ದಿಂಡಿಗಲ್ (ತಮಿಳುನಾಡು): 2012ರಲ್ಲಿ ನಡೆದ ದಲಿತ ನಾಯಕ ಪಶುಪತಿ ಪಾಂಡಿಯನ್ ಹತ್ಯೆಗೆ ಪ್ರತೀಕಾರವಾಗಿ 59 ವರ್ಷದ ಮಹಿಳೆಯ ಶಿರಚ್ಛೇದನ ಮಾಡಿ, ಆಕೆಯ ತಲೆಯನ್ನು ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಆತನ ನಿವಾಸದ ಮುಂದೆ ಇರಿಸಲಾಗಿದೆ.
ದಿಂಡಿಗಲ್‌ನ ಚೆಟ್ಟಿನಾಯಕನಪಟ್ಟಿಯಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ನಿರ್ಮಲಾ ದೇವಿ ಎಂದು ಗುರುತಿಸಲಾಗಿದೆ. 2012ರ ಜನವರಿಯಲ್ಲಿ ಪಾಂಡಿಯನ್ ನಿವಾಸಕ್ಕೆ ನುಗ್ಗಿದ ಗುಂಪೊಂದು ಆತನನ್ನು ಹತ್ಯೆ ಮಾಡಿತ್ತು. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದ್ದು, ತನಿಖೆ ಚಾಲ್ತಿಯಲ್ಲಿರುವಾಗಲೇ ಈ ಹತ್ಯೆಯ ಸೇಡು ತೀರಿಸಿಕೊಳ್ಳಲು ಐವರನ್ನು ಕೊಲ್ಲಲಾಗಿದೆ. ಇದೀಗ ಹಂತಕರಿಗೆ ಉಳಿದುಕೊಳ್ಳಲು ಸಹಾಯ ಮಾಡಿದ್ದಾಳೆ ಎಂಬ ಆರೋಪದ ಮೇಲೆ ನಿರ್ಮಲಾ ದೇವಿಯನ್ನೂ ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅನುಮಾನಾಸ್ಪದ ಸ್ಫೋಟದಲ್ಲಿ ಮೂವರ ದುರ್ಮರಣ
ನಿನ್ನೆ ಬೆಳಗ್ಗೆ ಉದ್ಯೋಗ ಖಾತರಿ ಯೋಜನೆಯ ಕೆಲಸದ ಹಂಚಿಕೆಯಲ್ಲಿ ತೊಡಗಿದ್ದ ನಿರ್ಮಲಾ ದೇವಿ ಮೇಲೆ ದಾಳಿ ಮಾಡಿದ ಶಸ್ತ್ರಸಜ್ಜಿತ ವ್ಯಕ್ತಿಗಳು, ಆಕೆಯ ತಲೆ ಕತ್ತರಿಸಿ, ಪಶುಪತಿ ಪಾಂಡಿಯನ್ ಮನೆ ಮುಂದೆ ಇಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ವಲಯದ ಐಜಿಪಿ, ದಿಂಡಿಗಲ್ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.