ETV Bharat / bharat

ಮಂಗೋಲಿಯನ್ ಬಾಲಕನಿಗೆ ಬೌದ್ಧ ಧರ್ಮದಲ್ಲಿ ಮೂರನೇ ಅತ್ಯುನ್ನತ ನಾಯಕನ ಪಟ್ಟ ನೀಡಿದ ದಲೈ ಲಾಮಾ

author img

By

Published : Mar 27, 2023, 10:23 PM IST

ಬೌದ್ಧ ಧರ್ಮದ ಮೂರನೇ ಅತ್ಯುನ್ನತ ನಾಯಕ ಸ್ಥಾನಕ್ಕೆ ಮಂಗೋಲಿಯನ್ ಬಾಲಕನನ್ನು ದಲೈ ಲಾಮಾ ಅವರು ಆಯ್ಕೆ ಮಾಡಿದ್ದಾರೆ.

Buddhism
ದಲೈ ಲಾಮಾ

ಹೈದರಾಬಾದ್: ಯುನೈಟೆಡ್ ಸ್ಟೇಟ್ಸ್​ನಲ್ಲಿ ಜನಿಸಿದ ಮಂಗೋಲಿಯನ್ ಹುಡುಗನಿಗೆ ಆಧ್ಯಾತ್ಮಿಕ ನಾಯಕ ಎಂಬ ಪಟ್ಟವನ್ನು ದಲೈ ಲಾಮಾ ಅವರು ನೀಡಿದ್ದಾರೆ. ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯ 10ನೇ ಖಲ್ಖಾ ಜೆಟ್ಸನ್ ಧಂಪಾ ರಿಂಪೋಚೆ ಎಂದು ಸ್ಥಾನವನ್ನು ಕೊಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮಾರ್ಚ್ 8ರಂದು ನಡೆದಿದ್ದ ಕಾರ್ಯಕ್ರಮ: ಬೌದ್ಧ ಧರ್ಮಗುರು ವಾಸಿಸುವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 8ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಎಂಟು ವರ್ಷದ ಬಾಲಕನೊಂದಿಗೆ ದಲೈ ಲಾಮಾ ಭಾಗವಹಿಸುತ್ತಿರುವ ಫೋಟೋವನ್ನು ನೋಡಬಹುದು. ಎಂಟು ವರ್ಷದ ಬಾಲಕನೊಬ್ಬ 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಆಗಿ ಪುನರ್ಜನ್ಮ ಪಡೆದಿದ್ದಾನೆ. ಇದು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಸ್ಥಾನವಾಗಿದೆ. ಚೀನಾದ ಹಗೆತನದ ನಡುವೆಯೂ ಆಧ್ಯಾತ್ಮಿಕ ನಾಯಕನ ಸ್ಥಾನಕ್ಕೆ ಆ ಬಾಲಕನ ಹೆಸರನ್ನು ದಲೈ ಲಾಮಾ ಸೂಚಿಸಿದರು.

ಮಗುವಿನ ನಿಜವಾದ ಗುರುತು ಬಹಿರಂಗವಾಗಿಲ್ಲ: ಚಿತ್ರದಲ್ಲಿ ಮಗುವಿಗೆ ಮುಖದ ಕೆಳಭಾಗವನ್ನು ಮುಖವಾಡದಿಂದ ಮುಚ್ಚಿರುವುದು ತೋರಿಸುತ್ತದೆ. ಆ ಮಗುವಿಗೆ ಕೀರಿಟ ತೊಡಿಸುತ್ತಿರುವ ಫೋಟೋದಲ್ಲಿದೆ. ಆ ಮಗುವಿನ ಅವರ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಅಮೆರಿಕದಲ್ಲಿ ಜನಿಸಿದ ಅವಳಿ ಸಹೋದರ ಪೈಕಿ ಒಬ್ಬ ಬಾಲಕ ಮತ್ತು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರ ಮಗ ಹಾಗೂ ಮಾಜಿ ಮಂಗೋಲಿಯನ್ ಸಂಸತ್ತಿನ ಸದಸ್ಯರ ಮೊಮ್ಮಗ. ಸುಮಾರು 600 ಅನುಯಾಯಿಗಳ ಸಮ್ಮುಖದಲ್ಲಿ ಸಮಾರಂಭ ನಡೆಯಿತು. ಆದರೆ, ಧರ್ಮಶಾಲಾದಲ್ಲಿರುವ ದಲೈಲಾಮಾ ಸಂಸ್ಥೆಯು ಮಗುವಿನ ನಿಜವಾದ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಇಕ್ಕಳದಿಂದ ಆರೋಪಿಗಳ ಹಲ್ಲು ಕಿತ್ತಿದ್ದ ಆರೋಪ.. ಐಪಿಎಸ್​​ ಅಧಿಕಾರಿಗೆ ಸ್ಥಳ ನಿಯುಕ್ತಿ ಮಾಡದೇ ದಿಢೀರ್ ಎತ್ತಂಗಡಿ ​

