ETV Bharat / bharat

ವಿಚಾರವಾದಿ ದಾಭೋಲ್ಕರ್‌ ಹತ್ಯೆ: ಇಬ್ಬರು ಆರೋಪಿಗಳನ್ನು ಗುರುತಿಸಿದ ಪೌರ ಕಾರ್ಮಿಕ

9 ವರ್ಷಗಳ ಹಿಂದೆ ನಡೆದ ಡಾ.ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೌರ ಕಾರ್ಮಿಕ ಗುರುತಿಸಿದ್ದಾರೆ. ಪೊಲೀಸ್​ ಹೇಳಿಕೆ ನೀಡಲು ವಿಳಂಬ ಮಾಡಿರುವ ಪ್ರತ್ಯಕ್ಷದರ್ಶಿಗೆ ನ್ಯಾಯಾಲಯ ಪ್ರಶ್ನೆ ಮಾಡಿದ್ದು, ಈ ಸಂಬಂಧ ಮಾ.23ಕ್ಕೆ ಮರು ವಿಚಾರಣೆ ನಿಗದಿಯಾಗಿದೆ.

Dabholkar murder
Dabholkar murder
author img

By

Published : Mar 20, 2022, 7:14 AM IST

ಪುಣೆ (ಮಹಾರಾಷ್ಟ್ರ): ವಿಚಾರವಾದಿ, ಮೌಢ್ಯವಿರೋಧಿ ಹೋರಾಟಗಾರ ಡಾ.ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ಆರೋಪಿಗಳಾದ ಸಚಿನ್‌ ಅಂದೂರೆ ಮತ್ತು ಶರದ್‌ ಕಳಸ್ಕರ್​ನನ್ನು ಪ್ರತ್ಯಕ್ಷದರ್ಶಿಯಾದ ಪೌರ ಕಾರ್ಮಿಕರೊಬ್ಬರು ಗುರುತಿಸಿದ್ದು, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಸ್ಥಾಪಿಸಿದ್ದ ಡಾ. ನರೇಂದ್ರ ದಾಭೋಲ್ಕರ್‌ ಅವರನ್ನು 2013ರ ಆ.20ರಂದು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಮನೆಯಿಂದ ವಾಕಿಂಗ್​ಗೆಂದು ಬಂದಿದ್ದಾಗ ದಾಭೋಲ್ಕರ್‌ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಈ ಪ್ರಕರಣದಲ್ಲಿ ಸಚಿನ್‌ ಅಂದೂರೆ, ಶರದ್‌ ಕಳಸ್ಕರ್ ಸೇರಿ ಇತರ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಇಲ್ಲಿನ ಪಾಲಿಕೆಯ ಪೌರ ಕಾರ್ಮಿಕ ಕಿರಣ್​ ಕಾಂಬ್ಳೆ ಎಂಬುವವರು ಪುಣೆ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದಾರೆ.

'ನಾನು ನನ್ನ ಕೆಲಸ ಮುಗಿದ ಬಳಿಕ ಡಿವೈಡರ್​ ಮೇಲೆ ಕುಳಿತಿದ್ದೆ. ಆಗ ಪಟಾಕಿ ಶಬ್ದದಂತೆ ಕೇಳಿ ಆ ಕಡೆ ತಿರುಗಿ ನೋಡಿದೆ. ಆಗ ಇಬ್ಬರು ವ್ಯಕ್ತಿಗಳು ಸೇರಿ ಒಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸುತ್ತಿದ್ದರು. ನಂತರ ಆ ಒಬ್ಬರೂ ವ್ಯಕ್ತಿಗಳು ನಾನು ಕುಳಿತಿದ್ದ ಕಡೆಯೇ ಓಡಿ ಬಂದರು. ನಂತರ ಪೊಲೀಸ್​ ಚೌಕ್​ ಸಮೀಪ ಬಂದು ಅಲ್ಲಿ ನಿಲ್ಲಿಸಿದ್ದ ಬೈಕ್​ ತೆಗೆದುಕೊಂಡು ಪರಾರಿಯಾದರು. ನಾನು ಘಟನೆ ನಡೆದ ಸ್ಥಳಕ್ಕೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಒಬ್ಬ ವ್ಯಕ್ತಿ ಬಿದ್ದಿದ್ದರು' ಎಂದು ಪ್ರತ್ಯಕ್ಷದರ್ಶಿ ಕಿರಣ್​ ಕಾಂಬ್ಳೆ ಸಾಕ್ಷ್ಯ ನುಡಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಸೂರ್ಯವಂಶಿ ಹೇಳಿದ್ದಾರೆ.

ಅಲ್ಲದೇ, ಈ ಬಗ್ಗೆ ಪೊಲೀಸ್​ ಹೇಳಿಕೆ ನೀಡಲು ಯಾಕೆ ತಡ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗೆ ನ್ಯಾಯಾಲಯ ಪ್ರಶ್ನೆಯೂ ಮಾಡಿದೆ. ಈ ಸಂಬಂಧ ಮಾ.23ರಂದು ಮರು ವಿಚಾರಣೆ ನಡೆಯಲಿದೆ ಎಂದೂ ಸೂರ್ಯವಂಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಸೋಶಿಯಲ್ ಮೀಡಿಯಾ ಸ್ಟಾರ್​​ ಗಾಯತ್ರಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.