ಚೆನ್ನೈ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ ಮಾಡಿರುವ ಘಟನೆ ಚೆನ್ನೈನ ಪರಂಗಿಮಲೈ ರೈಲು ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ಸಬ್ ಅರ್ಬನ್ ರೈಲಿನ ಮುಂದೆ ಕಾಲೇಜು ವಿದ್ಯಾರ್ಥಿನಿ ಸತ್ಯಾ ಎಂಬಾಕೆಯನ್ನು ಯುವಕನೊಬ್ಬ ತಳ್ಳಿ, ಹತ್ಯೆ ಮಾಡಿದ್ದಾನೆ. ಈ ನಿಟ್ಟಿನಲ್ಲಿ 7 ವಿಶೇಷ ಪಡೆಗಳನ್ನು ರಚಿಸಿ, ಹತ್ಯೆಗೈದ ಸತೀಶ್ ಎಂಬ ವ್ಯಕ್ತಿಯನ್ನು ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿ ಬಂಧಿಸಲಾಗಿದೆ.
ಈ ನಡುವೆ ಮಗಳ ಸಾವಿನ ವಿಷಯ ತಿಳಿದ ಸತ್ಯಾ ತಂದೆ ಮಾಣಿಕ್ಕಂ ವಿಷ ಕುಡಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿಯ ತಾಯಿ, ಮಹಿಳಾ ಹೆಡ್ ಕಾನ್ಸ್ಟೇಬಲ್ ರಾಮಲಕ್ಷ್ಮಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ.
ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ಕಾಲೇಜು ವಿದ್ಯಾರ್ಥಿನಿ ಸತ್ಯಾ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ, ಅನಾರೋಗ್ಯ ಪೀಡಿತ ತಾಯಿ ರಾಮಲಕ್ಷ್ಮಿ ಅವರಿಗೆ ಸಾಂತ್ವನ ಹೇಳಿದ್ದಾರೆ. ತಾಂಬರಂ ರೈಲ್ವೆ ಪೊಲೀಸ್ ಇಲಾಖೆ ಅಧಿಕಾರಿಗಳು ಸತೀಶ್ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಬಲಿ.. ಕಾನ್ಸ್ಟೇಬಲ್ ಮಗಳನ್ನು ರೈಲಿಗೆ ತಳ್ಳಿ ಕೊಂದ ಪಾಪಿ