ETV Bharat / bharat

ಪ್ರಚೋದನಾಕಾರಿ ಟ್ವೀಟ್​ ಆರೋಪದಡಿ ಅಣ್ಣಾಮಲೈ ವಿರುದ್ಧ ಕೇಸ್​ : ತಾಕತ್ತಿದ್ದರೆ ಬಂಧಿಸಿ ಎಂದು ಸರ್ಕಾರಕ್ಕೆ ಸವಾಲ್​ - ಈಟಿವಿ ಭಾರತ ಕನ್ನಡ

ತಮಿಳುನಾಡಿನಲ್ಲಿ ಕಾರ್ಮಿಕರ ಮೇಲೆ ದಾಳಿ ಆರೋಪ ಪ್ರಕರಣ - ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು - 24 ಗಂಟೆಯೊಳಗೆ ಬಂಧಿಸುವಂತೆ ಡಿಎಂಕೆ ಸರ್ಕಾರಕ್ಕೆ ಅಣ್ಣಾಮಲೈ ಸವಾಲು

dare-you-to-touch-me-dot-dot-dot-annamalai-challenges-dmk-govt-to-arrest-him-within-24-hrs-in-migrant-labour-case
ಪ್ರಚೋದನಾಕಾರಿ ಟ್ವೀಟ್​ ಆರೋಪದಡಿ ಅಣ್ಣಾಮಲೈ ವಿರುದ್ಧ ಕೇಸ್​ : ತಾಕತ್ತಿದ್ದರೆ ಬಂಧಿಸಿ ಎಂದು ಬಿಜೆಪಿ ನಾಯಕನ ಸವಾಲು
author img

By

Published : Mar 5, 2023, 6:26 PM IST

ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ಆರೋಪ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನನ್ನು 24 ಗಂಟೆಗಳ ಒಳಗೆ ಬಂಧಿಸಲಿ ಎಂದು ಅಣ್ಣಾಮಲೈ ಸವಾಲೆಸೆದಿದ್ದಾರೆ.

ಬಿಹಾರ ಮೂಲದ ಕಾರ್ಮಿಕರಿಗೆ ಥಳಿಸಲಾಗಿದೆ ಎಂಬ ಆರೋಪ ಪ್ರಕರಣವು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಇತರ ಗುಂಪುಗಳ ನಡುವೆ ದ್ವೇಷವನ್ನು ಬಿತ್ತುವ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸೈಬರ್​ ಕ್ರೈಂ ಪೊಲೀಸರು ವಿವಿಧ ಸೆಕ್ಷನ್‌ಗಳಡಿ ಕೇಸ್​​ ದಾಖಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ​ ಅಣ್ಣಾಮಲೈ, ನನ್ನ ವಿರುದ್ಧ ಡಿಎಂಕೆ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ. ಈ ಮೂಲಕ ಸರ್ಕಾರವು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಬಹುದೆಂದು ಭಾವಿಸಿದೆ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ನಿಮಗೆ 24 ಗಂಟೆಗಳ ಕಾಲಾವಕಾಶವನ್ನು ನೀಡುತ್ತೇನೆ. ಸಾಧ್ಯವಾದರೆ ನನ್ನನ್ನು ಮುಟ್ಟಿ ಎಂದು ಗುಡುಗಿದ್ದಾರೆ.

ಅಲ್ಲದೆ ಉತ್ತರ ಭಾರತದ ಸಹೋದರರ ವಿರುದ್ಧ ತಮ್ಮ ಏಳು ದಶಕಗಳ ಅಪಪ್ರಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ಡಿಎಂಕೆ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ. ಅದನ್ನು ನಿನ್ನೆ ನಾನು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದೇನೆ. ನನ್ನನ್ನು ಬಂಧಿಸುವಂತೆ ನಾನು ಫ್ಯಾಸಿಸ್ಟ್ ಡಿಎಂಕೆಗೆ ಸವಾಲು ಹಾಕುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಇದನ್ನೂ ಓದಿ : ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್​

ಇದೇ ವೇಳೆ ನಿನ್ನೆ ವಲಸೆ ಕಾರ್ಮಿಕರ ಬಗ್ಗೆ ಹೇಳಿಕೆ ನೀಡಿದ್ದ ಮಾಡಿದ್ದ ಅಣ್ಣಾಮಲೈ, ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅದರ ಮೈತ್ರಿ ಪಕ್ಷದ ನಾಯಕರು ವಲಸಿಗರ ಮೇಲಿನ ದ್ವೇಷಕ್ಕೆ ಕಾರಣರಾಗಿದ್ದಾರೆ. ತಮಿಳುನಾಡಿನಲ್ಲಿ ಬಿಹಾರದ ಜನರ ಮೇಲಿನ ದಾಳಿಯ ಬಗ್ಗೆ ಸುಳ್ಳು ಸುದ್ದಿ ಹರಡುವುದನ್ನು ನಾನು ವಿರೋಧಿಸುತ್ತೇನೆ. ತಮಿಳರು ಉತ್ತರ ಭಾರತೀಯರ ವಿರುದ್ಧದ "ಪ್ರತ್ಯೇಕತೆ" ಮತ್ತು ದ್ವೇಷ" ವನ್ನು ಬೆಂಬಲಿಸುವುದಿಲ್ಲ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ನಕಲಿ ಸುದ್ದಿಗಳನ್ನು ನೋಡುವುದು ನಿರಾಶಾದಾಯಕವಾಗಿದೆ. ತಮಿಳರು ನಾವು "ಜಗತ್ತು ಒಂದೇ" ಎಂಬ ಪರಿಕಲ್ಪನೆಯನ್ನು ನಂಬುತ್ತೇವೆ ಎಂದಿದ್ದಾರೆ.

ಮತ್ತೊಂದೆಡೆ ಇದೇ ಪ್ರಕರಣ ಸಂಬಂಧ ತಮಿಳುನಾಡು ಪೊಲೀಸರು 'ಬಿಜೆಪಿ ಬಿಹಾರ' ಟ್ವಿಟರ್ ಖಾತೆದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 153, 153A(1)(a), 505(1)(b) IPC 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್ ಮತ್ತು ಪಾಟ್ನಾ ಮೂಲದ ಪತ್ರಕರ್ತ ದೈನಿಕ್ ಭಾಸ್ಕರ್ ಪತ್ರಿಕೆ ಸಂಪಾದಕ, 'ತನ್ವೀರ್ ಪೋಸ್ಟ್' ಟ್ವಿಟರ್ ಖಾತೆ ಬಳಕೆದಾರ ಮೊಹಮ್ಮದ್ ತನ್ವೀರ್ ಮತ್ತು ಶುಭಂ ಶುಕ್ಲಾ ವಿರುದ್ಧವೂ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಉತ್ತರ ಭಾರತೀಯ ವಲಸೆ ಕಾರ್ಮಿಕರು ಭಯಪಡಬೇಕಿಲ್ಲ: ತಮಿಳುನಾಡು ರಾಜ್ಯಪಾಲರ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.