ETV Bharat / bharat

ನಿವಾರ್ ಹಾವಳಿಗೆ 10ಕ್ಕೂ ಹೆಚ್ಚು ರೈಲುಗಳ ಸ್ಥಗಿತ : ಬುಕ್ಕಿಂಗ್ ಹಣ ಮರುಪಾವತಿಗೆ ನಿರ್ಧಾರ - ತಮಿಳುನಾಡಿನಲ್ಲಿ ನಿವಾರ್ ಅಬ್ಬರ

ರೈಲು ಸೇವೆಗಳು ರದ್ದಾದ ಕಾರಣದಿಂದಾಗಿ ಈಗಾಗಲೇ ಮುಂಗಡವಾಗಿ ಕಾಯ್ದಿರಿಸಲಾದ ಟಿಕೆಟ್​ಗಳ ಶುಲ್ಕವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುತ್ತದೆ. ಹಣವನ್ನು ವಾಪಸ್ಸು ಪಡೆಯುವ ಸಮಯವನ್ನು ಪ್ರಯಾಣದ ದಿನಾಂಕದಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ..

indian railway
ಭಾರತೀಯ ರೈಲ್ವೆ
author img

By

Published : Nov 25, 2020, 9:04 PM IST

ನವದೆಹಲಿ : ನಿವಾರ್ ಚಂಡಮಾರುತದ ಕಾರಣದಿಂದಾಗಿ ನವೆಂಬರ್ 25 ಹಾಗೂ 26ರಂದು ದಕ್ಷಿಣ ಭಾರತದಲ್ಲಿ ಕಾರ್ಯಾಚರಣೆ ಮಾಡುವ ಹಲವಾರು ವಿಶೇಷ ರೈಲುಗಳ ಸೇವೆಯನ್ನು ರದ್ದು ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ನಿವಾರ್ ಚಂಡಮಾರುತ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಯಲ್ಲಿ ಸಾಕಷ್ಟು ಹಾನಿ ಸೃಷ್ಟಿಸಿದ್ದು, ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದ ಕಾರಣದಿಂದ ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ.

ನಿವಾರ್ ಚಂಡಮಾರುತದಿಂದಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಹಾಗೂ ಭೂಕುಸಿತ ಉಂಟಾಗುತ್ತಿದ್ದು, ಸಾಕಷ್ಟು ಪರಿಣಾಮ ಬೀರುವ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ವಿಶೇಷ ರೈಲುಗಳ ಸೇವೆಯನ್ನ ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ನಿವಾರ್​ ಎಫೆಕ್ಟ್: ಬೆಂಗಳೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಣೆ

ರೈಲು ಸೇವೆಗಳು ರದ್ದಾದ ಕಾರಣದಿಂದಾಗಿ ಈಗಾಗಲೇ ಮುಂಗಡವಾಗಿ ಕಾಯ್ದಿರಿಸಲಾದ ಟಿಕೆಟ್​ಗಳ ಶುಲ್ಕವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುತ್ತದೆ. ಹಣವನ್ನು ವಾಪಸ್ಸು ಪಡೆಯುವ ಸಮಯವನ್ನು ಪ್ರಯಾಣದ ದಿನಾಂಕದಿಂದ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಸ್ವಯಂಚಾಲಿತವಾಗಿ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದ್ದು, ಹಾನಿಯನ್ನು ಕಡಿಮೆ ಮಾಡಲು ರೈಲು ಸೇವೆಯನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.