸಮಾಚಾರ್, ಡಿಡಿ ಸಪ್ತಗಿರಿ ಸಹ ಹೆಚ್ಚು ಜನಪ್ರಿಯತೆ ಗಳಿಸಿವೆ.

2020 ಜ.26 ರಂದು ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಿರುವುದು ಹೆಚ್ಚು ಜನಮೆಚ್ಚುಗೆ ಗಳಿಸಿದ ಡಿಜಿಟಲ್‌ ವಿಡಿಯೋಗಳ ಪೈಕಿ ಒಂದಾಗಿದೆ ಮತ್ತು 'ಮನ್ ಕಿ ಬಾತ್' ಕಾರ್ಯಕ್ರಮ ವೀಕ್ಷಕರ ಸಂಖ್ಯೆ ಸಹ ಅಧಿಕವಾಗಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಸುಮಾರು 1,500 ರೇಡಿಯೊ ನಾಟಕಗಳು ಲಭ್ಯವಿದ್ದು, ಇವುಗಳನ್ನು ಯೂಟ್ಯೂಬ್​ಗೆ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.