ETV Bharat / bharat

ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ವಿವಾಹ.. ಮಗಳನ್ನೇ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ತಂದೆ! - Etv bharat kannada

ತಾನು ಪ್ರೀತಿ ಮಾಡ್ತಿದ್ದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದಕ್ಕಾಗಿ ಆಕ್ರೋಶಗೊಂಡ ತಂದೆ, ಆಕೆಯ ಮೇಲೆ ಆಟೋ ಹತ್ತಿಸಿ ಕೊಲೆ ಮಾಡಲು ಮುಂದಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ವಿವಾಹ
ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ವಿವಾಹ
author img

By

Published : Jul 28, 2022, 6:43 PM IST

Updated : Jul 28, 2022, 7:35 PM IST

ಭರತ್​​ಪುರ(ರಾಜಸ್ಥಾನ): ಹಿಂದೂ ಯುವಕನೊಂದಿಗೆ ಮದುವೆಯಾಗಿದ್ದಕ್ಕಾಗಿ ಆಕ್ರೋಶಗೊಂಡ ತಂದೆ ತನ್ನ ಮಗಳನ್ನ ಆಟೋ ಹತ್ತಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕುಟುಂಬಸ್ಥರ ವಿರೋಧದ ಮಧ್ಯೆ ತಾನು ಪ್ರೀತಿ ಮಾಡ್ತಿದ್ದ ಯುವಕನೊಂದಿಗೆ ಯುವತಿ ಮದುವೆ ಮಾಡಿಕೊಂಡಿದ್ದಳು. ಇದರಿಂದ ಆಕ್ರೋಶಗೊಂಡ ತಂದೆ ಈ ಕ್ರಮಕ್ಕೆ ಮುಂದಾಗಿದ್ದಾಗಿ ತಿಳಿದು ಬಂದಿದೆ.

ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ವಿವಾಹ

ಏನಿದು ಸಂಪೂರ್ಣ ಪ್ರಕರಣ?: ಇಲ್ಲಿನ ಮಾಲಿ ಮೊಹಲ್ಲಾ ನಮಕ್ ಕತ್ರ ನಿವಾಸಿಗಳಾದ ನರೇಂದ್ರ ಕುಮಾರ್ ಸೈನಿ ಮತ್ತು ನಗ್ಮಾ ಖಾನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಎರಡು ಕುಟುಂಬಸ್ಥರ ವಿರೋಧವಿತ್ತು. ಇದರ ಮಧ್ಯೆ ಇಬ್ಬರು ಫೆಬ್ರವರಿ ತಿಂಗಳಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದರು. ದೆಹಲಿಯಲ್ಲಿ ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾದರು. ಮದುವೆಯ ನಂತರ ಇಬ್ಬರೂ ಭರತ್‌ಪುರಕ್ಕೆ ವಾಪಸ್​ ಆಗಿದ್ದರು. ಇದರ ಮಧ್ಯೆ ನಗ್ಮಾಳ ತಂದೆ ಇಸ್ಲಾಂ ಖಾನ್ ನನ್ನ ಮಗಳನ್ನ ಅಪಹರಿಸಿ ಆಮಿಷವೊಡ್ಡಿ ಬಲವಂತವಾಗಿ ಮದುವೆ ಮಾಡಿಕೊಂಡಿರುವ ಬಗ್ಗೆ ಹುಡುಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿರಿ: ವಿಡಿಯೋ: ನೀರಿನಲ್ಲಿ ನಡೆದು ಬಾರದ ಶಿಕ್ಷಕಿಗೆ ಕುರ್ಚಿಗಳ ಸೇತುವೆ: ವಿದ್ಯಾರ್ಥಿಗಳ ಆಸರೆ!

ಪೊಲೀಸ್ ಪ್ರಕರಣ ಹಾಗೂ ಕುಟುಂಬ ಸದಸ್ಯರ ಬೆದರಿಕೆಯಿಂದ ಹುಡುಗ ತನ್ನ ಅಣ್ಣನೊಂದಿಗೆ ಹೆಂಡತಿ ಜೊತೆ ಮಧ್ಯಪ್ರದೇಶದ ಕಟ್ನಿಗೆ ತೆರಳಿದ್ದರು. ಎರಡು ತಿಂಗಳ ಕಾಲ ಮಥುರಾದಲ್ಲಿ ಉಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಗ್ಮಾ ಗರ್ಭಿಣಿಯಾಗಿದ್ದಾರೆ. ಇದಾದ ಬಳಿಕ ಇಬ್ಬರು ನಗರದ ರಂಜಿತ್ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಲು ಶುರು ಮಾಡಿದ್ದಾರೆ. ಇಂದು ಮಧ್ಯಾಹ್ನ ನಗ್ಮಾ ಪತಿ ಜೊತೆ ಆಸ್ಪತ್ರೆಗೆ ತಪಾಸಣೆಗೋಸ್ಕರ ತೆರಳಿದ್ದರು. ಈ ವೇಳೆ ಇಸ್ಲಾಂ ಆಟೋದಲ್ಲಿ ತನ್ನ ಮಗಳನ್ನ ಹಿಂಬಾಲಿಸಿದ್ದಾನೆ.

ಗಂಡನೊಂದಿಗೆ ನಗ್ಮಾ ಜ್ಯೂಸ್ ಕುಡಿದು ಬೈಕ್ ಮೇಲೆ ತೆರಳುತ್ತಿದ್ದಾಗ ಆಟೋ ಡಿಕ್ಕಿ ಹೊಡೆಸಿದ್ದಾನೆ. ಆದರೆ, ಪ್ರಾಣಾಪಾಯದಿಂದ ಇಬ್ಬರು ಪಾರಾಗಿದ್ದಾರೆ. ಘಟನೆ ಬೆನ್ನಲ್ಲೇ ಆಟೋ ಸಮೇತವಾಗಿ ಇಸ್ಲಾಂ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

Last Updated : Jul 28, 2022, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.