ETV Bharat / bharat

ಭಾರತದಲ್ಲಿ ಕೋವಿಡ್​ 2ನೇ ಅಲೆ ಏಪ್ರಿಲ್​ನಲ್ಲಿ ಮತ್ತಷ್ಟು ಉಲ್ಬಣ: ಎಸ್​​ಬಿಐ ವರದಿ ಎಚ್ಚರಿಕೆ - ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣ

ದೇಶಾದ್ಯಂತ ಲಸಿಕೆ ಅಭಿಯಾನದ ನಡುವೆಯೂ ದಿನದಿಂದ ದಿನಕ್ಕೆ ಹೊಸ ಕೋವಿಡ್​ 19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಫೆಬ್ರವರಿ ಆರಂಭಿಕ ವಾರದಿಂದಲೇ ಪ್ರಕರಣಗಳ ಏರಿಕೆಯನ್ನು ಅಧ್ಯಯನ ಮಾಡಿ ಎಸ್​ಬಿಐ, ಇಂದು ತನ್ನ ವರದಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಸೋಂಕಿನ ಎರಡನೇ ಅಲೆಯು ಸ್ಪಷ್ಟವಾಗಿ ಕಂಡುಬರುತ್ತಿದೆ. ಏಪ್ರಿಲ್ ಮಧ್ಯಂತರದ ವೇಳೆಗೆ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಬಹುದು. ಈಗಿನಿಂದಲೇ ವ್ಯಾಕ್ಸಿನೇಷನ್​ ವೇಗ ಹೆಚ್ಚಿಸಬೇಕು ಎಂದು ತಿಳಿಸಿದೆ.

Covid Wave
Covid Wave
author img

By

Published : Mar 25, 2021, 4:06 PM IST

ನವದೆಹಲಿ: ದೇಶದಲ್ಲಿ ಫೆಬ್ರವರಿ ತಿಂಗಳಿಂದ ದೈನಂದಿನ ಹೊಸ ಕೋವಿಡ್​-19 ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದು ಎರಡನೇ ಅಲೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ. ಫೆಬ್ರವರಿ 15ರಿಂದ ಪರಿಗಣನೆಗೆ ತೆಗೆದುಕೊಂಡರೇ ಎರಡನೇ ಅಲೆಯು 100 ದಿನಗಳ ತನಕ ಇರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವರದಿ ತಿಳಿಸಿದೆ.

ಮಾರ್ಚ್ 23ರವರೆಗೆ ದಾಖಲಾದ ಪ್ರಕರಣಗಳ ಆಧಾರದ ಮೇಲೆ 2ನೇ ಅಲೆಯ ವೇಳೆ ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಸುಮಾರು 25 ಲಕ್ಷವೆಂದು ಅಂದಾಜಿಸಲಾಗಿದೆ ಎಂದಿದೆ.

28 ಪುಟಗಳ ವರದಿಯು ಸ್ಥಳೀಯ ಲಾಕ್‌ಡೌನ್‌ಗಳು ಅಥವಾ ನಿರ್ಬಂಧ ಪರಿಣಾಮಕಾರಿಯಾಗಿಲ್ಲ. ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವನ್ನು ಗೆಲ್ಲುವ ಸಾಮೂಹಿಕ ವ್ಯಾಕ್ಸಿನೇಷನ್ ನಮ್ಮ ಮುಂದೆ ಇರುವ ಏಕೈಕ ಭರವಸೆಯಾಗಿದೆ ಎಂದು ಹೇಳಿದೆ.

ಮೊದಲ ಅಲೆ ಅವಧಿಯಲ್ಲಿನ ನಿತ್ಯದ ಹೊಸ ಪ್ರಕರಣಗಳ ಆಧಾರದ ಮೇಲೆ, ಪ್ರಸ್ತುತ ಹಂತದಿಂದ ಗರಿಷ್ಠ ಮಟ್ಟಕ್ಕೆ ತಲುಪಲು ಎಷ್ಟು ದಿನಗಳು ತೆಗೆದುಕೊಳ್ಳುತ್ತದೆ ಎಂಬುದನ್ನು ಪರಿಗಣಿಸಿದರೆ, ಏಪ್ರಿಲ್ ದ್ವಿತೀಯಾರ್ಧದಲ್ಲಿ ಭಾರತವು ಗರಿಷ್ಠ ಮಟ್ಟ ತಲುಪಬಹುದು ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಭಾರತದಲ್ಲಿ 10 ವರ್ಷದಲ್ಲಿ ಆಗದ್ದನ್ನು ಒಂದು ವರ್ಷದಲ್ಲಿ ಬದಲಾಯಿಸಿದ ಕೊರೊನಾ & ಲಾಕ್​ಡೌನ್!

ಆರ್ಥಿಕ ಸೂಚಕಗಳ ಮೇಲೆ ಕೇಂದ್ರೀಕರಿಸಿದ ಎಸ್‌ಬಿಐ ವರದಿ, ಬಹುತೇಕ ಆವರ್ತನ ಸೂಚಕಗಳ ಆಧಾರದ ಮೇಲೆ ವ್ಯವಹಾರಿಕ ಚಟುವಟಿಕೆಗಳ ಸೂಚ್ಯಂಕ ಕಳೆದ ವಾರದಲ್ಲಿ ಕುಸಿದಿದೆ. ಲಾಕ್‌ಡೌನ್ ಅಥವಾ ಕೆಲವು ರಾಜ್ಯಗಳು ವಿಧಿಸಿರುವ ನಿರ್ಬಂಧಗಳ ಪರಿಣಾಮ, ಮುಂದಿನ ತಿಂಗಳು ಗೋಚರಿಸಬಹುದು ಎಂದು ಹೇಳಿದೆ.

ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸುವಂತೆ ವರದಿ ತಾಕೀತು ಮಾಡಿದೆ. ಪ್ರಸ್ತುತ ವ್ಯಾಕ್ಸಿನೇಷನ್ ಪ್ರಮಾಣವಾದ 34 ಲಕ್ಷದಿಂದ ದಿನಕ್ಕೆ 40-45 ಲಕ್ಷಕ್ಕೆ ಹೆಚ್ಚಿಸಿದರೇ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಚುಚ್ಚುಮದದ್ದು ನೀಡುವುದನ್ನು 4 ತಿಂಗಳಲ್ಲಿ ಪೂರ್ಣಗೊಳಿಸಬಹುದು.

ಭಾರತದಲ್ಲಿ ಒಂದೇ ದಿನದಲ್ಲಿ 53,476 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದು ಐದು ತಿಂಗಳಲ್ಲಿ ಗರಿಷ್ಠ ಏಕದಿನ ಜಿಗಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಕೊರೊನಾ ವೈರಸ್​ನ ಹೊಸ ಡಬಲ್ ರೂಪಾಂತರಿತ ರೂಪಾಂತರವನ್ನು ದೇಶದ 18 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ವಿದೇಶದಲ್ಲಿ ಸಹ ಕಂಡುಬರುವ ಇತರ ಹಲವು ತಳಿಗಳು ಕಳವಳ ಮೂಡಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.