ಧರ್ಮಶಾಲಾ: ರಾಷ್ಟ್ರಪತಿ ರಾಮನಾಥ ಕೋವಿಂದ್ ಬೈಪಾಸ್ ಸರ್ಜರಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಟಿಬೇಟಿಯನ್ ಬೌದ್ಧ ಧರ್ಮಗುರು ದಲೈಲಾಮಾ ಆಶಿಸಿದ್ದಾರೆ.
ಕೋವಿಂದ್ ಅವರನ್ನು ಹಳೆಯ ಸ್ನೇಹಿತ ಎಂದು ಪತ್ರದಲ್ಲಿ ತಿಳಿಸಿದ್ದು, ನಿಮ್ಮನ್ನು ಹಲವು ವರ್ಷಗಳಿಂದ ತಿಳಿದುಕೊಂಡಿರುವ ಭಾಗ್ಯ ನನ್ನದಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹುಡುಗಿ ಚಾರಿತ್ರ್ಯದ ಬಗ್ಗೆ ಹುಡುಗನ ಹಗುರ ಮಾತು: ರಣಾಂಗಣವಾದ ಸಂಭ್ರಮದ ಮನೆ!
ಎದೆ ನೋವು ಕಾಣಿಸಿಕೊಂಡಿದ್ದ ಕಾರಣ ಕಳೆದ ಶುಕ್ರವಾರ ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದ ರಾಮನಾಥ್ ಕೋವಿಂದ್, ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ಗೆ ಸ್ಥಳಾಂತರಗೊಂಡಿದ್ದರು. ಅವರಿಗೆ ಯಶಸ್ವಿ ಬೈಪಾಸ್ ಸರ್ಜರಿ ಮಾಡಲಾಗಿದೆ.