ETV Bharat / bharat

ಅತ್ತೆಯ ಜೀವನಾಧಾರ ಭತ್ಯೆ ನೀಡಲು ಸೊಸೆಗೆ ಹಕ್ಕಿಲ್ಲ: ಬಾಂಬೆ ಹೈಕೋರ್ಟ್ - ಜೀವನಾಧಾರ ಭತ್ಯೆ ನೀಡುವ ಕುರಿತು ಬಾಂಬೆ ಹೈಕೋರ್ಟ್​ ತೀರ್ಪು

ಬಾಂಬೆ ಹೈಕೋರ್ಟ್ ಏಪ್ರಿಲ್ 27ರಂದು ಎರಡೂ ಪಕ್ಷಗಳ ವಾದ-ಪ್ರತಿ ವಾದವನ್ನು ಆಲಿಸಿತ್ತು. ಅದರಲ್ಲಿ ಹಿರಿಯ ನಾಗರಿಕರ ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿ ತೀರ್ಪನ್ನು ಎತ್ತಿಹಿಡಿದಿದೆ. ತನ್ನ ತೀರ್ಪಿನಲ್ಲಿ ಹಿರಿಯ ನಾಗರಿಕರ ಕಾಯಿದೆಯ ಸೆಕ್ಷನ್ 2 (ಎ)ನಲ್ಲಿ ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಉಲ್ಲೇಖಿಸಲಾಗಿದೆ..

The daughter in law cannot be instructed to pay the mother in law subsistence allowance  Bombay HC observation on subsistence allowance  Subsistence allowance case Bombay HC  ಅತ್ತೆಯ ಜೀವನಾಧಾರ ಭತ್ಯೆ ನೀಡಲು ಸೊಸೆಗೆ ಹಕ್ಕಿಲ್ಲ ಎಂದ ಬಾಂಬೆ ಹೈಕೋರ್ಟ್​ ಜೀವನಾಧಾರ ಭತ್ಯೆ ನೀಡುವ ಕುರಿತು ಬಾಂಬೆ ಹೈಕೋರ್ಟ್​ ತೀರ್ಪು  ಬಾಂಬೆ ಹೈಕೋರ್ಟ್​ ಸುದ್ದಿ
ಬಾಂಬೆ ಹೈಕೋರ್ಟ್
author img

By

Published : May 21, 2022, 2:13 PM IST

ಮುಂಬೈ : ಸೊಸೆಯಂದರು ತಮ್ಮ ಅತ್ತೆ-ಮಾವಂದಿರುಗಳಿಗೆ ಜೀವನಾಧಾರ ಭತ್ಯೆಯಿಂದ ಮುಕ್ತಿ ಹೊಂದುವ ಹಕ್ಕಿದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಮುಂಬೈನ ಮಹಿಳೆಯೊಬ್ಬರಿಗೆ ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ತನ್ನ ಅತ್ತೆಗೆ ಭತ್ಯೆ ನೀಡುವಂತೆ ಆಕೆ ಮತ್ತು ಆಕೆಯ ಪತಿಗೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಈ ಅವಲೋಕನ ನಡೆದಿದೆ.

79 ವರ್ಷದ ಗಂಡನ ಮರಣದ ನಂತರ ನನ್ನ ಮಗ ಮತ್ತು ಸೊಸೆ ಹೊರ ಹಾಕುತ್ತಿದ್ದಾರೆ ಎಂದು 77 ವರ್ಷದ ತಾಯಿಯೊಬ್ಬಳು ನ್ಯಾಯಕ್ಕಾಗಿ ಮೊರೆ ಹೋಗಿದ್ದರು. 2019ರಲ್ಲಿ ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಕುಟುಂಬ ನ್ಯಾಯಾಲಯವು ಮಗ ಮತ್ತು ಸೊಸೆಗೆ ಪೂರ್ವಜರ ಬಂಗಲೆಯನ್ನು ಖಾಲಿ ಮಾಡಿ ಮತ್ತು ವಿಧವೆ ತಾಯಿಗೆ ತಿಂಗಳಿಗೆ 25,000 ರೂಪಾಯಿ ನೀಡುವಂತೆ ತೀರ್ಪು ನೀಡಿತ್ತು.

2019ರ ಆದೇಶವನ್ನು ವಿರೋಧಿಸಿ ಮತ್ತು ಆದಾಯದ ಕೊರತೆಯಿಂದಾಗಿ ಜೀವನಾಧಾರ ಭತ್ಯೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸೊಸೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಓದಿ: '51 ವರ್ಷದ ಅತ್ತೆಗೆ ಗುತ್ತಿಗೆ ಆಧಾರದಲ್ಲಿ ಬಾಯ್‌ಫ್ರೆಂಡ್‌ ಬೇಕಾಗಿದ್ದಾರೆ' Conditions apply!

ಬಾಂಬೆ ಹೈಕೋರ್ಟ್ ಏಪ್ರಿಲ್ 27ರಂದು ಎರಡೂ ಪಕ್ಷಗಳ ವಾದ-ಪ್ರತಿ ವಾದವನ್ನು ಆಲಿಸಿತ್ತು. ಅದರಲ್ಲಿ ಹಿರಿಯ ನಾಗರಿಕರ ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿ ತೀರ್ಪನ್ನು ಎತ್ತಿಹಿಡಿದಿದೆ. ತನ್ನ ತೀರ್ಪಿನಲ್ಲಿ ಹಿರಿಯ ನಾಗರಿಕರ ಕಾಯಿದೆಯ ಸೆಕ್ಷನ್ 2 (ಎ)ನಲ್ಲಿ ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಉಲ್ಲೇಖಿಸಲಾಗಿದೆ.

ಆದರೆ, ಸೊಸೆಯರನ್ನು ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯವು ಹೈಲೈಟ್ ಮಾಡಿದೆ. ಆದ್ದರಿಂದ ಅತ್ತೆಯ ಜೀವನಾಧಾರ ಭತ್ಯೆ ನೀಡುವಂತೆ ಸೊಸೆಗೆ ಸೂಚಿಸುವಂತಿಲ್ಲ. ಈ ಮೂಲಕ ಅರ್ಜಿದಾರರು ಪ್ರಶ್ನಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಮಾಧವ್ ಜಾಮ್ದಾರ್ ಅವರ ಪೀಠ ರದ್ದುಗೊಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.