ಪಾಣಿಪತ್: ಪಾಣಿಪತ್ನ ತಹಸಿಲ್ ಕ್ಯಾಂಪ್ ಎಂಬಲ್ಲಿ ಗುರುವಾರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಟೀ ಮಾಡಲೆಂದು ಅವರು ಗ್ಯಾಸ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದಿಂದ ಭಾರಿ ಬೆಂಕಿ ಆವರಿಸಿದ್ದು ಪತಿ - ಪತ್ನಿ ಸೇರಿದಂತೆ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ. ಅಬ್ದುಲ್ ಕರೀಂ (50), ಅಫ್ರೋಜಾ (46), ಇಶ್ರತ್ ಖಾತೂನ್ (18), ರೇಷ್ಮಾ (17), ಅಫ್ಫಾನ್ (7) ಮತ್ತು ಅಬ್ದುಲ್ ಶಕುರ್ (10) ಮೃತಪಟ್ಟ ದುರ್ದೈವಿಗಳು.
-
Haryana | As per the initial investigation an explosion happened due to a gas cylinder leakage. When a family member lit fire to make tea, an explosion took place. Six members died due to suffocation. Post-mortem report will clarify the cause of death: DSP D Kharab, Panipat pic.twitter.com/h3DodHSsO8
— ANI (@ANI) January 12, 2023 " class="align-text-top noRightClick twitterSection" data="
">Haryana | As per the initial investigation an explosion happened due to a gas cylinder leakage. When a family member lit fire to make tea, an explosion took place. Six members died due to suffocation. Post-mortem report will clarify the cause of death: DSP D Kharab, Panipat pic.twitter.com/h3DodHSsO8
— ANI (@ANI) January 12, 2023Haryana | As per the initial investigation an explosion happened due to a gas cylinder leakage. When a family member lit fire to make tea, an explosion took place. Six members died due to suffocation. Post-mortem report will clarify the cause of death: DSP D Kharab, Panipat pic.twitter.com/h3DodHSsO8
— ANI (@ANI) January 12, 2023
ಮೃತರು ಮೂಲತಃ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಒಂದೂವರೆ ವರ್ಷದ ಹಿಂದೆ ಈ ಕುಟುಂಬ ಪಾಣಿಪತ್ ತಹಸಿಲ್ ಕ್ಯಾಂಪ್ಗೆ ಬಂದು ನೆಲೆಸಿತ್ತು. ಪತಿ-ಪತ್ನಿ ಇಬ್ಬರೂ ಕುಟುಂಬ ನಿರ್ವಹಣೆಗಾಗಿ ದಿನಗೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಇದೆ.
ಮಗಳ ಮದುವೆಗೆ ತಯಾರಿ ನಡೆಸಿದ್ದ ಕುಟುಂಬ: ಮೃತರಲ್ಲಿ ಓರ್ವ ಹಿರಿಯ ಮಗಳಿಗೆ ಸದ್ಯದಲ್ಲೇ ನಿಖಾ ಮಾಡುವ ನಿರ್ಧಾರ ಮಾಡಲಾಗಿತ್ತು. ಅಬ್ದುಲ್ ಕರೀಂ ಮತ್ತು ಅವರ ಪತ್ನಿ ಅಫ್ರೋಜಾ ತಮ್ಮ ಇಬ್ಬರು ಪುತ್ರರೊಂದಿಗೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದರು. ಹಿರಿಯ ಪುತ್ರಿ ಇಶ್ರತ್ ಖಾತೂನ್ ಅವರ ಮದುವೆ ಮಾಡುವ ಉದ್ದೇಶದಿಂದ ಒಂದು ತಿಂಗಳ ಹಿಂದೆಯಷ್ಟೇ ಅಬ್ದುಲ್ ಕರೀಂ ತನ್ನ ಮಕ್ಕಳನ್ನು ಪಾಣಿಪತ್ಗೆ ಕರೆಸಿಕೊಂಡಿದ್ದರು. ಬರುವ ಭಾನುವಾರ ಇಶ್ರತ್ ಖಾತೂನ್ ನೋಡಲೆಂದು ಹುಡುಗನ ಕಡೆಯವರು ಬರಲು ಸಹ ತಿಳಿಸಿದ್ದರು. ಆದರೆ, ಇಷ್ಟರಲ್ಲಿ ಈ ದುರಂತ ಸಂಭವಿಸಿದೆ ಎಂದು ಡಿಎಸ್ಪಿ ಧರಂವೀರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಬಿಎಂಆರ್ಸಿಎಲ್ ಅಧಿಕಾರಿಗಳು
ಮೃತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೃತರು ಬಾಡಿಗೆ ಮನೆಯಲ್ಲಿ ಇದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಎಲ್ಲರ ಮೃತದೇಹಗಳನ್ನು ಪಾಣಿಪತ್ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ಉಳಿದ ಕಾರಣ ತಿಳಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಈ ಸ್ಫೋಟ ಸಂಭವಿಸಿದೆ. ಕುಟುಂಬದ ಸದಸ್ಯರು ಚಹಾ ಮಾಡಲು ಗ್ಯಾಸ್ ಆನ್ ಮಾಡಿದಾಗ ಈ ಸ್ಫೋಟ ಸಂಭವಿಸಿದೆ. ಪರಿಣಾಮ ಕುಟುಂಬ ಆರು ಸದಸ್ಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ಕಾರಣವನ್ನು ಸ್ಪಷ್ಟಪಡಿಸುತ್ತದೆ. - ಡಿಎಸ್ಪಿ ಡಿ ಖರಾಬ್, ಪಾಣಿಪತ್
ಸೋಮವಾರವಷ್ಟೇ ಹರಿಯಾಣದ ರೇವಾರಿ ಜಿಲ್ಲೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಭಾರಿ ಅನಾಹುತವೊಂದು ಸಂಭವಿಸಿತ್ತು. ಈ ಸ್ಫೋಟದಿಂದ ಸುಮಾರು ಏಳು ಕೊಳೆಗೇರಿಗಳು ಸುಟ್ಟು ಬೂದಿಯಾಗಿದ್ದವು. ಈ ಘಟನೆ ಮಾಸುವ ಮುನ್ನ ಇದೀಗ ಮತ್ತೊಂದು ದುರಂತ ನಡೆದಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಆಂಬ್ಯುಲೆನ್ಸ್ ಸಿಗದೇ ಕೈಗಾಡಿಯಲ್ಲೇ ಅನಾರೋಗ್ಯಪೀಡಿತ ಪತ್ನಿಯ ಆಸ್ಪತ್ರೆಗೆ ಕರೆದೊಯ್ದ ಪತಿ