ETV Bharat / bharat

ಸಿಎಂ ನಿಯಮ ಬ್ರೇಕ್ ಮಾಡಿದ್ದಾರೆ: ನಾವು ಲಾಕ್​ಡೌನ್ ರೂಲ್ಸ್​​ ಪಾಲಿಸಲ್ಲ ಎಂದ ಜನ

ಹರಿಯಾಣದ ಜಿಂದ್ ಜಿಲ್ಲೆಯ ದಾನೋಡಾ ಗ್ರಾಮದ ಜನರು ಲಾಕ್‌ಡೌನ್ ಮತ್ತು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಲು ನಿರ್ಧರಿಸಿದ್ದಾರೆ. ನಮ್ಮ ಸಿಎಂ ಕೊರೊನಾ ಪ್ರೋಟೋಕಾಲ್ ಅನುಸರಿಸದೇ ಇರುವಾಗ, ನಾವು ಏಕೆ ಅನುಸರಿಸಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

danoda-village-of-jind-decided-to-boycott-lockdown
ನಾವು ನಿಯಮ ಪಾಲಿಸಲ್ಲ ಎಂದ ಜನ
author img

By

Published : May 19, 2021, 5:51 PM IST

ಹರಿಯಾಣ: ಲಾಕ್‌ಡೌನ್ ಮತ್ತು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಲು ಜಿಂದ್​ ಜಿಲ್ಲೆಯ ದಾನೋಡಾ ಗ್ರಾಮದ ಜನ ನಿರ್ಧರಿಸಿದ್ದಾರೆ.

ನಾವು ನಿಯಮ ಪಾಲಿಸಲ್ಲ ಎಂದ ಜನ

ಹಿಸಾನಾದ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಉದ್ಘಾಟಿಸಲು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆಗಮಿಸಿದ್ದರು. ಈ ವೇಳೆ, ಬಾರಿ ಜನಸಮೂಹ ಜಮಾಯಿಸಿ ನಂತರ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಉಂಟಾಯಿತು. ಈ ಹಿನ್ನೆಲೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಲಾಕ್​ಡೌನ್ ಮತ್ತು ಕೊರೊನಾದ ನಿಯಮ ಅನುಸರಿಸದಿದ್ದಾಗ, ರಾಜ್ಯದ ಜನರು ಏಕೆ ಅನುಸರಿಸಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಓದಿ:ಹಲೋ, ಲಾಕ್​ಡೌನ್​ ಇದೆ, ಎಲ್ಲಿಗೆ ಹೋಗ್ತಿದ್ದೀರಿ, ಜಿಲ್ಲಾಧಿಕಾರಿಯನ್ನೇ ನಿಲ್ಲಿಸಿ ಪ್ರಶ್ನಿಸಿದ ಪೇದೆ!

ನಾವು ಲಾಕ್‌ಡೌನ್ ನಿಯಮ ಅನುಸರಿಸುವುದಿಲ್ಲ, ಗ್ರಾಮದಲ್ಲಿ ಯಾರು ಮಾಸ್ಕ್​ ಧರಿಸುವುದಿಲ್ಲ. ಎಲ್ಲ ಅಂಗಡಿಗಳನ್ನು ತೆರೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಪೊಲೀಸರು ಸಹ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರು ಗ್ರಾಮಸ್ಥರು ಒಪ್ಪಲಿಲ್ಲ. ಈ ಬಗ್ಗೆ ನೋಡಲ್ ಅಧಿಕಾರಿ ಪೇಲೆ ರಾಮ್ ಕಟಾರಿಯಾ, ಗ್ರಾಮಸ್ಥರ ಈ ಹೆಜ್ಜೆ ಬಹಳ ಮಾರಕ. ಇಂತಹ ಘಟನೆಯಿಂದ ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.