ಆತಂಕದಲ್ಲೇ ನಡೆದ ಕಾರ್ಯಕ್ರಮ: ಮಂಗೋಲಿಯನ್ ಬಾಲಕನಿಗೆ ಬೌದ್ಧ ಧರ್ಮದಲ್ಲಿ ಮೂರನೇ ಅತ್ಯುನ್ನತ ನಾಯಕನ ಪಟ್ಟ ನೀಡಿದ ಹಿನ್ನೆಲೆ ಚೀನಾವನ್ನು ಕೆರಳಿಸುವ ಸಾಧ್ಯತೆಯಿದೆ. ಅದು ತನ್ನ ಸ್ವಂತ ಸರ್ಕಾರದಿಂದ ಆಯ್ಕೆಯಾದ ಬೌದ್ಧ ನಾಯಕರನ್ನು ಮಾತ್ರ ಗುರುತಿಸುತ್ತದೆ ಎಂದು ಈ ಹಿಂದೆ ಒತ್ತಾಯಿಸಿತ್ತು. ವರದಿಯ ಪ್ರಕಾರ, ಚೀನಾದ ಹಗೆತನಕ್ಕೆ ಈ ಕಾರ್ಯಕ್ರಮ ಪುಷ್ಟಿ ನೀಡಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ಆತಂಕ ಹಾಗೂ ಉತ್ಸಾಹದಿಂದ ನಡೆಸಲಾಯಿತು.

ಇದನ್ನೂ ಓದಿ: ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಹಣಕಾಸು ವಿನಿಯೋಗ ಮಸೂದೆ ಅಂಗೀಕಾರ

ಹಿಂದೆಯೊಮ್ಮೆ ಮಗುವನ್ನು ಅಪರಿಸಿದ್ದ ಚೀನಾದ ಅಧಿಕಾರಿಗಳು: 1995ರಲ್ಲಿ ದಲೈ ಲಾಮಾ ಅವರು ಟಿಬೆಟಿಯನ್ ಬೌದ್ಧಧರ್ಮದ ಎರಡನೇ ಪ್ರಮುಖ ಆಧ್ಯಾತ್ಮಿಕ ನಾಯಕರಾದ ಹೊಸ ಪಂಚನ್ ಲಾಮಾ ಅವರನ್ನು ಹೆಸರಿಸಿದಾಗ, ಚೀನಾದ ಅಧಿಕಾರಿಗಳು ಮಗುವನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿತ್ತು. ನಂತರ ತಮ್ಮದೇ ಆದ ಅಭ್ಯರ್ಥಿಯನ್ನು ಆ ಪಟ್ಟಕ್ಕೆ ಏರಿಸಿದ್ದರು. ಅಪಹರಣವಾದ ಮಗು ಮತ್ತೆಂದೂ ಕಾಣಿಸಲೇ ಇಲ್ಲ.

ಇದನ್ನೂ ಓದಿ: ಮಂದೀಪ್ ಸಿಧು ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿದ್ದ ಅಮೃತಪಾಲ್..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.