ETV Bharat / bharat

ಕುಡಿಯಲು ನೀರು ಕೇಳಿದ ಇಬ್ಬರು ಯುವಕರಿಗೆ ಮೂತ್ರ ಕುಡಿಸಿ, ವಿಡಿಯೋ ಮಾಡಿದ ಕಿರಾತಕರು! - ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ

ಉತ್ತರ ಪ್ರದೇಶದಲ್ಲಿ ಯಾವುದೋ ವಿಷಯಕ್ಕೆ ನಡೆದ ಸಣ್ಣ ಗಲಾಟೆ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಅಪಹರಿಸಿದ ಎದುರಾಳಿ ಗುಂಪಿನ ನಾಲ್ವರು, ಆ ಇಬ್ಬರಿಗೆ ಥಳಿಸಿ ಮೂತ್ರ ಕೂಡಿಸಿ ನೀಚ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

dabangs-beat-up-two-youths-and-drinking-urines-in-shahjahanpur
ಕುಡಿಯಲು ನೀರು ಕೇಳಿದ ಇಬ್ಬರು ಯುವಕರಿಗೆ ಮೂತ್ರ ಕುಡಿಸಿ, ವಿಡಿಯೋ ಮಾಡಿದ ಕಿರಾತಕರು!
author img

By

Published : Jul 15, 2022, 6:13 PM IST

ಷಹಜಹಾನ್‌ಪುರ (ಉತ್ತರ ಪ್ರದೇಶ): ಕುಡಿಯಲು ನೀರು ಕೇಳಿದ ಇಬ್ಬರು ಯುವಕರಿಗೆ ನಾಲ್ವರು ಆರೋಪಿಗಳು ಮೂತ್ರ ಕುಡಿಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಷಹಜಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಜುಲೈ 8 ರಂದು ಸದರ್ ಬಜಾರ್ ಪೊಲೀಸ್​ ಠಾಣಾ ವ್ಯಾಪ್ತಿಯ ಕಕ್ರಾ ಪ್ರದೇಶದ ನಿವಾಸಿಗಳಾದ ಇಸ್ತೇಕರ್, ಶಬ್ಬು ಮತ್ತು ಇದೇ ಪ್ರದೇಶದ ಸರ್ದಾರ್ ರಾಜು, ಕುಲ್ವಿಂದರ್, ಜೀತಾ, ಸೋನು ಅಲಿಯಾಸ್ ಸುಖದೇವ್ ಎಂಬ ನಾಲ್ವರೊಂದಿಗೆ ಸಣ್ಣ ಗಲಾಟೆಯಾಗಿತ್ತು.

ಕುಡಿಯಲು ನೀರು ಕೇಳಿದ ಇಬ್ಬರು ಯುವಕರಿಗೆ ಮೂತ್ರ ಕುಡಿಸಿ, ವಿಡಿಯೋ ಮಾಡಿದ ಕಿರಾತಕರು!

ಈ ಘಟನೆಯ ಬಳಿಕ ಅಂದು ಸಂಜೆಯೇ ನಾಲ್ವರು ಆರೋಪಿಗಳು ಕಾರಿನಲ್ಲಿ ಬಂದು ಇಸ್ತೇಕರ್, ಶಬ್ಬುರನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದಾದ ನಂತರ ನಾಲ್ವರು ಸೇರಿಕೊಂಡು ಇಸ್ತೇಕರ್ ಮತ್ತು ಶಬ್ಬುಗೆ ಮನಬಂದಂತೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ವೇಳೆ, ಗಾಯಾಳು ಯುವಕರು ಕುಡಿಯಲು ನೀರು ಕೇಳಿದ್ದಾರೆ. ಆದರೆ, ಆರೋಪಿಗಳು ಮೂತ್ರ ಕುಡಿಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪತ್ನಿಯ ತಲೆ ಕಡಿದು, ರುಂಡದೊಂದಿಗೆ 12 ಕಿ.ಮೀ ನಡೆದು ಪೊಲೀಸ್ ಠಾಣೆಗೆ ಬಂದ ಪತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.